Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್ ಕುಸಿಯುತ್ತಿರುವ ಗುಡ್ಡ, ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರಕ್ಕೆ, ಪುಟ್ಟಣ್ಣ

Posted date: 30 Jan, 2020

Powered by:     Yellow and Red

ಜೆಡಿಎಸ್ ಕುಸಿಯುತ್ತಿರುವ ಗುಡ್ಡ, ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರಕ್ಕೆ, ಪುಟ್ಟಣ್ಣ

ಚನ್ನಪಟ್ಟಣ: ಜೆಡಿಎಸ್ ಕುಸಿಯುತ್ತಿರುವ ಗುಡ್ಡವಾಗಿದ್ದು ಜೆಡಿಎಸ್ ಪಕ್ಷದಿಂದ ಹೊರ ಹೋಗುತ್ತಿರುವವರಲ್ಲಿ ನಾನು ಮೊದಲಿಗನೂ ಅಲ್ಲಾ, ಕೊನೆಯವನು ಅಲ್ಲಾ, ಅತ್ತೆ ಕೊಟ್ಟ ಶಿಕ್ಷೆ ಸೊಸೆಗೆ, ಸೊಸೆ ಕೊಟ್ಟ ಶಿಕ್ಷೆ ಅತ್ತೆಗೆ ಮಾತ್ರ ಗೊತ್ತಿದೆ. ನಾನು ಈ ಬಾರಿ ಬಿಜೆಪಿ ಪಕ್ಷದಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು ನನ್ನ ಶಿಕ್ಷಕ‌ ಬಂಧುಗಳು ಆಶೀರ್ವದಿಸುವ ವಿಶ್ವಾಸವಿದೆ ಎಂದು ಮಾಜಿ ಉಪ ಸಭಾಪತಿ ಪುಟ್ಟಣ್ಣ ಹೇಳಿದರು.

ಅವರು ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಹಲವಾರು ಶಾಲೆಗಳಲ್ಲಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣನವರು  ಚನ್ನಪಟ್ಟಣದಾದ್ಯಂತ ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರವನ್ನು ತಾಲೂಕಿನಾದ್ಯಂತ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು ಬುಧವಾರ ಬೆಳಿಗ್ಗೆ ಶಾಲೆಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶಿಕ್ಷಕರ ಜೊತೆ ಮತಯಾಚನೆ ನಡೆಸಿ ನನ್ನನ್ನು ನೀವು ಮೂರು ಬಾರಿ ಆಯ್ಕೆ ಮಾಡಿದ್ದೀರಿ ಈ ಬಾರಿ ನಾಲ್ಕನೆಯದಾಗಿ ನಿಮ್ಮ ಬಳಿ ಬಂದಿರುವೆ. ನಾನು ವಿಧಾನಪರಿಷತ್ ಸದಸ್ಯರಾದ ದಿನಗಳಿಂದಲೂ ಶಿಕ್ಷಕರ ಯಾವುದೇ ಸಮಸ್ಯೆ ಬಂದರೂ ಕ್ಷಣಾರ್ಧದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಪಟ್ಟು ಅವರ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸಿದ್ದೇನೆ ಎಂದರು.


ನಾನು ವಿಧಾನಪರಿಷತ್ ಸದಸ್ಯರಾದ ಸಂದರ್ಭದಿಂದ ಇಲ್ಲಿಯವರೆಗೂ ಯಾವುದೇ ಅಧಿಕಾರಿ ಬಳಿ ಹಣಕ್ಕಾಗಿ ನಾನು ಕೈ ಚಾಚಿಲ್ಲ. ಯಾವ ಶಿಕ್ಷಕರಿಗೂ ಸುಳ್ಳು ಭರವಸೆ ನೀಡಿಲ್ಲ. ನನ್ನ ಕೈಲಾದಮಟ್ಟಿಗೆ ಶಿಕ್ಷಕರ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಆದ್ದರಿಂದಲೇ ಮೂರು ಬಾರಿ ಕೂಡ ನನ್ನನ್ನು ತಾವುಗಳು ಆಯ್ಕೆ ಮಾಡಿರುತ್ತೀರಿ ಮುಂಬರುವ ಚುನಾವಣೆಯಲ್ಲಿ ಕೂಡ ನನಗೆ ಅತಿ ಹೆಚ್ಚು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಿ ಶಿಕ್ಷಕರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಬೇಕೆಂದು ಶಿಕ್ಷಕ ಸಮುದಾಯದಲ್ಲಿ ಮನವಿ ಮಾಡಿದರು.


ತಾಲ್ಲೂಕು ಪಂಚಾಯತಿ ಮಾಜಿ‌ ಸದಸ್ಯ ಕೆ ಪಿ‌ ಕಾಂತರಾಜು, ಕುವೆಂಪು ವಿದ್ಯಾಲಯದ ಮಹೇಶ್ ಚಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮತ್ತು ಹಲವಾರು ಶಿಕ್ಷಕರು ಜೊತೆಯಲ್ಲಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑