Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

Posted date: 13 Mar, 2020

Powered by:     Yellow and Red

ಕೊರೋನಾ ವೈರಸ್ ನೂರಕ್ಕೂ ಹೆಚ್ಚು ಜನ ಸೇರುವ ಸಭೆ ಸಮಾರಂಭ ಒಂದು ವಾರ ಬಂದ್

ಬೆಂಗಳೂರು: ಹಲವಾರು ದೇಶಗಳಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ನಾಡಿಗೂ ಕಾಲಿಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ನಾಳೆಯಿಂದ ಒಂದು ವಾರ ರಾಜ್ಯದಾದ್ಯಂತ ಯಾವುದೇ ಸಭೆ ಹಾಗೂ ಸಾರ್ವಜನಿಕ ಸಮಾರಂಭ ನಡೆಸುವಂತಿಲ್ಲ ಎಂದು ಆದೇಶಿಸಿದೆ.


ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ, ಎಲ್ಲಾ ಮಾಲ್, ಚಿತ್ರಮಂದಿರ, ಜಾತ್ರೆ, ಮದುವೆ, ಹುಟ್ಟುಹಬ್ಬ, ಸಾರ್ವಜನಿಕ ಸಭೆ, ಎಕ್ಸಫೋ ಸೇರಿದಂತೆ ನೂರು ಜನ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.


ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿಶ್ವವಿದ್ಯಾಲಯಗಳು ಬಂದ್ ಆಗಲಿದ್ದು, ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.

ಮುಂದಿನ ವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆ ಮುಂದೂಡಿಕೆಯಾಗಲಿದೆ. ಎಸ್ ಎಸ್ ಎಲ್ ಸಿ ಇತರೆ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಐಟಿಬಿಟಿ ಯವರಿಗೆ ಮನೆಯಿಂದಲೇ  ಕೆೆೆಲಸಲ ನಿಿರ್ವವಹಿಸಲು ಸೂಚನೆ ನೀಡಿದ್ದೇವೆ. ಅಧಿವೇಶನ ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದರು.


ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸಬಾರದು. ಹೊರದೇಶದಿಂದ ಬರುವ ಜನರ ಮೇಲೆ ನಿಗಾ ಇಡಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ, ಪರೀಕ್ಷೆ, ಪ್ರತ್ಯೇಕ ಕೊಠಡಿ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.


ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದ್ದು ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...


ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑