Tel: 7676775624 | Mail: info@yellowandred.in

Language: EN KAN

    Follow us :


ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು

Posted date: 28 Mar, 2020

Powered by:     Yellow and Red

ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು

ಕರ್ತವ್ಯ ನಿರತ ಪೋಲಿಸರಿಗೆ ನೀರು ನೀಡುತ್ತಿರುವ ಕೃಷ್ಣಮೂರ್ತಿ

ಚನ್ನಪಟ್ಟಣ:ಮಾ/೨೭/೨೦/ಶುಕ್ರವಾರ.ನಗರದ ಹೊರವಲಯದಲ್ಲಿ ಕೂಲಿಗಾಗಿ ವಲಸೆ ಬಂದು ಗುಡಿಸಲು ಹಾಕಿಕೊಂಡಿರುವವರಿಗೆ, ಬಾಗಿಲು ಮುಚ್ಚಿದ ದೇವಾಲಯದ ಬಳಿಯ ಭಿಕ್ಷುಕರಿಗೆ, ದಾರಿಯಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಖಾಯಿಲೆಯವರಿಗೆ ನಗರದ ಕೆಲ ಯುವಕರು ಗುಂಪು ಮಾಡಿಕೊಂಡು ಊಟದ ವ್ಯವಸ್ಥೆ ಮಾಡಿ ಹಂಚಿಕೆ ಮಾಡುವ ಮೂಲಕ ಮಾನವೀಯತೆ ಮೆರೆದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಚನ್ನಪಟ್ಟಣ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ಅಕ್ಕಿ, ಬೇಳೆ ಮತ್ತು ತರಕಾರಿಗಳನ್ನು ಪ್ಯಾಕ್ ಮಾಡಿ ವಲಸೆ ಬಂದು, ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಬಳಿ ನೆಲೆಸಿರುವ ದಿನಗೂಲಿ ನೌಕರರಿಗೆ ವಿತರಿಸಿದರು.


ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಮತ್ತು ಆಸರೆ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸಹ ನಗರದಲ್ಲಿನ ನಿರ್ಗತಿಕರಿಗೆ ಎರಡು ವೇಳೆ ತಲಾ ಮೂವತ್ತೈದು ಮಂದಿಗೆ ಊಟದ ವ್ಯವಸ್ಥೆ ಮಾಡಿದರು. ನಗರದ ಮೇದರ ಬೀದಿ, ನಿಂಬೆಹಣ್ಣು ವೃತ್ತ, ಬಸ್ ನಿಲ್ದಾಣದಲ್ಲಿ ಹಸಿದು ಕುಳಿತಿದ್ದ ನಿರ್ಗತಿಕರಿಗೆ ನೀಡಿ ಮಾನವೀಯತೆ ಮೆರೆದರು.


ಒಳಿತು ಮಾಡು ಮನುಷಾ ಎಂಬ ಸಂಘದ ಸಮಾನ ಮನಷ್ಕರ ಯುವಕರು ಸಹ ಸ್ವಯಂ ಅಡುಗೆ ತಯಾರಿಸಿ ನಗರವೂ ಸೇರಿದಂತೆ ಹೊರವಲಯದಲ್ಲಿನ ಕೆಂಗಲ್ ದೇವಾಲಯ, ಜಾನಪದ ಲೋಕ, ಬಸ್ ಮತ್ತು ರೈಲು ನಿಲ್ದಾಣದ ನಿರ್ಗತಿಕರಿಗೆ, ಕೆಲ ಪ್ರವಾಸಿಗರಿಗೆ ಮತ್ತು ಭಿಕ್ಷುಕರಿಗೆ ಊಟವನ್ನು ಬಡಿಸಿ ಹೃದಯವಂತಿಕೆ ಮೆರೆದರು.


ನಗರದ ಬಿಸ್ಲೇರಿ ವಾಟರ್ ಏಜೆನ್ಸಿಯ ಎಲೆಕೇರಿ ಕೃಷ್ಣಮೂರ್ತಿ (ಏರ್ಟೆಲ್ ಕಿಟ್ಟಿ) ನಗರ ಮತ್ತು ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಹಾಗೂ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರಿಗೆ ತಲಾ ಒಂದು ಲೀಟರ್ ನೀರು ನೀಡುವ ಮೂಲಕ ಪೋಲೀಸರ ದಣಿವಾರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑