Tel: 7676775624 | Mail: info@yellowandred.in

Language: EN KAN

    Follow us :


ಬೇಕಾಬಿಟ್ಟಿ ಕಾಮಗಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯ

Posted date: 04 Mar, 2020

Powered by:     Yellow and Red

ಬೇಕಾಬಿಟ್ಟಿ ಕಾಮಗಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯ

ಚನ್ನಪಟ್ಟಣ: ರಸ್ತೆಯಲ್ಲಿ ಡಾಂಬರಿಕರಣ ಮಾಡಲು ಇಷ್ಟಬಂದ ರೀತಿಯಲ್ಲಿ ಅಗೆದು ಜೆಲ್ಲಿಹಾಕಿ ಬಿಟ್ಟಿರುವ ಪರಿಣಾಮ, ದ್ವಿಚಕ್ರವಾಹನ ಸವಾರರು ಬಿದ್ದು 

ಗಂಭೀರ ಗಾಯಗೊಂಡು ಒಂದು ಕಣ್ಣನ್ನು  ಕಳೆದುಕೊಂಡಿರುವ ಘಟನೆ, ಅಕ್ಕೂರುಪೊಲೀಸ್ ಠಾಣಾ ವ್ಯಾಪ್ತಿಯ ತಾಲ್ಲೂಕಿನ  ಅಕ್ಕೂರುಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.


ಜಲ್ಲಿರಸ್ತೆಯಲ್ಲಿ ಬಿದ್ದು ಗಂಭೀರ ಗಾಯವಾಗಿ ಕಣ್ಣು ಕಳೆದುಕೊಂಡಿರುವ ವ್ಯಕ್ತಿ ವೆಂಕಟೇಶ್ ಎಂದು ಹೇಳಲಾಗಿದ್ದು,  ತಾಲ್ಲೂಕಿನ ಮೋಳೆ ಗ್ರಾಮದ ಈತ ಅಕ್ಕೂರು ಗ್ರಾಮದಲ್ಲಿ ಪತ್ನಿಮಕ್ಕಳ ಜೊತೆ ವಾಸವಾಗಿದ್ದರು.ಗಾರೆ ಕೆಲಸ ಮಾಡುವ ವೆಂಕಟೇಶ್ ಹಾಗೂ ಆತನ ಸ್ನೇಹಿತನ ಜೊತೆ ತಮ್ಮ ದ್ವಿಚಕ್ರವಾಹನದಲ್ಲಿ ಬರುವಾಗ ರಸ್ತೆಯಲ್ಲಿ ಹರಡಿರುವ ಜಲ್ಲಿಯಿಂದ, ಮುಂದಕ್ಕೆ ಚಲಿಸಲಾಗದೆ ಆಯ ತಪ್ಪಿ ಇಬ್ಬರು ಜಲ್ಲಿಯ ಮೇಲೆ ಬಿದ್ದಿದ್ದಾರೆ.ಬಿದ್ದ ರಭಸಕ್ಕೆ ಇಬ್ಬರಿಗೂ ಮುಖಕ್ಕೆ ಹಾಗೂ ಕೈಕಾಲಿಗೆ ತೀವ್ರಗಾಯವಾಗಿದ್ದು, ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ ಅವರನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ವೆಂಕಟೇಶ್ ಎಂಬುವರನ್ನು ತಪಾಸಣೆ ನಡೆಸಿದ ವೈದ್ಯರು ಆತನ ಎಡಗಣ್ಣಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆನ್ನಲ್ಲಾಗಿದೆ.


ಗ್ರಾಮದ ಬನ್ನಿಮರದಿಂದ ಪ್ರಾರಂಭವಾಗಿ ಅಕ್ಕೂರು ಪೊಲೀಸ್ ಠಾಣೆವರೆಗೂ ಅಂದರೆ ಒಂದು ಕಿಲೋಮೀಟರ್ ಡಾಂಬರಿಕರಣಕ್ಕೆ ಜಲ್ಲಿ ಹೊಡೆದು ಹದ ಮಾಡುವ ಕಾಯಕದಲ್ಲಿರುವ ಗುತ್ತಿಗೆದಾರ, ಒಂದು ಕಡೆ ವಾಹನ ಚಲಿಸಲು ಸಮರ್ಪಕವಾದ ಸ್ಥಳವಕಾಶ ಮಾಡಿಕೊಡದೆ, ಇಷ್ಟಬಂದ ರೀತಿಯಲ್ಲಿ ರಸ್ತೆ 

ತುಂಬಾ ಜಲ್ಲಿ ಹರಡಿ ಈ ರೀತಿಯಾಗಿ ಪ್ರಯಾಣಿಕರಿಗೆ ಸಂಚಕಾರ ತಂದಿದ್ದಾರೆ.ಗಾರೆಕೆಲಸ ಮಾಡಿಕೊಂಡು ಹೆಂಡತಿ 

ಮಕ್ಕಳನ್ನು ಸಾಕುತ್ತಿದ್ದ ಗಾರೆವೆಂಕಟೇಶ್‍ಗೆ ಈ ರೀತಿಯಾಗಿ ಸಂಭವಿಸಿದ ಘಟನೆಯಿಂದ ಕಣ್ಣು ಕಾಣದ ಸ್ಥಿತಿಗೆ ಹೋಗಿದ್ದು, ಆತನ ಕುಟುಂಬ ಬೀದಿಪಾಲಾಗಲಿದೆ. ಬೇಜಾವಾಬ್ದಾರಿ ಕಾಮಗಾರಿ 

ನಡೆಸುತ್ತಿರುವ ಪಿ.ಡಬ್ಲ್ಯೂ.ಡಿ ಇಲಾಖೆ ಹಾಗೂ ಗುತ್ತಿಗೆದಾರರ ಮೇಲೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.


ಕಳೆದ ಎರಡು ವಾರಗಳಿಂದ ಇಲ್ಲಿ ರಸ್ತೆ ಡಾಂಬರಿಕರಣ ನಡೆಯುತ್ತಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಅಂಬಾಡಿಹಳ್ಳಿ ಹಾಗೂ ಇಗ್ಗಲೂರು ಮಾರ್ಗದ ರಸ್ತೆಯಾಗಿರುವುದರಿಂದ ಸಾವಿರಾರು ಪ್ರಯಾಣಿಕರು ಇದೇ ಮಾರ್ಗವನ್ನು ಅವಂಬಿಸಿದ್ದಾರೆ.ರಸ್ತೆ ಡಾಂಬರಿಕರಣದ ಸಂದರ್ಭದಲ್ಲಿ ಒಂದು ಕಡೆ ವಾಹನಗಳಿಗೆ ಅನುವು ಮಾಡಿಕೊಟ್ಟು ನಂತರ ಮತ್ತೊಂದು ಕಡೆ ಕಾಮಗಾರಿ ನಡೆಸುವ ನಿಯಮವಿದೆಯಾದರೂ ಇಲ್ಲಿ ಯಾವುದೇ ನಿಯಮವನ್ನು ಪಾಲಿಸದೆ ಇಷ್ಟಬಂದ ರೀತಿಯಲ್ಲಿ ಜಲ್ಲಿಗಳನ್ನು ಹೊಡೆದು ರಸ್ತೆ ಡಾಂಬರಿಕರಣ ಮಾಡುತ್ತಿರುವುದರಿಂದ, ದ್ವಿಚಕ್ರವಾಹನ ಸವಾರರಿಗೆ ನರಕಯಾತನೆಯ ಅನುಭವವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑