Tel: 7676775624 | Mail: info@yellowandred.in

Language: EN KAN

    Follow us :


ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್

Posted date: 07 Feb, 2020

Powered by:     Yellow and Red

ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್

ಬೆಂಗಳೂರು: ೨೦೧೫ ರಲ್ಲಿ ಭಾರಿ ಸದ್ದು ಮಾಡಿ ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದ್ದು, ಸುಳ್ಳು ಮೊಕದ್ದಮೆ ಹೂಡಲು ಕಾರಣಕರ್ತರಾಗಿದ್ದ, ಹತ್ತು ಮಂದಿ ಪೋಲೀಸರ ವಿರುದ್ದ ಸಿಬಿಐ ಕೋಟ್೯ ನಲ್ಲಿ ಚಾಜ್೯ಶೀಟ್ ಸಲ್ಲಿಸಲಾಗಿದೆ.


ಅಂದಿನ ಬೆಂಗಳೂರು ನಗರ ಪೋಲಿಸ್ ವತಿಷ್ಠಾಧಿಕಾರಿ ಅಲೋಕ್ ಕುಮಾರ್ ಮತ್ತು ಲಾಟರಿ ನಿಷೇಧ ದಳದ ಎಸ್ಪಿ ಆಗಿದ್ದ ಧರಣೇಂದ್ರ ರವರು ಅಮಾನತು ಶಿಕ್ಷೆಗೆ ಒಳಗಾದರೆ, ಒಂದಂಕಿ ಲಾಟರಿಯ ಪ್ರಮುಖ ಆರೋಪಿ, ಏಜೆಂಟ್ ಪಾರಿ ರಾಜನ್ ಜೈಲು ಪಾಲಾಗಿದ್ದರು.

ಅಂದಿನ ವಿರೋಧ ಪಕ್ಷಗಳು ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ಇದಾಗಿದ್ದು ಕಿಂಗ್ ಫಿನ್ ಜೊತೆ ಅಧಿಕಾರಿಗಳು ಶಾಮೀಲಾಗಿರುವುದರಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.


ಸರ್ಕಾರವೂ ಮೊದಲು ಸಿಐಡಿ ಗೆ ವಹಿಸಿತ್ತಾದರೂ ನಂತರ ಸಿಬಿಐ ಗೆ ವಹಿಸಲಾಯಿತು. ನಾಲ್ಕು ವರ್ಷಗಳ ಸುಧೀರ್ಘ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಮತ್ತು ಲಾಟರಿ ಏಜೆಂಟ್ ಗೆ ಕ್ಲೀನ್ ಚಿಟ್ ನೀಡಿದ್ದಲ್ಲದೆ ಸುಳ್ಳು ಆರೋಪ ಮಾಡಿದ್ದ ಅಂದಿನ ಐಜಿ ಪದ್ಮನಯನ ಸೇರಿದಂತೆ ಹತ್ತು ಪೋಲೀಸರ ವಿರುದ್ದ ಸಿಬಿಐ ಕೋಟ್೯ನಲ್ಲಿ ಚಾಜ್೯ಶೀಟ್ ಸಲ್ಲಿಸಿದ್ದಾರೆ.


ಅಲೋಕ್ ಕುಮಾರ್ ಮತ್ತು ಧರಣೇಂದ್ರ ರವರು ಖಡಕ್ ಅಧಿಕಾರಿಗಳಾಗಿದ್ದು ಅಲೋಕ್ ಕುಮಾರ್ ಸೇವೆಯಲ್ಲಿದ್ದು, ಧರಣೇಂದ್ರ ರವರು ನಿವೃತ್ತರಾಗಿದ್ದಾರೆ.

ಧರಣೇಂದ್ರ ರವರು ಚನ್ನಪಟ್ಟಣ ದಲ್ಲಿ ಸಬ್ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಅಲ್ಲದೆ ಡಿವೈಎಸ್ಪಿ ಆಗಿಯೂ ಕೆಲಸ ನಿರ್ವಹಿಸಿದ್ದು ಒಳ್ಳೆಯ ಹೆಸರು ಗಳಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


ಯಾವುದೇ ತಪ್ಪು ಮಾಡದೇ ಹದಿನಾಲ್ಕು ತಿಂಗಳುಗಳ ಕಾಲ ಅಮಾನತುಗೊಂಡು ಅಪಮಾನಕ್ಕೆ ಗುರಿಯಾದ, ಅಧಿಕಾರಿಗಳಿಗೆ ನಾಲ್ಕು ವರ್ಷಗಳ ನಂತರ ನ್ಯಾಯ ಸಿಕ್ಕರೂ ಸಹ ಅಂದು ಅವರು ಅನುಭವಿಸಿದ ಅಪಮಾನಕ್ಕೆ ಯಾರೂ ಹೊಣೆಯಾಗುತ್ತಾರೆ, ಕಳೆದು ಹೋದ ಮಾನಕ್ಕೆ ಪ್ರತಿಫಲ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.


ಒಂದನೇ ಆರೋಪಿಯಾಗಿ ನಿವೃತ್ತ ಐಜಿ ಪದ್ಮನಯನ, ಎರಡನೇ ಆರೋಪಿಯಾಗಿ  ಕನಕಲಕ್ಷ್ಮಿ, ಇನ್ನಿತರ ಪೋಲೀಸ್ ಅಧಿಕಾರಿ ಹಾಗೂ ಕಾನ್ಸಟೇಬಲ್ ಗಳಾದ ಜಿ.ಟಿ ರಾಮಸ್ವಾಮಿ, ಸಿ.ಆರ್ ರಂಗನಾಥ, ಲೋಕೇಶ್, ಶ್ರೀಕಂಠ, ರವಿಪ್ರಕಾಶ್, ತಿಪ್ಪೇಸ್ವಾಮಿ, ವೇಣುಗೋಪಾಲ, ರವಿಕುಮಾರ್ ವಿರುದ್ದ ೧೨೦ಬಿ ಕ್ರಿಮಿನಲ್, ಐಪಿಸಿ ೧೬೭, ೧೮೨, ೧೯೩, ೧೯೫, ೨೧೧, ೨೧೮ ರ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑