Tel: 7676775624 | Mail: info@yellowandred.in

Language: EN KAN

    Follow us :


ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್

Posted date: 27 Feb, 2020

Powered by:     Yellow and Red

ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ಒಂದೇ ಸೂರಿನಡಿ ನಡೆಯುವ ಈ ರೀತಿಯ 

ಅದಾಲತ್‍ಗಳಲ್ಲಿ ತಮ್ಮ ಯಾವುದೇ ರೀತಿಯ 

ಸಮಸ್ಯೆಗಳನ್ನು ಮನವಿ ಮುಖಾಂತರ 

ಬಗೆಹರಿಸಿಕೊಳ್ಳಬೇಕೆಂದು ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ತಿಳಿಸಿದರು.

 

ಅವರು ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ 

ಆಯೋಜಿಸಲಾಗಿದ್ದ ಕಂದಾಯ ಅದಾಲತ್ 

ಕಾರ್ಯಕ್ರಮದಲ್ಲಿ ನೂರಾರು ಮಂದಿಯಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಸ್ವೀಕಾರ ಮಾಡಿ ಮಾತನಾಡಿದರು.

ಪೌತಿಖಾತೆ, ಸಂಧ್ಯಾ ಸುರಕ್ಷಾ, ಪಿ.ಎಚ್.ಪಿ. ಮನಸ್ವಿನಿ, ವೃದ್ಯಾಪ್ಯವೇತನ ಹಾಗೂ ಹಲವಾರು ರೀತಿಯ ಮಾಸಾಶನಗಳನ್ನು ಪಡೆಯುತ್ತಿರುವ ಹಾಗೂ ಹೊಸದಾಗಿ ಅರ್ಜಿ ಹಾಕುವವರು ಯಾವುದೇ ರೀತಿಯ ಮದ್ಯವರ್ತಿಗಳ ಹಾವಳಿಗೆ ಒಳಗಾಗದೆ ನೇರವಾಗಿ ನಮ್ಮ ಇಲಾಖೆಯ ಅಧಿಕಾರಿಗಳ ಮಖಾಂತರ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕೆಂದರು.


ತಮ್ಮ ಇಲಾಖೆಯ ಸಿಬ್ಭಂದಿಗಳಾಗಲಿ, ಇಲ್ಲ ಅಧಿಕಾರಿ ವರ್ಗದವರಾಗಲಿ ತಮ್ಮ ಬಳಿ ಯಾವುದೇ ರೀತಿಯಲ್ಲಿ ಲಂಚದ ರೂಪದಲ್ಲಿ ಹಣವನ್ನು ಕೇಳಿದರೆ ನಮಗೆ ಖುದ್ದಾಗಿ ಇಲ್ಲ ಲಿಖಿತದ 

ಮುಖಾಂತರ ದೂರು ನೀಡುವಂತೆ ತಿಳಿಸಿದರು.

ನಿಮ್ಮ ಗ್ರಾಮಗಳಲ್ಲಿ ಅಂದರೆ ಗ್ರಾಮ 

ಪಂಚಾಯ್ತಿಗಳಲ್ಲಿ ಆಗಾಗ್ಗೆ ಈ ರೀತಿಯ ಅದಾಲಾತ್‍ಗಳನ್ನು ಮಾಡಲಾಗುತ್ತಿದ್ದು, ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು ತಮ್ಮ ಯಾವುದೇ ರೀತಿಯ ಸಮಸ್ಯೆಗಳನ್ನು 

ದೈರ್ಯದಿಂದ ಹೇಳಿಕೊಳ್ಳುವಂತೆ ತಿಳಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ 

ನೂರಾರು ಗ್ರಾಮಸ್ಥರ ತಮ್ಮ ಹಲವಾರು ರೀತಿಯ 

ತಾಲ್ಲೂಕು ಕಚೇರಿಗೆ ಸಂಬಂಧಿಸಿದ ಹಾಗೂ ಇತರ 

ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ 

ತಾಲ್ಲೂಕು ದಂಡಾಧಿಕಾರಿಗಳಲ್ಲಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ.ಪಿ.ರಾಜೇಶ್ ಮಾತನಾಡಿ ತಾಲ್ಲೂಕು ಕಚೇರಿಯೇ ನಿಮ್ಮ ಬಳಿಗೆ ಬಂದು ನಿಮ್ಮ ನೂರಾರು ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೇ ತಮ್ಮ 

ಸಮಸ್ಯೆಯನ್ನು ಬಗೆಹರಿಸುತ್ತಿರುವುದು 

ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮಳೂರು ನಾಡಕಚೇರಿಯ 

ಶಿರಸ್ತೇದಾರ ಯೋಗೇಶ್, ಕಂದಾಯ ನಿರೀಕ್ಷಕ 

ಲಕ್ಷ್ಮಣ್, ಗ್ರಾಮದ ಕೃಷ್ಣ, ಅಧಿಕಾರಿವರ್ಗದ ನಾಗರಾಜು ಹಾಗೂ ಹಲವಾರು ಮಂದಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑