Tel: 7676775624 | Mail: info@yellowandred.in

Language: EN KAN

    Follow us :


ಹಾರೋಹಳ್ಳಿ ಕೈಗಾರಿಕೆ ಸಂಘದಿಂದ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳನ್ನು ಯೋಜಿತ ರೂಪದಲ್ಲಿ ಹಂಚಿಕೆ ಮಾಡಿದ ಸಿಇಓ

Posted date: 03 Apr, 2020

Powered by:     Yellow and Red

ಹಾರೋಹಳ್ಳಿ ಕೈಗಾರಿಕೆ ಸಂಘದಿಂದ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳನ್ನು ಯೋಜಿತ ರೂಪದಲ್ಲಿ ಹಂಚಿಕೆ ಮಾಡಿದ ಸಿಇಓ

ಕೊರೊನಾ (ಕೋವಿಡ್-೧೯) ಹರಡುವುದರಿಂದ ೨೧ ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಕೂಲಿ ಮಾಡುವವರಿಗೆ ಹಾಗೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ಬಂದಿರುವ ವಲಸಿಗ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ಇವರಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಸಂಘ ಸಂಸ್ಥೆಗಳೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ಚರ್ಚಿಸಿದ ಸಂದರ್ಭದಲ್ಲಿ ಹಾರೋಹಳ್ಳಿ ಕೈಗಾರಿಕೆ ಸಂಘದವರು ಆಹಾರ ಪದಾರ್ಥಗಳನ್ನು ಒದಗಿಸಲು ಮುಂದೆ ಬಂದಿರುತ್ತಾರೆ.


ಜಿಲ್ಲಾ ಪಂಚಾಯತ್ ಮಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿ ತಮ್ಮ ವ್ಯಾಪ್ತಿಯಲ್ಲಿ ಬರುವ ವಲಸಿಗರು ಹಾಗೂ ದಿನಗೂಲಿ ಮಾಡುವವರನ್ನು ಗುರುತಿಸಿ ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸುವಂತೆ ನಿರ್ದೇಶನ ನೀಡಿರುತ್ತಾರೆ. 


ರಾಮನಗರ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ಅವರು ರಾಮನಗರ ತಾಲ್ಲೂಕಿನಲ್ಲಿ ಮುಖ್ಯವಾಗಿ ಮಂಚನಾಯಕನಹಳ್ಳಿ, ಬಿಳುಗುಂಬ, ವಿಭೂತಿಕೆರೆ ಗ್ರಾಮಪಂಚಾಯಿತಿ ಹಾಗೂ ಬಿಡದಿ ಪುರಸಭೆಯ ಕೆಲವು ಭಾಗದಲ್ಲಿರುವ ವಲಸಿಗರನ್ನು ಗುರುತಿಸಿ ಅವರಿಗೆ ಖುದ್ದು  ಆಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯನಿರ್ವಹಿಸಿದ್ದಾರೆ.


ಅಕ್ಕಿ, ರಾಗಿ ಹಿಟ್ಟು, ಗೋಧಿ ಹಿಟ್ಟು, ಸಕ್ಕರೆ, ಬೇಳೆ, ಟೂತ್ ಬ್ರಷ್, ಟೂತ್ ಪೇಸ್ಟ್, ಸೋಪ್, ಸೇರಿದಂತೆ ಜೀವನ ನಡೆಸಲು ಬೇಕಿರುವ ಸುಮಾರು ರೂ ೧೦೭೦/- ಮೌಲ್ಯದ ೨೭೦ ಆಹಾರ ಪದಾರ್ಥದ ಪ್ಯಾಕೆಟ್‍ಗಳನ್ನು ರಾಮನಗರ ತಾಲ್ಲೂಕಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ.  


ಗುರುವಾರ ಮಂಚನಾಯಕನಹಳ್ಳಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ಭೇಟಿ ನೀಡಿ ಆಹಾರ ಪದಾರ್ಥಗಳ ಪ್ಯಾಕೇಟ್ ವಿತರಣೆ ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑