Tel: 7676775624 | Mail: info@yellowandred.in

Language: EN KAN

    Follow us :


ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ

Posted date: 07 Mar, 2020

Powered by:     Yellow and Red

ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ

ರಾಮನಗರ: ವಿಕಲಚೇತನರಿಗೆ ಯಾವುದೋ ಒಂದು ಅಂಗ ಮಾತ್ರ ಊನವಾಗಿದ್ದು ನಮಗಿಂತಲೂ ಹೆಚ್ಚಿನ ಬುದ್ದಿವಂತರಾಗಿರುತ್ತಾರೆ. ನಮ್ಮ ಮುಂದಿರುವ ಅಂಧ ವಿದ್ಯಾರ್ಥಿಗಳು ಕೇವಲ ಕುರುಡರಾಗಿದ್ದು ವಿಶೇಷ ಬುದ್ದಿಯುಳ್ಳವರಾಗಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

ಅವರು ಜಗದ್ಗುರು ಶ್ರೀ ಬಾಲಗಂಗಾಧರನಾಥಸ್ವಾಮಿ ಅಂಧರ ಉಚಿತ ವಸತಿಯುತ ಶಾಲೆಯಲ್ಲಿ ಗಣಿಬಾಧಿತ ಪ್ರದೇಶ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಯೋಜನೆಯಡಿ ಬಿಡುಗಡೆಯಾಗಿರುವ ಹದಿನೈದು ಲಕ್ಷ ಮೊತ್ತದಲ್ಲಿ ಅಂಧ ವಿದ್ಯಾರ್ಥಿಗಳು ಆಟವಾಡಲು ಆಟದ ಸಾಮಾಗ್ರಿಗಳನ್ನು ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.


ವಿಕಲಚೇತನರಲ್ಲಿ ವಿಶೇಷ ಬುದ್ದಿಮತ್ತೆಯಿದ್ದು ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನೊಂದಿಗೆ ಸಹಾಯ ಹಸ್ತ ಚಾಚಿದರೆ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಬಲ್ಲರು ಎಂದು ಶ್ಲಾಘಿಸಿದರು.

ಅಂಧ ವಿದ್ಯಾರ್ಥಿಗಳಿಗೆ ಬೇಕಾದ ಸವಲತ್ತುಗಳನ್ನು ಆದ್ಯತೆ ಮೇರೆಗೆ ಒದಗಿಸಿಕೊಡಲು ಶ್ರಮವಹಿಸುತ್ತೇನೆ ಎಂದು ಇದೇ ವೇಳೆ ಅವರು ತಿಳಿಸಿದರು.


ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಉಪನಿರ್ದೇಶಕರಾದ  ಶ್ರೀಮತಿ ಸುಮಿತ್ರರವರು ಹಾಗೂ ಸಿಬ್ಬಂದಿಗಳು, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷರಾದ ಶ್ರೀ ರಾಜಶೇಖರ್,  ಎ.ಪಿ.ಎಂ.ಸಿ ಅಧ್ಯಕ್ಷರಾದ ದೊರೆಸ್ವಾಮಿ, ಜೆ.ಡಿ.ಎಸ್ ವಕ್ತರರಾದ ಉಮೇಶ್, ಮಂಜುನಾಥ್, ಶಾಲೆಯ ಪ್ರಾಂಶುಪಾಲರಾದ ಶ್ರೀ ಶಿವರಾಮಯ್ಯ.ಪಿ. ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑