Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಲಾಕ್ ಡೌನ್ ಮುಗಿಯುವ ತನಕ ಒಂದು ಸಾವಿರ ಮಂದಿಗೆ ಅನ್ನದಾಸೋಹ ಏರ್ಪಡಿಸಿದ ಜೆಡಿಎಸ್

Posted date: 02 Apr, 2020

Powered by:     Yellow and Red

ಚನ್ನಪಟ್ಟಣದಲ್ಲಿ ಲಾಕ್ ಡೌನ್ ಮುಗಿಯುವ ತನಕ ಒಂದು ಸಾವಿರ ಮಂದಿಗೆ ಅನ್ನದಾಸೋಹ ಏರ್ಪಡಿಸಿದ ಜೆಡಿಎಸ್

ಚನ್ನಪಟ್ಟಣ:ಏ/೦೧/೨೦/ಬುಧವಾರ.ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರ ಆದೇಶದಂತೆ ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ದುರ್ಬಲರಿಗೆ ಲಾಕ್ ಡೌನ್ ಅವಧಿ ಮುಗಿಯುವವರೆಗೂ ಕನಿಷ್ಠ ಒಂದು ಸಾವಿರ ಮಂದಿಗೆ ಮೂರು ಸಮಯವೂ (ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ) ನಿತ್ಯ ಆಹಾರ ಪೂರೈಸಲು ಹೆಚ್ ಡಿ ಕೆ ಜನತಾ ದಾಸೋಹದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಲಸಿಗರಿಗೆ ವಿತರಿಸಲಾಯಿತು.


ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್ ಸಿ ಜಯಮುತ್ತು ನೇತೃತ್ವದಲ್ಲಿ ಅನ್ನ ದಾಸೋಹ ಆರಂಭಿಸಿರುವ ಜೆಡಿಎಸ್ ಕಾರ್ಯಕರ್ತರು ಲಾಕ್ ಡೌನ್ ನಿಂದ ಸ್ವಕ್ಷೇತ್ರದಲ್ಲಿ ಯಾರು ಕೂಡ ಹಸಿವಿನಿಂದ ಉಳಿಯಬಾರದು ಎಂಬ ಎಚ್ ಡಿ ಕೆ ಆದೇಶದ ಹಿನ್ನೆಲೆಯಲ್ಲಿ ಇಂದಿನಿಂದ ದಾಸೋಹ ಆರಂಭಿಸಿದ್ದು ಲಾಕ್ ಡೌನ್ ಮುಗಿಯುವವರೆಗೂ ಪ್ರತಿನಿತ್ಯವೂ ನೀಡಲಾಗುವುದು.


ನಗರದಲ್ಲಿ ನಾನಾ ಕಡೆ ಉಳಿದುಕೊಂಡಿರುವ ವಲಸಿಗರು, ನಿರ್ಗತಿಕರು ಮತ್ತು ನಗರದ ಬಡ ಕೂಲಿ ಕಾರ್ಮಿಕರಿಗೂ ಸಹ ಲಾಕ್ ಡೌನ್ ಮುಗಿಯುವ ತನಕವೂ ದಿನದ ಮೂರು ಹೊತ್ತು ಊಟ ನೀಡಲಾಗುತ್ತದೆ. ವಲಸಿಗರಲ್ಲಿ ಸಣ್ಣ ಕಂದಮ್ಮಗಳು ಇರುವ ಕಾರಣದಿಂದ ಪ್ರತಿ ದಿನ ಬೆಳಿಗ್ಗೆ ಸಮಯದಲ್ಲಿ ಅರ್ಧ ಲೀಟರ್ ನಂದಿನಿ ಹಾಲು ವಿತರಿಸಲಾಗುವುದು ಎಂದು ಅನ್ನದಾಸೋಹದ ಉಸ್ತುವಾರಿ ವಹಿಸಿದ ಹೆಚ್ ಸಿ ಜಯಮುತ್ತು ಹೇಳಿದರು.


ಅನ್ನದಾಸೋಹದ ಸಂದರ್ಭದಲ್ಲಿ ಪಿ.ಎಲ್.ಡಿ  ಬ್ಯಾಂಕ್ ಅಧ್ಯಕ್ಷರಾದ ಗೋವಿಂದಹಳ್ಳಿ ನಾಗರಾಜು, ಜೆ ಡಿ ಎಸ್ ಮುಖಂಡರಾದ ಎಂ ಸಿ ಕರಿಯಪ್ಪ. ಹಾಪ್ ಕಾಮ್ಸ್ ದೇವರಾಜು. ಕುಕ್ಕೂರು ದೊಡ್ಡಿ ಜಯರಾಮ್. ನಗರಸಭಾ ಸದಸ್ಯರಾದ  ಜಬೀವುಲ್ಲಾ ಖಾನ್. ಹಮೀದ್ ಮುನಾವರ್. ಮಧು .ಶಶಿಕುಮಾರ್, ಉಮಾಶಂಕರ್. ಜೆಸಿಬಿ ಲೋಕೇಶ್. ಮುಖಂಡರುಗಳಾದ ಮಳೂರುಪಟ್ಟಣ ರವಿ. ಎಂಜಿಕೆ ಪ್ರಕಾಶ್. ರಘು ಕುಮಾರ್. ಸಂದೀಪ್. ಕೆಂಚೇಗೌಡ. ಶ್ರೀಕಂಠು. ಹಾಗೂ ಇನ್ನಿತರ ಮುಖಂಡರುಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑