Tel: 7676775624 | Mail: info@yellowandred.in

Language: EN KAN

    Follow us :


ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್

Posted date: 06 Feb, 2020

Powered by:     Yellow and Red

ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್

ಚನ್ನಪಟ್ಟಣ: ಹಲವಾರು ಪಕ್ಷಗಳ ಸುತ್ತಿ, ರಾಜ್ಯದಲ್ಲಿ ಹೆಸರಿಲ್ಲದ ಪಕ್ಷದಿಂದಲೂ ಸ್ಪರ್ಧಿಸಿ ಗೆದ್ದು ಬಂದಿದ್ದ ಸ್ವತಂತ್ರ ನಾಯಕ, ಮಾಜಿ ಸಚಿವ ಹಾಗೂ ಚನ್ನಪಟ್ಟಣ ದ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ನಾಣ್ಣುಡಿಯಂತೆ ಇತ್ತೀಚೆಗೆ ಕೊನೆಗಳಿಗೆಯಲ್ಲಿ ಕೈ ಕೊಡುತ್ತಲೇ ಇದ್ದು ಅದು ಇಂದು ಸಹ ಸಾಬೀತಾಗಿದೆ.


*ಆಪರೇಷನ್ ಕಮಲದ ಕಟ್ಟಾಳು*


ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಪಕ್ಷ ಸರ್ಕಾರ ರಚಿಸಲು ನಡೆಸಿದ ಆಪರೇಷನ್ ಕಮಲದ ಹಿಂದಿದ್ದ ಕೆಲವೇ ಕೈಗಳಲ್ಲಿ ಒಬ್ಬರಾಗಿದ್ದ ಸಿಪಿವೈ ಗೆ ಹೈಕಮಾಂಡ್ ಒಲವು ಹೆಚ್ಚಿತ್ತಾದರೂ ಮೂಲ ಬಿಜೆಪಿಗರು ಹಾಗೂ ಹಾಲಿ ಶಾಸಕರು ಅಡ್ಡಗಾಲಾಗಿದ್ದರಿಂದ ಹೈಕಮಾಂಡ್ ಬಜೆಟ್ ವರೆಗೆ ಕಾಯುವಂತೆ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.


*ಕೈತುತ್ತು ಜಾರಿ ಕೆಳಕ್ಕೆ*


ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶುರುವಾದ ಸೋಲು, ಹುಣಸೂರಿನ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿಗದ ಟಿಕೇಟ್, ಆಪರೇಷನ್ ಕಮಲದ ನಂತರ ಹಲವು ಬಾರಿ ಕೈ ತಪ್ಪಿದ ಸಚಿವಗಿರಿ ಹೀಗೆ ಸಾಲುಸಾಲಾಗಿ ಸೋಲಿನ ಭೀತಿಯಲ್ಲಿ ಸಿಪಿವೈ ಕಂಗಾಲಾಗಿರುವುದು ನಿಜವಾದರೂ ತಾಳ್ಮೆಯಿಂದಲೇ ಕಾಯುತ್ತಿದ್ದು ಬಜೆಟ್ ನಂತರ ಸಚಿವರಾಗೋದು ಸಿದ್ಧ ಎಂದು ಅಭಿಮಾನಿಗಳ ಆಶಾದಾಯಕವಾಗಿದೆ.


*ಬೆಂಗಳೂರು ಮೈಸೂರು ಹೆದ್ದಾರಿಯ ತುಂಬೆಲ್ಲಾ ಫ್ಲೆಕ್ಸ್ ಬ್ಯಾನರ್*


ಸಿ ಪಿ ಯೋಗೇಶ್ವರ್ ಸಚಿವರಾಗೋದು ಶತ:ಸಿದ್ಧ ಎಂದರಿತ ತಾಲ್ಲೂಕಿನ ಅಭಿಮಾನಿಗಳು, ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ನಗರದಲ್ಲಷ್ಟೇ ಅಲ್ಲದೆ ಬೆಂಗಳೂರು ಮೈಸೂರು ಹೆದ್ದಾರಿಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ ಗಳನ್ನು ಎರಡು ದಿನಗಳಿಂದ ಕಟ್ಟಿದ್ದು, ಹೈಕಮಾಂಡ್ ಸೂಚನೆಯ ಮೇರೆಗೆ ವಲಸಿಗರಿಗೆ ಮಾತ್ರ ಸಚಿವಗಿರಿ ನೀಡಲು ತಾಕೀತಾದ ನಂತರ ನಿರಾಸೆ ಮೂಡಿದ್ದು ಕಾಲಕ್ಕೆ ಅವಕಾಶ ಕೊಟ್ಟು ಚಾತಕ ಪಕ್ಷಿಯಂತೆ ಕಾಯಲು ಸಿದ್ದರಾಗಿದ್ದಾರೆ.


*ನೂತನ ಹತ್ತು ಸಚಿವರು*

ಚನ್ನಪಟ್ಟಣ ಮೂಲದವರಾದ ಎಸ್ ಟಿ‌ ಸೋಮಶೇಖರ, ಶ್ರೀಮಂತ ಪಾಟೀಲ್, ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಡಾ ಸುಧಾಕರ್, ಶಿವರಾಮ ಹೆಬ್ಬಾರ್, ನಾರಾಯಣಗೌಡ, ಆನಂದಸಿಂಗ್, ಗೋಪಾಲಯ್ಯ ಮತ್ತು ಬಿ ಸಿ ಪಾಟೀಲ್ ರು ನೂತನ ಸಚಿವರಾಗಿ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑