Tel: 7676775624 | Mail: info@yellowandred.in

Language: EN KAN

    Follow us :


ಮನೆಯಲ್ಲೇ ಎಣ್ಣೆ ತಯಾರಿಸಿಕೊಳ್ಳುವ ಯಂತ್ರ ಕೃಷಿ ಇಲಾಖೆಯಲ್ಲಿ ಲಭ್ಯ ಅಪರ್ಣಾ

Posted date: 13 Mar, 2020

Powered by:     Yellow and Red

ಮನೆಯಲ್ಲೇ ಎಣ್ಣೆ ತಯಾರಿಸಿಕೊಳ್ಳುವ ಯಂತ್ರ ಕೃಷಿ ಇಲಾಖೆಯಲ್ಲಿ ಲಭ್ಯ ಅಪರ್ಣಾ

ಚನ್ನಪಟ್ಟಣ: ಮನೆಯಲ್ಲೇ ಕಡಲೆಕಾಯಿ ಬೀಜ, ಸೂರ್ಯಕಾಂತಿ ಬೀಜ ಸೇರಿದಂತೆ ಹಲವಾರು ಎಣ್ಣೆ ಬೀಜಗಳಿಂದ ಮನೆಯಲ್ಲಿಯೇ ಎಣ್ಣೆ ತೆಗೆಯುವ ಯಂತ್ರವನ್ನು ಕೃಷಿ ಇಲಾಖೆಯ ಅಧಿಕಾರಿ ಅಪರ್ಣಾ ರವರು ಇಂದು ನಡೆದ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪ್ರದರ್ಶನಕ್ಕಿಟ್ಟು ಮಾಹಿತಿ ನೀಡಿದರು.


ಮನೆಯಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಿಕ್ಸಿ ರೀತಿಯಲ್ಲಿ ಉಪಯೋಗಿಸಬಹುದಾದ ಈ ಯಂತ್ರದಲ್ಲಿ ಶುದ್ದವಾದ ಎಣ್ಣೆ ಹಾಗೂ ಉಳಿದ ಹಿಂಡಿಯೂ ಸಹ‌ ಲಭ್ಯವಾಗುತ್ತದೆ. ಈ ಯಂತ್ರವೂ (Table Top Mini Expeller) ೦೫೦ ಹೆಚ್ ಪಿ ಯಿಂದ ೦.೬೭ ಹೆಚ್ ಪಿ ಇದ್ದು ಕಂಪನಿಯ ಬೆಲೆ ೩೪,೦೦೦ ರೂಪಾಯಿಗಳಿದೆ. ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ, ಸಾಮಾನ್ಯ ವರ್ಗದವರಿಗೆ ಎಂಟು ಸಾವಿರದ ಐದುನೂರು ರೂಪಾಯಿಗಳು  ಹಾಗೂ ಪರಿಶಿಷ್ಟ ಜನಾಂಗದವರಿಗೆ ಮೂರು ಸಾವಿರದ ನಾಲ್ಕುನೂರು ರೂಪಾಯಿಗಳಿಗೆ ದೊರೆಯಲಿದೆ ಎಂದು ತಿಳಿಸಿದರು.


೩, ೫, ೭/೫ ಮತ್ತು ೧೦ ಹೆಚ್ ಪಿ ಯ ಯಂತ್ರಗಳು ಸಹ ಲಭ್ಯವಿದ್ದು ೧,೦೦,೦೦೦ ರೂಪಾಯಿಗಳ ವರೆಗೆ ಸಬ್ಸಿಡಿ ದೊರೆಯಲಿದೆ.

ಯಂತ್ರವನ್ನು ಪಡೆಯಲಿಚ್ಚಿಸುವ ಫಲಾನುಭವಿಗಳು ಎರಡು ಪಾಸ್‌ಪೋರ್ಟ್ ಸೈಜ್ ನ ಪೋಟೋಗಳು, ಪಹಣಿ, ೨೦ ರೂಪಾಯಿಗಳ ಬಾಂಡ್ ಪೇಪರ್ ಆಧಾರ್ ಕಾಡ್೯ ಮತ್ತು ಬ್ಯಾಂಕ್ ನ ಪಾಸ್ ಬುಕ್ ಪ್ರತಿಯನ್ನು ಕೃಷಿ ಅಧಿಕಾರಿಗಳ ಕಛೇರಿ ಚನ್ನಪಟ್ಟಣ ಇಲ್ಲಿಗೆ ಸಲ್ಲಿಸಿ ಪಡೆದುಕೊಳ್ಳುವಂತೆ ತಿಳಿಸಿದರು.


ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ನವರು ಮಾತನಾಡಿ ಈ ಯಂತ್ರವು ಸಣ್ಣ ರೈತರಿಗೆ ಬಹುಪಯೋಗಿ ಯಂತ್ರವಾಗಿದ್ದು ಮನೆಗೆ ಬೇಕಾದ ಎಲ್ಲಾ ರೀತಿಯ ಎಣ್ಣೆಯನ್ನು ತಾವೇ ತಯಾರಿಸಿಕೊಳ್ಳುವುದರ ಜೊತೆಗೆ ಆರೋಗ್ಯದಾಯಕ ಎಣ್ಣೆಯನ್ನು ತಾವೇ ತಯಾರಿಸಿಕೊಳ್ಳಬಹುದು. ಎಲ್ಲರೂ ಇಲಾಖೆಯ ವತಿಯಿಂದಲೇ ಖರೀದಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑