Tel: 7676775624 | Mail: info@yellowandred.in

Language: EN KAN

    Follow us :


ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ಮತ್ತು ತಂಡ

Posted date: 30 Jan, 2020

Powered by:     Yellow and Red

ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ಮತ್ತು ತಂಡ

ಚನ್ನಪಟ್ಟಣ: ನಗರದ ಮಂಗಳವಾರಪೇಟೆ ಯ ವ್ಯಾಪ್ತಿಯ ವಾರ್ಡ್ ನಂ ೦೩ ರ ಮರಳುಹೊಲ ಎಂ ಜಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಂದೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತಹಶಿಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಇಂದು ನೆಲಸಮ ಮಾಡಲಾಯಿತು.


ಹಿನ್ನೆಲೆ;

ಮರಳುಹೊಲ ದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ೧೯೧೪/೪೪೧ ಸರ್ವೇ ನಂಬರಿನಲ್ಲಿ ಎರಡು ಗುಡಿಸಲುಗಳನ್ನು ಸ್ಥಳೀಯ ನಿವಾಸಿಗಳು ಅಕ್ರಮವಾಗಿ ನಿರ್ಮಿಸಿಕೊಂಡಿದ್ದರಿಂದ ಶಾಲಾ ಮಕ್ಕಳು ತೆರಳಲು ಅನಾನುಕೂಲವಾಗಿತ್ತು. ಇದನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜು ಮತ್ತು ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ, ಸ್ಥಳೀಯ ಮುಖಂಡ ಮಂಜು ಸೇರಿದಂತೆ ಅನೇಕರು ಪ್ರಶ್ನಿಸಿದರು ಸಹ ಹಲವಾರು ನಕಲಿ ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರತಿಪಾದಿಸಿಕೊಂಡು ಬರುತ್ತಿದ್ದರು.


ಎಸ್ ಡಿ ಎಂ ಸಿ ಸಮಿತಿ ಮತ್ತು ನಗರಸಭೆಯ ಅಧಿಕಾತಿಗಳು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ ಪ್ರತಿವಾದಗಳ ನಂತರ ನ್ಯಾಯಮೂರ್ತಿ ಅನ್ನಪೂರ್ಣೇಶ್ವರಿ ಯವರು ಗುಡಿಸಲುಗಳು ಅಕ್ರಮವಾಗಿದ್ದು ತೆರವುಗೊಳಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನೆಲಸಮ ಮಾಡಲಾಯಿತು.


*ಇತ್ತೀಚೆಗೆ ನಮ್ಮ ಪತ್ರಿಕೆಯಲ್ಲಿ ಒತ್ತುವರಿದಾರರು, ದೂರು ಮತ್ತು ಶಾಲೆ ಹಾಗೂ ಸುತ್ತ ಮುತ್ತಲಿನ ಪರಿಸರದ ಬಗ್ಗೆ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.*


*ತೆರವು ಸಮಯದಲ್ಲಿ ಕಂದಾಯ, ಶಿಕ್ಷಣ ಮತ್ತು ಆರಕ್ಷಕ ಇಲಾಖೆಯ ಅಧಿಕಾರಿಗಳು ಹಾಜರಿದ್ದು ನಗರಸಭೆಯ ಪೌರಾಯುಕ್ತರ ಗೈರು ಹಾಜರಿ ಎದ್ದು ಕಾಣುತ್ತಿತ್ತು.*


ಕಾರ್ಯಾಚರಣೆ ವೇಳೆಯಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ನಗರ ಠಾಣೆಯ ಪಿಎಸ್ಐ ಧರ್ಮೇಂದ್ರ ಎಸ್ ಡಿ ಎಂ ಸಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑