Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೭೨: ಯಾವ ಗಾಯ ಬೇಗನೇ ವಾಸಿಯಾಗದು ?

Posted date: 05 Mar, 2020

Powered by:     Yellow and Red

ತಾಳೆಯೋಲೆ ೧೭೨: ಯಾವ ಗಾಯ ಬೇಗನೇ ವಾಸಿಯಾಗದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಯಾವ ಗಾಯ ಬೇಗನೇ ವಾಸಿಯಾಗದು ?


ಶರೀರಕ್ಕೆ ತಗುಲಿದ ಗಾಯ ಬೇಗನೇ ವಾಸಿಯಾಗುತ್ತದೆ. *ಆದರೆ ಮನಸ್ಸಿಗೆ ಆದ ಗಾಯ  ವಾಸಿಯಾಗುವುದಕ್ಕೆ ಬಹಳ ಕಾಲ ಬೇಕಾಗುತ್ತದೆ.* ಆದ್ದರಿಂದ ನಮ್ಮ ಪೂರ್ವಿಕರು ಯೋಚಿಸಿ ಮಾತನಾಡಬೇಕೆಂದು, ನಿರ್ಲಕ್ಷ್ಯವಾದ ಮತ್ತು ಅಡೆತಡೆಯಿಲ್ಲದ ಮಾತುಗಳನ್ನು ಮಾತನಾಡಬಾರದೆಂದು ಹೇಳಿರುವರು. *ಮಾತಿಗಿರುವ ಮೊನಚು, ಕತ್ತಿಗೂ ಇರುವುದಿಲ್ಲ.* ಮನುಷ್ಯನ ಮನಸ್ಸನ್ನು ಮಾತು ಬದಲಾಯಿಸಬಹುದು ಎನ್ನುವ ನಿಜವನ್ನು ನಾವು ಇಲ್ಲಿ ಸ್ಮರಿಸಬಹುದು.


ಕಠಿಣತ್ವವಿರುವ ಮಾತಿನಲ್ಲಿ ಬೆಂಕಿ ಇಲ್ಲದಿದ್ದರೂ ಆದ ಇತರರ ಮನಸ್ಸನ್ನು ಸುಡುತ್ತದೆ. ಶರೀರದ ಭಾಗವೊಂದು ಆಕಸ್ಮಿಕವಾಗಿ ಸುಟ್ಟರೆ ಕೆಲವು ದಿನಗಳಾದ ನಂತರ ಅದು ವಾಸಿಯಾಗುತ್ತದೆ. ಆದರೆ ಮಾತುಗಳಿಂದ ವ್ಯಕ್ತಿಯೊಬ್ಬನ ಆತ್ಮಾಭಿಮಾನವು ಸುಟ್ಟು ಹೋದರೆ ಅದು ವಾಸಿಯಾಗಲು ಬಹಳ ಕಾಲ ತೆಗೆದುಕೊಳ್ಳಬಹುದು ಅಥವಾ ವಾಸಿಯಾಗದೆಯೇ ಇರಬಹುದು.


ಮಾತು ಜಾರಿದರೆ ತುಂಬ ಪ್ರಮಾದಕರವಾದುದು, *ಯಾರನ್ನು ಉದ್ದೇಶಿಸಿ ತಪ್ಪಾಗಿ ಮಾತು ಜಾರುವವೋ ಅವರು ಶಾಶ್ವತ ಶತ್ರುಗಳಾಗಿ ಬದಲಾಯಿಸಬಹುದು. ಬಿಲ್ಲಿನಿಂದ ಬಾಣವನ್ನು ಬಿಟ್ಟು ಮತ್ತು ಅದನ್ನು ಪಡೆಯಲು ಸಾಧ್ಯವಿಲ್ಲ.* ಆದ್ದರಿಂದ ಮಾತಿನ ವಿಷಯದಲ್ಲಿ ನಾವು ಸದಾ ಜಾಗರೂಕರಾಗಿರಬೇಕು. ಬಾಯಿ ಒಳ್ಳೆಯದಾಗಿದ್ದರೆ ಊರೆಲ್ಲ ಒಳ್ಳೆಯದೆ, ಎನ್ನುವ ಗಾದೆಯನ್ನು ನಾವು ಮರೆಯಬಾರದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑