Tel: 7676775624 | Mail: info@yellowandred.in

Language: EN KAN

    Follow us :


ಶಿಕ್ಷಣಕ್ಕೆ ಒತ್ತು ನೀಡುತ್ತೇನೆ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿ ಗೆ ಬದ್ಧ ಕುಮಾರಸ್ವಾಮಿ

Posted date: 25 Feb, 2020

Powered by:     Yellow and Red

ಶಿಕ್ಷಣಕ್ಕೆ ಒತ್ತು ನೀಡುತ್ತೇನೆ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿ ಗೆ ಬದ್ಧ ಕುಮಾರಸ್ವಾಮಿ

ಚನ್ನಪಟ್ಟಣ: ಮೂವತ್ತಾರು ಲಕ್ಷ ರೂಪಾಯಿಗಳ ಡೆಸ್ಕ್, ಸುಸಜ್ಜಿತ ಕ್ಯಾಂಟೀನ್ ಮತ್ತು ಕಂಪ್ಯೂಟರ್ ಲ್ಯಾಬ್ ಗೆ ಸಂಬಂಧಿಸಿದ ಪರಿಕರಗಳನ್ನು ಕೊಡಿಸಿ, ಶಿಕ್ಷಣಕ್ಕೆ ಒತ್ತು ನೀಡಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಕ್ಷೇತ್ರದ ಶಾಸಕರು, ಮಾಜಿ ಮುಖ್ಯಮಂತ್ರಿಯೂ ಆದ ಹೆಚ್ ಡಿ ಕುಮಾರಸ್ವಾಮಿ ಯವರು ಘೋಷಿಸಿದರು.

ಅವರು ಇಂದು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ನೀಡುವ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿತರಿಸಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ನನ್ನ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ, ನೀವು ಸಾಲ ಮನ್ನಾ ಮಾಡಿದ್ದರಲ್ಲಿ ಶೇಕಡಾ ೫೦ ರಷ್ಟು ಮಾತ್ರ ತೀರಿದ್ದು ಬಾಕಿ ಹಣ ಮತ್ತು ಬಡ್ಡಿಗಾಗಿ ಬ್ಯಾಂಕ್ ನವರು ಪೀಡಿಸುತ್ತಿದ್ದಾರೆ ಎಂದು, ರಾಷ್ಟ್ರೀಯ ಬ್ಯಾಂಕ್ ನ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಸಾಲ ಮನ್ನಾದ ಪ್ರಕ್ರಿಯೆ ಮುಗಿಸುತ್ತೇನೆ. ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಹ ನನ್ನ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದರು.


ಕಾಲೇಜಿನ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಯೋಜನೆ ಕಾಂಗ್ರೆಸ್ ಪಕ್ಷದ್ದು, ಅವರು ಒಂದು ಸಮುದಾಯಕ್ಕೆ ಮಾತ್ರ ಕೊಡಲು ತೀರ್ಮಾನಿಸಿದ್ದರು, ನಾನು ಮೈಸೂರಿನ ಮಹಾರಾಣಿ ಕಾಲೇಜಿಗೆ ಹೋಗಿದ್ದಾಗ ವಿದ್ಯಾರ್ಥಿಗಳು ನಮಗ್ಯಾಕೆ ಕೊಡುವುದಿಲ್ಲ, ನಮ್ಮನಮ್ಮಲ್ಲಿ ಯಾಕೆ ತಾರತಮ್ಯ ಎಂದು ಪ್ರಶ್ನಿಸಿದರು. ತಕ್ಷಣವೇ ನಾನು ಎಲ್ಲಾ ಮಕ್ಕಳಿಗೂ ವಿತರಿಸಲು ತೀರ್ಮಾನಿಸಿದೆ. ಅದಕ್ಕೆ ವಿಧಾನಸಭೆಯಲ್ಲಿ ಹಲವು ವಾಗ್ಬಾಣಗಳನ್ಮು ಎದುರಿಸಬೇಕಾಯಿತು. ಈಗಿನ ಸರ್ಕಾರ ಮುಂದೆ ಕೊಡುವುದಿಲ್ಲ ಎಂದು ತೀರ್ಮಾನಿಸಿದ್ದಾರೆ, ೧,೦೦೦ ಪಬ್ಲಿಕ್ ಶಾಲೆಗಳನ್ನು ತೆರೆದಿದ್ದರಿಂದ ಗ್ರಾಮೀಣ ಪ್ರದೇಶದವರಿಗೆ ಅನುಕೂಲವಾಗಿದ್ದು ಮುಂದೆ ಇಂತಹ ಶಾಲೆಗಳ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.


ಕಾಲೇಜಿನ ಉಪನ್ಯಾಸಕರು ಕುಮಾರಸ್ವಾಮಿ ಯವರನ್ನು ಹೊಗಳಿದ್ದನ್ನು ಗಮನಿಸಿದ ಕುಮಾರಸ್ವಾಮಿ ಯವರು ನನ್ನ ಕೆಲಸಕ್ಕೆ ಯಾರೂ ಹೊಗಳಬೇಕಾಗಿಲ್ಲ, ನನಗೆ ಮುಜುಗರವಾಗುತ್ತದೆ, ಈ ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯ ಎಂದು ಸಮರ್ಥಿಸಿಕೊಂಡರು. ನಾನು ಹದಿನಾಲ್ಕು ತಿಂಗಳು ಯಾರದೋ ಹಂಗಿನಲ್ಲಿ ಮುಖ್ಯಮಂತ್ರಿಯಾಗಿ ಒತ್ತಡದಿಂದ ಕೆಲಸ ನಿರ್ವಹಿಸಿದೆನಾದರೂ ಉತ್ತಮ ಕೆಲಸ ಮಾಡಿದ್ದೇನೆ. ಮಾಧ್ಯಮಗಳು ಮತ್ತು ಜನರು ಅದನ್ನು ಗುರುತಿಸಿಲಿಲ್ಲ. ಶಿಕ್ಷಣಕ್ಕಾಗಿ ೧,೨೦೦ ಕೋಟಿ ಮೀಸಲಿಟ್ಟಿದ್ದೇನೆ, ಕಣ್ವ ಬಳಿ ನಿರ್ಮಾಣವಾಗುತ್ತಿರುವ ಕೆಎಂಎಫ್ ನಲ್ಲಿ ಕೇವಲ ಐವತ್ತರಿಂದ ಅರವತ್ತು ಮಂದಿಯನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ, ಚನ್ನಪಟ್ಟಣ ಒಂದರಲ್ಲೇ ಐದುನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಹೇಗೆ ಕೆಲಸ ಕೊಡಿಸಲು ಸಾಧ್ಯ ಎಂದು ಮಾರ್ಮಿಕವಾಗಿ ಮಾತನಾಡಿದರು.


ರಾಜ್ಯದಲ್ಲಿ ಪೀಣ್ಯ ಕೈಗಾರಿಕೆ ಸೇರಿದಂತೆ ಶೇಕಡಾ ಐವತ್ತರಷ್ಟು ಕೈಗಾರಿಕೆಗಳು ಮುಚ್ಚಿ ಹೋಗಿವೆ, ದಿನಂಪ್ರತಿ ಕನಿಷ್ಠ ಐವತ್ತು ಮಂದಿ ಕೆಲಸಕ್ಕಾಗಿ ನನ್ನ ಮನೆ ಮುಂದೆ ಬರುತ್ತಾರೆ, ನಿರುದ್ಯೋಗ ಸಮಸ್ಯೆ ಪ್ರಧಾನಿಗೆ ಗೊತ್ತಾಗುತ್ತಿಲ್ಲವೇ ? ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದು ಮುಂದಿನ ಚುನಾವಣೆಯನ್ನು ಗೆಲ್ಲಲು ಅಮೆರಿಕಾ ಭಾರತೀಯ ರ ಓಟನ್ನು ಬಲಪಡಿಸಿಕೊಳ್ಳಲೇ ವಿನಹ ಭಾರತದ ಅಭಿವೃದ್ಧಿಗಲ್ಲ, ಭಾರತೀಯರಿಗೆ ಇದರಿಂದ ಇನ್ನೂರು ಕೋಟಿ ಖರ್ಚಾಯಿತೇ ವಿನಹ ಲಾಭವಿಲ್ಲ, ಆ ದೇಶದ ಉತ್ಪನ್ನಗಳನ್ನು ರಫ್ತು‌‌ ಮಾಡಲು ಹವಣಿಸುತ್ತಿದ್ದು, ಆಮದು ಇಲ್ಲ, ಟ್ರಂಪ್ ಆಗಮನಕ್ಕೆ ಖರ್ಚು ಮಾಡಿದ ಹಣದಲ್ಲಿ ಕನಿಷ್ಠ ಹತ್ತು ಹಳ್ಳಿಗಳನ್ನಾಗಲಿ ಅಥವಾ ಗೋಡೆ ಕಟ್ಟಿ ಮರೆಮಾಚಿದ ಸ್ಲಂ ನ್ನು ಉದ್ದರಿಸಿಬಹುದಾಗಿತ್ತು ಎಂದು ಅಭಿಪ್ರಾಯ ಪಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ವೆಂಕಟೇಶ್ ರವರು ನಮ್ಮ ಕಾಲೇಜು ಮುಂದಿನ ದಿನಗಳಲ್ಲಿ ನ್ಯಾಕ್ (NAAC, ರಾಷ್ಟ್ರೀಯ ಮೌಲ್ಯಾಂಕನ ಪರಿಷತ್ತು)  ಗೆ ಒಳಪಡಲಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಅಲ್ಲದೇ ಕರ್ನಾಟಕ ರಾಜ್ಯದಲ್ಲಿಯೇ ಉತ್ತಮ ಗುಣಮಟ್ಟದ ಕಾಲೇಜಾಗಲಿದ್ದು ಇದು ಮಾನ್ಯ ಕುಮಾರಸ್ವಾಮಿ ಯವರ ಕೊಡುಗೆ ಎಂದರೆ ತಪ್ಪಾಗಲಾರದು ಎಂದರು.


ಇದೇ ವೇಳೆ ಹಳೆಯ ವಿದ್ಯಾರ್ಥಿ ಸಂಘದಿಂದ ಮಾನ್ಯ ಕುಮಾರಸ್ವಾಮಿ ಯವರನ್ನು ಸನ್ಮಾನಿಸಲಾಯಿತು. ಸನ್ಮಾನದ ವೇಳೆಗೂ ಮುನ್ನಾ ಪ್ರಾಧ್ಯಾಪಕರಿಬ್ಬರ ಗುಸುಗುಸು ವಾಗ್ವಾದವೂ ನಡೆದಿದ್ದು ಅಲ್ಲಿದ್ದವರನ್ನು ಚಕಿತಗೊಳಿಸಿತು. ಡಾ ಅಣ್ಣಯ್ಯ ತೈಲೂರು ರವರು ನಿರೂಪಿಸಿದರೆ, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಭರತರಾಜ್ ಸ್ವಾಗತಿಸಿದರು, ಇತಿಹಾಸ ಪ್ರಾಧ್ಯಾಪಕ ಚಿಕ್ಕಚನ್ನಯ್ಯ ನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಒಟ್ಟಾರೆ ಈ ಮೂವರು ಸಹ ಕುಮಾರಸ್ವಾಮಿ ಯವರನ್ನು ಹಾಡಿಹೊಗಳಿ ಮುಖ ಸ್ತುತಿ ಮಾಡಿದ್ದು ಕುಮಾರಸ್ವಾಮಿ ಯವರಿಗೆ ಮುಜುಗರ ತಂದಿದ್ದು ಅವರು ಅದನ್ನು ತಮ್ಮ ಭಾಷಣದಲ್ಲಿಯೂ ಸಹ ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಜಯಮುತ್ತು, ಲಿಂಗೇಶಕುಮಾರ್, ಗೋವಿಂದಳ್ಳಿ‌ ನಾಗರಾಜು ಸೇರಿದಂತೆ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑