Tel: 7676775624 | Mail: info@yellowandred.in

Language: EN KAN

    Follow us :


ಇಗ್ಗಲೂರು ಶಾಲೆಯನ್ನು ಪ್ರಶಂಸಿಸಿ ಹತ್ತನೇ ತರಗತಿಯ ಮಕ್ಕಳಿಗೆ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿ

Posted date: 11 Mar, 2020

Powered by:     Yellow and Red

ಇಗ್ಗಲೂರು ಶಾಲೆಯನ್ನು ಪ್ರಶಂಸಿಸಿ ಹತ್ತನೇ ತರಗತಿಯ ಮಕ್ಕಳಿಗೆ ಶುಭಾಶಯ ತಿಳಿಸಿದ ಜಿಲ್ಲಾಧಿಕಾರಿ

ಚನ್ನಪಟ್ಟಣ:ಎಸ್.ಎಸ್.ಎಲ್ .ಸಿ ಮಕ್ಕಳಿಗೆ ಆಲ್ ದ ಬೆಸ್ಟ್ ಹೇಳಿದ ಜಿಲ್ಲಾಧಿಕಾರಿ; ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಇಗ್ಗಲೂರು ಗ್ರಾಮ ಪಂಚಾಯ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆ ಮುಗಿದ ನಂತರ ಇಗ್ಗಲೂರು ಪ್ರೌಢಶಾಲೆಗೆ ಭೇಟಿ ನೀಡಿ ಹತ್ತನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಚರ್ಚಿಸಿದರು.

ಮಕ್ಕಳು ಸಿಲಬಸ್ ಪೂರ್ಣವಾಗಿದ್ದು, ಮಾದರಿ ಪ್ರಶ್ನಪತ್ರಿಕೆಗಳನ್ನು ಪಡೆದು ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದರು. ಮಕ್ಕಳನ್ನು ವಿಷಯದ ಬಗ್ಗೆ ವಿಚಾರಿಸಿ ನಿಮಗೆ ಯಾವ ವಿಷಯ ಕಠಿಣವಾಗುತ್ತಿದೆ ? ಯಾವ ವಿಷಯ ಸುಲಭವಾಗಿ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿ ತಿಳಿದುಕೊಂಡರು. ನಂತರ ಉತ್ತಮ ಫಲಿತಾಂಶದೊಂದಿಗೆ ಎಲ್ಲಾ ಮಕ್ಕಳು ಉತ್ತೀರ್ಣರಾಗಿ, ಆಲ್ ದ ಬೆಸ್ಟ್ ಎಂದು ಹೇಳಿ ಶುಭ ಹಾರೈಸಿದರು.


*ಬಿಸಿ ಊಟದ ಬಗ್ಗೆ ವಿಚಾರಿಸಿದ ಅಪರ ಜಿಲ್ಲಾಧಿಕಾರಿ*


ಜನಸಂಪರ್ಕ ಸಭೆ ಮುಗಿದ ನಂತರ ಇಗ್ಗಲೂರು ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿ ಊಟದ ಬಗ್ಗೆ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರು ವಿಚಾರಿಸಿದರು‌.

ಮಕ್ಕಳು ರುಚಿ ಹಾಗೂ ಶುಚಿಯಾದ ಊಟ ದೊರಕುತ್ತಿದೆ. ಮಕ್ಕಳು ಶಾಲೆಯಲ್ಲಿ ತಮ್ಮ ಹೆಸರಿನಲ್ಲಿ ಒಂದೊಂದು ಗಿಡ ಪೋಷಿಸಿದ್ದು, ಇದನ್ನು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ತಮ್ನ ಕಿರಿಯ ತರಗತಿಯವರಿಗೆ ಹಸ್ತಾಂತರ ಮಾಡುತ್ತೇವೆ ಎಂದರು.

ಮಕ್ಕಳು ಅಪರ ಜಿಲ್ಲಾಧಿಕಾರಿಗಳನ್ನು ಸರ್ ತಮ್ಮ ಪರಿಚಯ ಮಾಡಿಕೊಡಿ ಎಂದರು. ಅಪರ ಜಿಲ್ಲಾಧಿಕಾರಿಗಳು ಮಕ್ಕಳೊಂದಿಗೆ ಬೆರತು ತಮ್ಮ ಪರಿಚಯ ಹಾಗೂ ಕೆಲಸದ ವಿವರವನ್ನು ಸಹ ವಿವರಿಸಿದರು.


*ಶಾಲೆಯ ಕೈತೋಟದ ಪ್ರಶಂಸಿದ ಜಿ.ಪಂ.ಸಿ.ಇ.ಒ*


ಶಾಲಾ ಆವರಣದಲ್ಲಿ ಬೆಳೆಸಿರುವ ಕೈತೋಟದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಇಕ್ರಂ ರವರು ಪ್ರಶಂಸೆ ವ್ಯಕ್ತ ಪಡಿಸಿದರು.

ಶಾಲಾ ಮಕ್ಕಳು ಕೈತೊಳೆಯುವ ನೀರನ್ನು ಸಂಗ್ರಹಿಸಿ ಮರಳು, ಇದ್ದಿಲು ಬಳಸಿ ಶುದ್ಧೀಕರಸಿ ಹನಿ ನೀರವಾರಿ ಪದ್ಧತಿ ಯನ್ನು ಅನುಸರಿಸಿ ಕೈತೋಟಕ್ಕೆ ನೀಡಲಾಗುತ್ತಿದೆ. ಇದನ್ನು ಎಲ್ಲಾ ಶಾಲೆಗಳಲ್ಲೂ ಅನುಸರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ನಂತರ ಅಧಿಕಾರಿಗಳು ಮಕ್ಕಳೊಂದಿಗೆ ನೆಲದಲ್ಲಿ ಕುಳಿತು ಬಿಸಿಯೂಟ ಸವಿದರು.

ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ತಮ್ಮ ಶಾಲೆಯ ಆವರಣದಲ್ಲಿ ಬೆಳೆದ ಔಷಧೀಯ ಗುಣಗುಳುಳ್ಳ ಸಸ್ಯಗಳು, ಬಿಸಿಯೂಟಕ್ಕೆ ಬೇಕಾದ ಸಸ್ಯಗಳು, ಬೃಹದಾಕಾರವಾಗಿ ಬೆಳೆಯುವರಗಳು ಸೇರಿದಂತೆ ವಿವಿಧ ರೀತಿಯ ಫಲಪುಷ್ಪಗಳ ಗಿಡಗಳನ್ನು ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟರು. ಶಾಲೆಯ ಕೈತೋಟಕ್ಕೆ ಬೇಕಾದ ಗೊಬ್ಬರವನ್ನು ತಾವೇ ತಯಾರಿಸುವುದನ್ನು ತೋರಿಸಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾದರು.


ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑