Tel: 7676775624 | Mail: info@yellowandred.in

Language: EN KAN

    Follow us :


ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ

Posted date: 31 Mar, 2020

Powered by:     Yellow and Red

ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ವೈರಸ್ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಗಡಿಭಾಗದ ಹೊನ್ನನಾಯಕನಹಳ್ಳಿ ಹೊರ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ತಿಳಿಸಿದರು.


ಸದ್ಯ ತಾಲ್ಲೂಕಿನಾದ್ಯಂತ ಇದುವರೆಗೂ ಕೊರೊನಾ ಗೆ ಸಂಬಂಧಿಸಿದಂತೆ ವೈರಸ್ ದೃಢಪಟ್ಟಿಲ್ಲ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ವಸತಿಯುತ ಶಾಲೆಯನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಆಕಸ್ಮಿಕವಾಗಿ ಒಬ್ಬ ವ್ಯಕ್ತಿಗೆ ದೃಢ ಪಟ್ಟರೇ, ಆತನನ್ನು ಐಸೋಲೇಷನ್ ಗೆ ಸೇರಿಸಿ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗುತ್ತದೆ.


ಆತನಿಗೆ ಕೊರೊನಾ ದೃಢ ಪಟ್ಟರೆ ತಕ್ಷಣವೇ ಆತನ ಕುಟುಂಬದ ಎಲ್ಲಾ ಸದಸ್ಯರನ್ನೂ ಹೋಂ ಕ್ವಾರಂಟೈನ್ ಗೆ ಬಿಡಿ ಬಿಡಿಯಾಗಿ ಇರಿಸಿ ಸ್ವಾಬ್ ತೆಗೆದು, ಅವರಲ್ಲಿಯೂ ದೃಢ ಪಟ್ಟರೆ ಐಸೋಲೇಷನ್ ಗೆ ವಾಡ್೯ಗೆ ಸೇರಿಸಲಾಗುವುದು. ಆನಂತರ ಅವರ ಸುತ್ತಮುತ್ತಲಿನ ಮನೆಯ ಎಲ್ಲಾ ಸದಸ್ಯರು, ತದನಂತರ ಆ ರೋಗಿ‌ ಯಾವಾಗ, ಎಲ್ಲೆಲ್ಲಿ, ಯಾರುಯಾರನ್ನೂ ಭೇಟಿ ಮಾಡಿದರೂ ಎಂಬುದನ್ನು ಪತ್ತೆ ಹಚ್ಚಿ ಅವರೆಲ್ಲರನ್ನೂ ಆರು ಅಡಿ ಗೆ ಒಬ್ಬರಂತೆ ಹೋಂ ಕ್ವಾರಂಟೈನ್ ನಲ್ಲಿ‌ ಇರಿಸಬೇಕಾಗಿರುವುದರಿಂದ ಮುನ್ನೆಚ್ಚರಿಕೆಯಾಗಿ ಶಾಲೆಯನ್ನು ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ಮಾಹಿತಿ ನೀಡಿದರು.


ಪರಿಶೀಲನೆ ವೇಳೆ ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑