Tel: 7676775624 | Mail: info@yellowandred.in

Language: EN KAN

    Follow us :


ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ

Posted date: 29 Mar, 2020

Powered by:     Yellow and Red

ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ

ರಾಮನಗರ:ಮಾ/೨೯/೨೦/ಭಾನುವಾರ. ರಾಮನಗರ ಜಿಲ್ಲೆಯಲ್ಲಿ ಕೋರೋನಾ ವೈರಸ್ (ಕೊವೀಡ್-೧೯) ತಡೆಗಟ್ಟುವ ಸಲುವಾಗಿ ರಾಮನಗರ ಜಿಲ್ಲೆಯಾದ್ಯಂತ ಮಾ ೩೧ ರವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಿರುತ್ತಾರೆ.


ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಮಾರಾಟ, ಹಂಚಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾ ವಿಭಾಗ ಮತ್ತು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿರುತ್ತದೆ.


ರಾಮನಗರ ತಾಲ್ಲೂಕಿಗೆ ಅಬಕಾರಿ ನಿರೀಕ್ಷಕರಾದ ಎಂ.ಎಸ್. ಪೂರ್ಣಿಮಾ ಮೊ.ನಂ. ೯೪೪೯೫೯೭೨೭೫, ಅಬಕಾರಿ ಉಪ ನಿರೀಕ್ಷಕರಾದ ಆರ್. ಪ್ರದೀಪ್ ಮೊ.ನಂ. ೭೭೯೫೮೧೮೫೧೮ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಉತ್ವಲ ಮಂಜುನಾಥ ಮೊ.ನಂ. ೭೭೯೫೭೧೭೪೯೦, 


ಚನ್ನಪಟ್ಟಣ ತಾಲ್ಲೂಕಿಗೆ ಅಬಕಾರಿ ನಿರೀಕ್ಷಕರಾದ ಸುನಿಲ್ ಡಿ. ಮೊ.ನಂ. ೯೪೪೯೫೯೭೨೭೩ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಸುರೇಶ್ ಕುಮಠೆ ಮೊ.ನಂ. ೮೫೫೩೦೭೦೦೦೭,


ಕನಕಪುರ ತಾಲ್ಲೂಕಿಗೆ ಅಬಕಾರಿ ನಿರೀಕ್ಷಕರಾದ ಕೆ. ಶ್ರೀನಿವಾಸ ಮೊ.ನಂ. ೯೪೪೯೫೯೭೨೭೨, ಅಬಕಾರಿ ಉಪ ನಿರೀಕ್ಷಕರಾದ ಬಿ.ಕೆ. ರಾಜೇಂದ್ರ ಮೊ.ನಂ. ೯೪೪೮೨೧೮೦೭೪ .


ಮಾಗಡಿ ತಾಲ್ಲೂಕಿಗೆ  ಅಬಕಾರಿ ಉಪ ನಿರೀಕ್ಷಕರಾದ ಶಿವು ಭಾವಿಕಟ್ಟಿ ಮೊ.ನಂ. ೯೪೪೯೫೯೭೨೭೪, ಅಬಕಾರಿ ಉಪ ನಿರೀಕ್ಷಕರಾದ ನಾಗರಾಜು ಮೊ.ನಂ. ೮೯೫೧೧೩೦೮೦೨ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಶರಣಮ್ಮ ಆಡಿವಪ್ಪ ಭಜಂತ್ರಿ ಮೊ.ನಂ. ೬೩೬೨೨೧೬೭೦೬ ಅವರನ್ನು ನೇಮಿಸಲಾಗಿದೆ.


ರಾಮನಗರ ಉಪ ವಿಭಾಗಕ್ಕೆ ಅಬಕಾರಿ ಉಪ ಅಧೀಕ್ಷಕರಾದ ಪ್ರಕಾಶ್ ಪಾಟೀಲ್ ಮೊ.ನಂ. ೯೪೪೯೫೯೭೦೩೨ ಹಾಗೂ ಅಬಕಾರಿ ನಿರೀಕ್ಷಕರಾದ ಚಂದ್ರಶೇಖರ್ ಮೊ.ನಂ. ೯೪೪೯೫೯೭೦೩೩ ಅವರನ್ನು ನೇಮಿಸಲಾಗಿದೆ.


ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಮಾರಾಟ, ಹಂಚಿಕೆ ಮತ್ತು ಸಾಗಾಣಿಕೆಯನ್ನು ಮಾಡುವುದು ಕಂಡುಬಂದಲ್ಲಿ ರಚಿಸಲಾಗಿರುವ ತಂಡಗಳಿಗೆ ಮತ್ತು ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಸ್, ರಾಮನಗರ ಜಿಲ್ಲೆ, ರಾಮನಗರ ರವರ ಕಛೇರಿ ದೂರವಾಣಿ ಸಂಖ್ಯೆ ೦೮೦-೨೭೨೭೧೦೫೯ ಇಲ್ಲಿಗೆ ಸಾರ್ವಜನಿಕರು ದೂರನ್ನು ನೀಡಬಹುದಾಗಿದೆ ಎಂದು ರಾಮನಗರ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆಫ್‌ ಎಕ್ಸೈಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑