Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?

Posted date: 04 Apr, 2020

Powered by:     Yellow and Red

ತಾಳೆಯೋಲೆ ೧೯೬: ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ದೀರ್ಘಕಾಲಿಕ ಖಾಯಿಲೆ ಹಾಗೂ ದರಿದ್ರ ಯಾರ ಹಣೆಬರಹ ?


ನಮ್ಮ ಸುತ್ತ ಪರಮ ದರಿದ್ರರು ಹಾಗೂ ನಿತ್ಯ ರೋಗಿಗಳನ್ನು ನೋಡುತ್ತಿರುತ್ತೇವೆ, ಅವರ ಕರ್ಮಕ್ಕೆ ಅವರೆ ಬಾಧ್ಯರು ಎಂದು ಹಿರಿಯರು ಹೇಳಿರುವರು. ಯಾರ *ಹಣೆಯ ಬರಹಗಳನ್ನು ಇಲ್ಲವೆ ಹಸ್ತರೇಖೆಗಳನ್ನು ಅವರೇ ಬರೆದುಕೊಳ್ಳುತ್ತಾರೆ. ಇದರಲ್ಲಿ ದೇವರ ಪಾತ್ರ ಲವಲೇಶವು ಇಲ್ಲ.*


ಈ ಜನ್ಮದಲ್ಲಿ ಅನೇಕ ಕರ್ಮಗಳಿಗೆ ನಮ್ಮ ಹಿಂದಿನ ಜನ್ಮದಲ್ಲಿನ ಪಾಪಗಳೆ ಕಾರಣವೆಂದು ಹಿರಿಯರು ಹೇಳುವರು. ಜನ್ಮಗಳು ಇರುವ ಹಾಗೆ ಆಧುನಿಕ ಪ್ರಪಂಚವು ಸಹ ದೃಢವಾಗಿ ನಂಬುತ್ತಿದೆ. ಹಿಂದಿನ ಜನ್ಮದಲ್ಲಿ ಕೆಟ್ಟದ್ದು ಮಾತ್ರವೇ ಅಲ್ಲದೆ ಈ ಜನ್ಮದಲ್ಲಿನ ಕೆಟ್ಟ ಕರ್ಮಗಳ ಪ್ರಭಾವವು ನಮ್ಮ ಮೇಲೆ ಬೀಳುತ್ತದೆ.


ಹಿಂದಿನ ಜನ್ಮದಲ್ಲಿ ಮದ, ಮಾತ್ಸರ್ಯಗಳಲ್ಲಿ ಹಿಡಿತ ತಪ್ಪಿದ ಅಹಂಕಾರದಿಂದ ಪಾಪ ಪುಣ್ಯಗಳು ಇಲ್ಲವೆಂಬ ಭ್ರಮೆಯಲ್ಲಿ ಅನೇಕರು ನಾನಾ ರೀತಿಯ ದುಷ್ಕರ್ಮಗಳನ್ನು ಮಾಡಿ, ಈ ಜನ್ಮದಲ್ಲಿ ಅದರ ಫಲಿತವನ್ನು ಅನುಭವಿಸುತ್ತಿರುತ್ತಾರೆ.


ಹಿಂದಿನ ಜನ್ಮದಲ್ಲಿ ಮೃಗಗಳ ಬಗ್ಗೆ ಮನುಷ್ಯರ ಬಗ್ಗೆ ಸಮಾಜದ ಬಗ್ಗೆ ಹಿಂಸೆ ಪ್ರವೃತ್ತಿಯನ್ನು ಹೊಂದಿದವರು ಈ ಜನ್ಮದಲ್ಲಿ ದೀರ್ಘಕಾಲಿಕ ದರಿದ್ರದ ಹಾಗೂ ರೋಗಗಳ ಪಾಲಾಗುವರು. ಆದರೆ ಈ ಜನ್ಮದಲ್ಲಿ ಪುಣ್ಯ ಕಾರ್ಯಗಳು, ದೈವ ಕಾರ್ಯಗಳು, ಸಾದು ಜನರ ಸೇವೆ ಮುಂತಾದ ಒಳ್ಳೆಯ ಕೆಲಸಗಳು ಮಾಡಿದ ಹಾಗಾದರೆ ಗತ ಜನ್ಮದ ಪಾಪವು ಸ್ವಲ್ಪ ತೊಲಗಿ, ಪ್ರಸ್ತುತ ಪೀಡೆಯು ಕಡಿಮೆಯಾಗುತ್ತದೆ. ಗತ ಜನ್ಮದ ಪಾಪವನ್ನು ತೊಲಗಿಸುವ ಕ್ರಿಯೆಯನ್ನೇ ಪಾಪ ಪರಿಹಾರ ಎಂದು ಹೇಳುವರು.


ಆದ್ದರಿಂದ ತನ್ನ ದುಷ್ಕರ್ಮಗಳನ್ನು ನೋಡುವವರು ತಕ್ಕ ಶಿಕ್ಷೆಯನ್ನು ವಿಧಿಸುವವರು ಯಾರು ಇಲ್ಲವೆಂದು ಭ್ರಮಿಸದೆ ಧರ್ಮಾಚರಣೆಯನ್ನು ಮಾಡುತ್ತ ದಿವ್ಯ ಜೀವನವನ್ನು ನಾವು ನಮ್ಮ ನಿತ್ಯ ಆಚಾರವಾಗಿ ಬದಲಾಯಿಸಿಕೊಂಡು ಜೀವಿಸಬೇಕು. *ನೀನು ಧರ್ಮವನ್ನು ರಕ್ಷಿಸಿದರೇ ಆ ಧರ್ಮವೇ ನಿನ್ನನ್ನು ರಕ್ಷಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑