Tel: 7676775624 | Mail: info@yellowandred.in

Language: EN KAN

    Follow us :


ವಿಜೃಂಭಣೆಯಿಂದ ನೆರವೇರಿದ ಸುಳ್ಳೇರಿ ಪಟ್ಟದಲಮ್ಮ ದೇವಿ ಕೊಂಡ

Posted date: 15 Mar, 2020

Powered by:     Yellow and Red

ವಿಜೃಂಭಣೆಯಿಂದ ನೆರವೇರಿದ ಸುಳ್ಳೇರಿ ಪಟ್ಟದಲಮ್ಮ ದೇವಿ ಕೊಂಡ

ಚನ್ನಪಟ್ಟಣ: ತಾಲ್ಲೂಕಿನ ಸುಳ್ಳೇರಿ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಪಟ್ಟಲದಮ್ಮ ದೇವಿಯ ಕೊಂಡ ಮಹೋತ್ಸವವು ಶನಿವಾರ ಬೆಳಿಗ್ಗೆ ೦೬:೩೦ ಸುಮಾರಿನಲ್ಲಿ ದೇವಿಯ ಕರಗಹೊತ್ತ ಅರ್ಚಕ ಕೊಂಡವನ್ನು ಪ್ರವೇಶಿಸಿ ಯಶಸ್ವಿಯಾಗಿ ಹಾಯ್ದು ಬಂದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಭಕ್ತರು ಹರ್ಷೋದ್ಗಾರ ಮೊಳಗಿಸುವ ಮೂಲಕ ಕೊಂಡೋತ್ಸವದ ಯಶಸ್ವಿಯನ್ನು ಸಾಕ್ಷೀಕರಿಸಿದರು.


ಕೊಂಡೋತ್ಸವಕ್ಕೂ ಮುನ್ನಾ ಗ್ರಾಮದ ಕೆರೆಯ ಬಳಿ ಗಂಗೆಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪೂಜಾಕುಣಿತ, ತಟಮಟೆ ನಗಾರಿಗಳ ಜತೆಗೆ ನೂರಾರು ಸಂಖ್ಯೆಯಲ್ಲಿ ಹೆಂಗಳೆಯರು ತಂಬಿಟ್ಟಿನ ಆರತಿಯೊಂದಿಗೆ ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ಮೆರುಗು ಹೆಚ್ಚಿಸಿದರು.


ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಇಡೀ ಗ್ರಾಮವು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತಿತ್ತು. ಕೊಂಡೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಬಂಡಿ ಹಾಗೂ ಯಳವಾರ ಸೇವೆಗಳು ನಡೆದವು. ಶನಿವಾರ ಸಂಜೆ ದೇವಿಯ ರಥೋತ್ಸವ ನಡೆಯಿತು.


ಸರಳ ಜಾತ್ರೆ: ಕೊರೋನ ಸೋಂಕಿನ ಬಿಸಿ ಪಟ್ಟಲದಮ್ಮ ಜಾತ್ರ ಮಹೋತ್ಸವಕ್ಕೂ ತಟ್ಟಿದೆ. ಭಾನುವಾರ ನಡೆಯಬೇಕಿದ್ದ ದೇವಿಯ ಜಾತ್ರೆ ಹಾಗೂ ಸಿಡಿ ಉತ್ಸವ ತಾಲೂಕು ಆಡಳಿತದ ಸೂಚನೆಯ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ದೇವಾಲಯದ ಯಜಮಾನರು ತೀರ್ಮಾನಿಸಿದ್ದಲ್ಲದೆ ಜಾತ್ರೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑