Tel: 7676775624 | Mail: info@yellowandred.in

Language: EN KAN

    Follow us :


ನಾಳೆಯಿಂದ ಆರಂಭವಾಗಬೇಕಿದ್ದ ೭,೮,೯ ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದ ಪ್ರೌಢ ಶಿಕ್ಷಣ ಆಯುಕ್ತರು

Posted date: 15 Mar, 2020

Powered by:     Yellow and Red

ನಾಳೆಯಿಂದ ಆರಂಭವಾಗಬೇಕಿದ್ದ ೭,೮,೯ ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದ ಪ್ರೌಢ ಶಿಕ್ಷಣ ಆಯುಕ್ತರು

ಬೆಂಗಳೂರು/ರಾಮನಗರ:ಮಾ/೧೫/೨೦/ಭಾನುವಾರ.

ರಾಜ್ಯದಾದ್ಯಂತ ನಾಳೆಯಿಂದ ಮಾಚ್೯ ೧೬/೨೦ ರ ಸೋಮವಾರದಿಂದ ಆರಂಭಗೊಳ್ಳಬೇಕಾಗಿದ್ದ ೭, ೮ ಮತ್ತು ೯ ತರಗತಿಯ ಪರೀಕ್ಷೆಗಳನ್ನು ಕರೋನಾ ವೈರಸ್ ನ ಅಟ್ಟಹಾಸದ ಮುನ್ನೆಚ್ಚರಿಕೆಯಾಗಿ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ (ಪ್ರೌಢ) ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಆಯುಕ್ತರ ಆದೇಶದ ಮೇರೆಗೆ ರಾಮನಗರ‌ ಜಿಲ್ಲೆಯ ನಾಲ್ಕೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಹಾಗೂ ರಾಜ್ಯಪಠ್ಯಕ್ರಮ, ಸಿ ಬಿ ಎಸ್ ಸಿ, ಐ ಸಿ ಎಸ್ ಸಿ ಎಲ್ಲಾ ಪಠ್ಯಕ್ರಮದ ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಸಿ ಆರ್ ಪಿ, ಬಿ ಆರ್ ಪಿ, ಐ ಇ ಆರ್ ಟಿ, ಇ ಸಿ ಓ ಹಾಗೂ ಶಾಲೆಯ ಮುುಖ್ಯ ಶಿಕ್ಷಕರಿಗೆ ಆದೇಶಿಸಲಾಗಿದೆ ಎಂದು ಡಿಡಿಪಿಐ ಸೋಮಶೇಖರ್ ಅವರು ತಿಳಿಸಿದ್ದಾರೆ.


ಮಾರಕ ಕರೋನ ವೈರಸ್ ಹರಡುವಿಕೆಯಿಂದ ಮಕ್ಕಳನ್ನು ದೂರವಿಡುವ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢ ನಿರ್ದೇಶಕರು ದಿನಾಂಕ ೧೪/೦೩/೨೦ ರಂದು ಹೊರಡಿಸಿರುವ ತುರ್ತು ಆದೇಶದ ಅನುಸಾರ ದಿನಾಂಕ ೧೬/೦೩/೨೦ ರಿಂದ ೭ ನೇ ತರಗತಿ ಮೌಲ್ಯಂಕನ ಪರೀಕ್ಷೆಗಳು, ೮ ಹಾಗೂ ೯ ನೇ ತರಗತಿ ಪರೀಕ್ಷೆಗಳು  ಆರಂಭವಾಗಬೇಕಿತ್ತು. ಆದರೆ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಕರೋನಾ ವೈರಸ್ ಹಬ್ಬ ಬಹುದು ಎಂಬ ಮುಂಜಾಗ್ರತೆಯಿಂದ ದಿನಾಂಕ ೩೧/೦೩/೨೦ ರ ವರೆಗೆ ಸದರಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. *ಪರಿಷ್ಕೃತ ವೇಳಾಪಟ್ಟಿಯನ್ನು ಮುಂದೆ ತಿಳಿಸಲಾಗುವುದು.* ಆದ್ದರಿಂದ ಯಾವುದೇ ರೀತಿಯ ಪರೀಕ್ಷೆಗಳು ೭, ೮ ಮತ್ತು ೯ ನೇ  ತರಗತಿಯ ಮಕ್ಕಳಿಗೆ ನಾಳೆಯಿಂದ ಆರಂಭವಾಗುವುದಿಲ್ಲ. *೧೦ ನೇ ತರಗತಿಯ ಪರೀಕ್ಷೆ ನಿಗದಿತ ವೇಳಾಪಟ್ಟಿ ಪ್ರಕಾರ ನಡೆಯಲಿದೆ.* ಇದರ ಬಗ್ಗೆ ಸೂಕ್ತ ಕ್ರಮ ಮತ್ತು ಪ್ರಚಾರವನ್ನು ತಮ್ಮ ಹಂತದಲ್ಲಿ ಮಾಡಲು ಈ ಮೂಲಕ ತಿಳಿಸಿದೆ.


ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ರವರು ಸಹ ಈ ಮೇಲಿನ ಆದೇಶದ ಪ್ರತಿಯನ್ನು ತಾಲ್ಲೂಕಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ತಲುಪಿಸಿ ಆದೇಶವನ್ನು ಪಾಲಿಸಲು ಸೂಚಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑