Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅಧಿಕಾರಿಗಳ ಕೈಯ್ಯಲ್ಲಿದೆ ನಾರಾಯಣಸ್ವಾಮಿ

Posted date: 01 Mar, 2020

Powered by:     Yellow and Red

ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅಧಿಕಾರಿಗಳ ಕೈಯ್ಯಲ್ಲಿದೆ ನಾರಾಯಣಸ್ವಾಮಿ

ಚನ್ನಪಟ್ಟಣ: ಸರ್ಕಾರಗಳು ನೀಡುವ ಅನುದಾನಗಳನ್ನು ಸಂಬಂಧಿಸಿದ ಅಧಿಕಾರಿಗಳು ವಿವೇಚನೆಯಿಂದ ಬಳಸಿಕೊಂಡರೆ ಆಯಾಯ ಸಂಸ್ಥೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಾದ ನಾರಾಯಣಸ್ವಾಮಿ ಯವರು ಅಭಿಪ್ರಾಯ ಪಟ್ಟರು.

ಅವರು ನಗರದ ಮಹದೇಶ್ವರ ನಗರದಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ಪುರುಷರ ವಿದ್ಯಾರ್ಥಿ ನಿಲಯದಲ್ಲಿನ ಕಂಪ್ಯೂಟರ್ ಕೊಠಡಿ ಯನ್ನು ಉದ್ಘಾಟಿಸಿ ಮಾತನಾಡಿದರು.


ಈ ಹಾಸ್ಟೆಲ್ ನಲ್ಲಿ ಶಿಸ್ತು ಎನ್ನುವುದು ಹಾಸುಹೊಕ್ಕಾಗಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ನೂರು ಮಂದಿ ಇರುವ ಈ ಹಾಸ್ಟೆಲ್ ಗೆ ಇನ್ನೊಂದು ಕಟ್ಟಡದ ಅವಶ್ಯಕತೆ ಇದ್ದು ಇಂದಿನ ವಿಸ್ತರಣಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೇ ೧೫೦ ರಿಂದ ೨೦೦ ಮಂದಿಗೆ ಅವಕಾಶ ಕಲ್ಪಿಸಿಕೊಡಬಹುದು ಎಂದರು.


ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾಧಿಕಾರಿ ಕುಮಾರ್ ಮಾತನಾಡಿ ಈ ಹಿಂದೆ ಹಾಸ್ಟೆಲ್ ಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಹಾಡಿಹೊಗಳಿರುವುದು ನಿಜವಾಗಿಯೂ ಹೆಮ್ಮೆ ಎನಿಸಿದೆ. ತಾಲ್ಲೂಕಿನ ಒಟ್ಟಾರೆ ಉತ್ತೀರ್ಣತೆಯಲ್ಲಿ ನಮ್ಮ ಹಾಸ್ಟೆಲ್ ನ ವಿದ್ಯಾರ್ಥಿಗಳು ಶೇಕಡಾವಾರು ಪ್ರಮಾಣದಲ್ಲಿ ಉತ್ತೀರ್ಣರಾಗುತ್ತಿದ್ದು ನಿಲಯ ಪಾಲಕ ಮೋಹನ್ ರವರಿಗೆ ಈ ಶ್ರೇಯಸ್ಸು ಸಲ್ಲಬೇಕು ಎಂದರು.


ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಬಿ ಎಂ ಹೊನ್ನಪ್ರಭು, ಅನುರಾಧ, ಬಾಲಕರ ಸ ಪ ಪೂ ಕಾಲೇಜಿನ ಉಪನ್ಯಾಸಕ ಕೆ ರಾಮು ಮತ್ತು ಸಾ ಪ ಪೂ ಕಾಲೇಜಿನ ಉಪನ್ಯಾಸಕ ಶಿವರಾಮ ಭಂಡಾರಿ ಯವರು ಹಾಸ್ಟೆಲ್ ನ ಮಕ್ಕಳಿಗೆ ಉಪನ್ಯಾಸ ನೀಡಿದರು.

ಇದೇ ವೇಳೆ ಅನುರಾಧ ರವರು ಕಳೆದ ಬಾರಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗೆ ೨,೦೦೦ ರೂ ನಗದು ಬಹುಮಾನ ನೀಡಿ ಉತ್ತೇಜಿಸಿದರು.


ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಜಿಲ್ಲಾ ಅಧಿಕಾರಿಗಳಾದ ಪಿ ಬಿ ಬಸವರಾಜು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ ಪ್ರ ದ ಕಾಲೇಜಿನ ಉಪನ್ಯಾಸಕ ಕೆ ಎಂ ಮಾಯಿಗೇಗೌಡ ಮತ್ತು ಎಂ ಜಿ ಭರತ್ ರಾಜ್ ಮತ್ತು ನಿಲಯಪಾಲಕ ಎನ್ ಮೋಹನ್ ರವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑