Tel: 7676775624 | Mail: info@yellowandred.in

Language: EN KAN

    Follow us :


ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

Posted date: 16 Feb, 2020

Powered by:     Yellow and Red

ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

ಚನ್ನಪಟ್ಟಣ:ಫೆ/೧೬/೨೦/ಶನಿವಾರ.


ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮೋಹದಿಂದ ಹೊರಬರಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ನಗರದ ಸಾತನೂರು ರಸ್ತೆಯಲ್ಲಿರುವ *ದಿವ್ಯಚೇತನ ಇಂಗ್ಲೀಷ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ* ಉದ್ಘಾಟಿಸಿ ಮಾತನಾಡಿದರು.


ಶ್ರದ್ಧೆ ಮತ್ತು ಶಿಸ್ತಿನಿಂದ ಸಾಧನೆ ಮಾಡಲು ಸಾಧ್ಯ ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ಅನ್ಯ ವಿಚಾರಗಳಲ್ಲಿ ಆಸಕ್ತಿ ತೋರದೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ದೇಶಿಯ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದರು. *ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಯಂತ್ರಗಳಾಗಿಸದೇ* ಪರಿಪೂರ್ಣ ವ್ಯಕ್ತಿಗಳನ್ನಾಗಿ ಬೆಳೆಸಬೇಕು. ಮಕ್ಕಳಲ್ಲಿ ಬಹುಮುಖ ಪ್ರತಿಭೆಗಳಿದ್ದು ಇದನ್ನು ಗುರುತಿಸಿ ಹೊರತೆಗೆಯುವ ಕೆಲಸಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ವಿನಾಕಾರಣ ಒತ್ತಡ ಹಾಕಿ ಮಕ್ಕಳ ಭವಿಷ್ಯವನ್ನು ತಗ್ಗಿಸಬಾರದು ಎಂದು ಸಲಹೆ ನೀಡಿದರು.


ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ಮಾತನಾಡಿ ಮಕ್ಕಳಲ್ಲಿ ದೇಶ, ಭಾಷೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಆಂಗ್ಲ ಮಾಧ್ಯಮಕ್ಕೆ ಸೇರಿಸಿದ ತಕ್ಷಣ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂದು ಭ್ರಮಿಸಿದೆ ಮಕ್ಕಳನ್ನು ಸ್ವತಂತ್ರವಾಗಿ ವಿಕಸನಗೊಳ್ಳಲು ಬಿಡಿ ಎಂದು ಸಲಹೆ ನೀಡಿದರು.


ಮಕ್ಕಳು ಆಟ ಪಾಠದ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು ಓದುವುದಕ್ಕೆ ಬಡವ-ಶ್ರೀಮಂತ ಎಂಬುದು ಮುಖ್ಯವಲ್ಲ. ವಾತಾವರಣ ಮತ್ತು ಆಸಕ್ತಿ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಧ್ಯಾಪಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಟ್ಟರೆ ಉತ್ತಮ ಪ್ರಜೆಗಳಾಗಬಲ್ಲರು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜು ಕಿವಿಮಾತು ಹೇಳಿದರು.


ಶಾಲಾ ಮಕ್ಕಳು ಅನೇಕ ನೃತ್ಯ ಪ್ರದರ್ಶನಗಳನ್ನು ನೀಡುವುದರ ಮೂಲಕ ಪೋಷಕರ ಮನ ರಂಜಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಮತ್ತು ಕಲ್ಯಾಣ ಇಲಾಖೆಯ ಸುರೇಂದ್ರನಾಥ, ಟ್ರಸ್ಟಿ ಮುದ್ದಣ್ಣ, ಕಾರ್ಯದರ್ಶಿ ವರದರಾಜು, ಪ್ರಾಂಶುಪಾಲೆ ಶಶಿಕಲಾ, ಪಟೇಲ್ ರಾಜು, ಹರಿಪ್ರಸಾದ್, ರಾಜಶೇಖರ್, ಚಲನಚಿತ್ರನಟ ಮುನಿರಾಜು, ವಿಬಿ ಚಂದ್ರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑