Tel: 7676775624 | Mail: info@yellowandred.in

Language: EN KAN

    Follow us :


ನಗರದೇವತೆ ಕೊಲ್ಲಾಪುರದಮ್ಮನಿಗೆ ವಿಶೇಷ ಅಲಂಕಾರ

Posted date: 24 Feb, 2020

Powered by:     Yellow and Red

ನಗರದೇವತೆ ಕೊಲ್ಲಾಪುರದಮ್ಮನಿಗೆ ವಿಶೇಷ ಅಲಂಕಾರ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.


ನಗರ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ದೇವಾಲಯದ ಪ್ರಾಂಗಣ, ಗರ್ಭಗುಡಿಗೆ ಹೂವಿನ ಅಲಂಕಾರ, ಹೊರಾಂಗಣದಲ್ಲಿ ಬೆಳಕಿನ (ಲೈಟಿಂಗ್ಸ್) ಅಲಂಕಾರ ಮಾಡಿದ್ದು ವಿಗ್ರಹಕ್ಕೆ ಹೂವಿನ ಅಲಂಕಾರದ ಜೊತೆಗೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು ಭಕ್ತಾಧಿಗಳು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.


ಜಾಗರಣೆ ಪ್ರಯುಕ್ತ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದರ್ಶಿಸಿದ ಪ್ರತಿ ಭಕ್ತಾದಿಗಳಿಗೂ ಪ್ರಸಾದ ರೂಪದಲ್ಲಿ ಸಮಿತಿ ವತಿಯಿಂದ ಲಡ್ಡು ವಿತರಿಸಲಾಯಿತು.


ಜಾಗರಣೆಯ ಮಾರನೆಯ ದಿನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಿಂ ಲಿಂ ನಾಗರಾಜು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑