Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಎಲ್ಲಾ ಸಂಘಗಳು ಒಗ್ಗೂಡಿ ಹೋರಾಟ ನಡೆಸಿದರೆ ಫಲಪ್ರದವಾಗಲಿದೆ, ಹಿರಿಯ ನಾಗರೀಕ ಎಂ ಸಿ ಮಲ್ಲಯ್ಯ

Posted date: 16 Mar, 2020

Powered by:     Yellow and Red

ತಾಲ್ಲೂಕಿನ ಎಲ್ಲಾ ಸಂಘಗಳು ಒಗ್ಗೂಡಿ ಹೋರಾಟ ನಡೆಸಿದರೆ ಫಲಪ್ರದವಾಗಲಿದೆ, ಹಿರಿಯ ನಾಗರೀಕ ಎಂ ಸಿ ಮಲ್ಲಯ್ಯ

ಚನ್ನಪಟ್ಟಣ: ಹಿರಿಯ ನಾಗರೀಕರ ಆರೋಗ್ಯ ದೃಷ್ಟಿಯಿಂದ ಹಾಗೂ ವಯಸ್ಸಿಗೆ ಅನುಗುಣವಾಗಿ ಕೆಲವು ಆಟಗಳನ್ನು ಏರ್ಪಡಿಸುತ್ತೇವೆ. ನಮ್ಮ ಸಂಘದಲ್ಲಿ ಎಲ್ಲರೂ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದರ ಜೊತೆಗೆ ಲೋಪವಾಗದಂತೆ ಕೆಲಸ ನಿರ್ವಹಿಸುತ್ತೇವೆ. ತಾಲ್ಲೂಕಿನಲ್ಲಿ ಹಲವಾರು ಸಂಘಸಂಸ್ಥೆಗಳು ಇದ್ದು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದರೇ ತಾಲೂಕಿನ ಹಿತದೃಷ್ಟಿಯಿಂದ ಉಪಯೋಗವಾಗಲಿದೆ. ಯಾವುದೇ ಸಂಘಸಂಸ್ಥೆಗಳು ಹೋರಾಟ ಮತ್ತು ಜನಪರ ಕೆಲಸಗಳಿಗೆ ನಮ್ಮ ಸಂಘದ ಬೆಂಬಲ ಇರಲಿದೆ ಎಂದು ಎಂ ಸಿ ಮಲ್ಲಯ್ಯ ನವರು ತಿಳಿಸಿದರು.

ಅವರು ಇಂದು ನಗರದ ಪಾರ್ವತಿ ಟಾಕೀಸ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ರಿಕ್ರಿಯೇಷನ್ ಅಸೋಸಿಯೇಷನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಹಿರಿಯ ನಾಗರೀಕರ ರಿಕ್ರಿಯೇಷನ್ ಅಸೋಸಿಯೇಷನ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಸು ತ ರಾಮೇಗೌಡ ಮಾತನಾಡಿ ನಗರದಲ್ಲಿ ವಯಸ್ಕರಿಗೆ ಇಂತಹ ಒಂದು ಅಸೋಸಿಯೇಷನ್ ಅವಶ್ಯಕತೆ ಇದ್ದು, ಈಗ ಈಡೇರಿದೆ. ಗಾಂಧಿ ಭವನ, ಕೊಲ್ಲಾಪುರದಮ್ಮ ದೇವಾಲಯ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕುಳಿತು ಕಾಲ ಕಳೆಯುತ್ತಿದ್ದವರಿಗೆ ಅನೇಕ ರೀತಿಯ ಉಪಯುಕ್ತತೆ ಇರುವ ಈ ಜಾಗ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.


ಹಿರಿಯ ನಾಗರೀಕರಿಗೆ ತಾಲ್ಲೂಕು ಆಡಳಿತ ಅಥವಾ ನಗರಸಭೆಯೇ ಈ ಕೆಲಸ ಮಾಡಬಹುದಾಗಿತ್ತು. ಅನೇಕ ಉದ್ಯಾನವನಗಳನ್ನು ನಿರ್ಮಿಸಿದರೇ ಮತ್ತಷ್ಟು ಅನುಕೂಲವಾಗುತ್ತಿತ್ತು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಅನೇಕ ಜನಪರ ಕೆಲಸಗಳನ್ನು ಮಾಡಲಿ‌ ಎಂದು ಆಶೀಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ನಿವೃತ್ತ ಶಿಕ್ಷಕ ಬೆಟ್ಟಯ್ಯ ಮಾತನಾಡಿ ನಮ್ಮ ಸಂಘದಲ್ಲಿ ಕೇವಲ ನಿವೃತ್ತರಲ್ಲದೆ ಅರವತ್ತು ವರ್ಷ ತುಂಬಿದ ಹಿರಿಯ ನಾಗರೀಕರೆಲ್ಲರೂ ಒಂದೆಡೆ ಸೇರಲು ಅವಕಾಶ ಕಲ್ಪಿಸುವ ಸಂಘವಾಗಿದೆ. ಬಹುತೇಕ ಶಿಕ್ಷಕರೇ ಇರುವುದರಿಂದ ಮಕ್ಕಳಿಗೆ, ಪರಿಸರಕ್ಕೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುವ ಮೂಲಕ ನಾವು‌ತೊಡಗಿಸಿಕೊಳ್ಳುತ್ತೇವೆ ಎಂದರು.


ಕಸಾಪ ಜಿಲ್ಲಾಧ್ಯಕ್ಷ ಸಿಂಲಿಂ ನಾಗರಾಜು ಮಾತನಾಡಿ ನಮ್ಮಲ್ಲಿ ಏನಾದರೂ ಕೆಲಸವಾಗಬೇಕಾದರೆ ಧರಣಿ, ಸತ್ಯಾಗ್ರಹ ಹಮ್ಮಿಕೊಂಡು ಫಲ ಪಡೆಯಬೇಕಾಗಿದೆ. ಹಿರಿಯ ನಾಗರೀಕರಿಗೆ ಸವಲತ್ತುಗಳನ್ನು ಒದಗಿಸುವ ಇಚ್ಚಾಶಕ್ತಿ ಜನಪ್ರತಿನಿಧಿಗಳಿಗಿಲ್ಲ. ಹಾಗಾಗಿ ಎಲ್ಲರೂ‌ ಒಗ್ಗೂಡಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಉತ್ತಮ ಎಂದರು.

ಈ ಅಸೋಸಿಯೇಷನ್ ಗೆ ನಾನು ಪ್ರತಿನಿತ್ಯ ಒಂದು ದಿನಪತ್ರಿಕೆಯನ್ನು ಹಾಗೂ ಕೆಲ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತೇನೆ ಎಂದರು.


ಕಕಜವೇ ರಾಜ್ಯಾಧ್ಯಕ್ಷ ರಮೇಶಗೌಡ ಮಾತನಾಡಿ ಹಿರಿಯ ನಾಗರೀಕರು ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಭರವಸೆಯನ್ನು ಇಟ್ಟುಕೊಂಡಿದ್ದೀರಿ. ಯುವಕರನ್ನು ನಾಚಿಸುವಂತೆ ಕೆಲಸ ಮಾಡಲು ಮುಂದಡಿಯಿಟ್ಟಿರುವುದು ಶ್ಲಾಘನೀಯವಾಗಿದ್ದು ಯುವ ಪೀಳಿಗೆಗೆ ಮಾದರಿಯಾಗಿದ್ದೀರಿ. ನಿಮ್ಮ ಆರೋಗ್ಯ ಕಾಳಜಿಯುಳ್ಳ ಮುಂದಿನ ಕಾರ್ಯಕ್ರಮಗಳು ತಮ್ಮ ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು ಇನ್ನೂ ಹೆಚ್ಚಿನ ಆರೋಗ್ಯವಂತರಾಗಲಿ ಎಂದು ಆಶೀಸಿದರು.


ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಮುನಿರಾಜು ಮಾತನಾಡಿ ನಮ್ಮ ಸಂಘದ ಹೆಸರಿನಲ್ಲಿ ಪ್ರತಿ ತಿಂಗಳು ಐದು ಮಂದಿ ರೈತರಿಗೆ ಇಪ್ಪತ್ತೈದು ಮೊಟ್ಟೆಯ ರೇಷ್ಮೆ ಚಾಕಿಯನ್ನು ಉಚಿತವಾಗಿ ನೀಡುವುದರ ಜೊತೆಗೆ ಒಂದು ದಿನ ಪತ್ರಿಕೆಯನ್ನು ಕೊಡುವುದಾಗಿ ಘೋಷಿಸಿದರು. 


ಪತ್ರಕರ್ತ ಎಂ ಶಿವಮಾದು, ಹಾಗೂ ಚಂದ್ರು ರವರು ಮಾತನಾಡಿದರು. ಇದೇ ವೇಳೆ ಕಟ್ಟಡದ ಮಾಲೀಕರಾದ ಎನ್ ಚಂದ್ರಶೇಖರ್ ಬಾಬು ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಅಸೋಸಿಯೇಷನ್ ನ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡ ಸಿದ್ದರಾಮು, ಅನೇಕ ಸಂಘಸಂಸ್ಥೆಗಳ ಒಡನಾಡಿ ಬಿ ಎನ್ ಕಾಡಯ್ಯ, ಶ್ರೀನಿವಾಸಯ್ಯ,

ಅನೇಕ ಇಲಾಖೆಯ ನಿವೃತ್ತ ಅಧಿಕಾರಿಗಳು ಮತ್ತು ಹಿರಿಯ ನಾಗರೀಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑