Tel: 7676775624 | Mail: info@yellowandred.in

Language: EN KAN

    Follow us :


ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್

Posted date: 07 Apr, 2020

Powered by:     Yellow and Red

ರೀಲರ್ ಗಳ ವಿರುದ್ಧ ಹೂಂಕರಿಸಿದ ಪೋಲೀಸ್ ಅಧಿಕಾರಿ ಓಂಪ್ರಕಾಶ್

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ನಿಮ್ಮ ಅಭಿಪ್ರಾಯ ಏನಿದ್ದರೂ ಹರಾಜು ಆದ ನಂತರ ಮಾಡಿ, ನೀವು ಬರೋವರೆಗೂ‌ ಹರಾಜು ಆಗಲ್ಲ ಅಂದರೆ ಏನರ್ಥ, ರೈತರ ಕಷ್ಟ ನಿನಗೇನು ಗೊತ್ತು, ನಿಮ್ಮ ಆರ್ಭಟ, ನಿನ್ನ ನಾಯಕತ್ವ, ಮನವಿ ಏನಿದ್ದರೂ ಸಂಬಂಧಿಸಿದ ಅಧಿಕಾರಿ ಮತ್ತು ಇಲಾಖೆಯ ಬಳಿ ಮಾಡಿಕೊಳ್ಳಿ. ಕಷ್ಟ ಕಾಲದಲ್ಲಿ ರೈತರ ಬಳಿ ಖರೀದಿಸಿ ಸಹಾಯ ಮಾಡೋದು ಕಲಿಯಿರಿ. ನಿನ್ನ ನಾಯಕತ್ವವನ್ನು ರೈತರಿಗೆ ಸಹಾಯ ಮಾಡುವ ಮೂಲಕ ಸಾಬೀತು ಪಡಿಸು. ಇಲ್ಲವಾದರೆ ಒಳಗಿರುವ ಲಾಠಿ ಹೊರಗೆ ಬರುತ್ತವೆ ಎಂದು ರೇಷ್ಮೆ ರೀಲರ್ ಅಧ್ಯಕ್ಷ ಜಬಿವುಲ್ಲಾ ಖಾನ್ ಘೋರಿ ಗೆ ಖಡಕ್ ಎಚ್ಚರಿಕೆ ಯನ್ನು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ನೀಡುವ ಮೂಲಕ ಎಲ್ಲಾ ರೀಲರ್ ಗಳಿಗೆ ಬಿಸಿ ಮುಟ್ಟಿಸಿದರು.


ನಿನ್ನೆ ಚನ್ನಪಟ್ಟಣಕ್ಕೆ ಬಂದಿದ್ದ ಶಾಸಕ ಕುಮಾರಸ್ವಾಮಿ ಯವರಿಗೆ ತಮ್ಮ ಅಳಲನ್ನು‌ ತೋಡಿಕೊಳ್ಳಲು‌ ಅನುಮತಿಸಲಿಲ್ಲ ಎಂದು ಹಲವಾರು ರೀಲರ್ ಗಳು ಹರಾಜು ಕೂಗದೆ ಗುಂಪುಗೂಡಿದ್ದರು. ಇದನ್ನು ಮನಗಂಡ ರಾಮನಗರ ಜಿಲ್ಲೆಯ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಬಸವರಾಜು ಆಗಮಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರಾದರು‌ ಸಫಲವಾಗಲಿಲ್ಲ. ಜಬಿವುಲ್ಲಾ ಬಂದ ನಂತರ ಹರಾಜು ಕೂಗುವುದಾಗಿ ಉಳಿದ ರೀಲರ್ ಗಳು ಪಟ್ಟು ಹಿಡಿದು ಗುಂಪುಗೂಡಿದರು.


ಬೆಳಿಗ್ಗೆ ೧೦:೩೦ ಮತ್ತು ೧೧:೧೫ ಕ್ಕೆ ಎರಡು ಬಾರಿ ಹರಾಜು ಆಗಬೇಕಾಗಿದ್ದ ಗೂಡು ಹನ್ನೆರಡು ಗಂಟೆಯಾದರು ಆರಂಭಗೊಳ್ಳದ್ದರಿಂದ ಕಂಗಲಾದ ರೈತರು‌ ಸಹ ಮಾರುಕಟ್ಟೆ ಯನ್ನು ಮುಚ್ಚಲು ಮುಂದಾದ ಘಟನೆಯು ನಡೆಯಿತು. ಬೆಳಿಗ್ಗೆ ಯಿಂದ ಕುಡಿಯಲು ನೀರು ಇಲ್ಲದೆ, ಕಾಫಿ-ಟೀ, ತಿಂಡಿಯೂ ಇಲ್ಲದೆ ಹಸಿವೆಯಿಂದ ಬಳಲಿದ ರೈತರು ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.


ನಾನಿಲ್ಲದೆ ಮಾರುಕಟ್ಟೆಯೇ ನಡೆಯದು ಎಂಬ ಹುಮ್ಮಸ್ಸಿನಿಂದ ತಡವಾಗಿ ಬಂದ ಜಬಿವುಲ್ಲಾ, ಅಧಿಕಾರಿಗಳಿಗೆ ಅವರ ಸಮಸ್ಯೆಗಳನ್ನು ಮಾತ್ರ ಹೇಳಿಕೊಂಡು, ನಾವು ಗೂಡು ಖರೀದಿಸುತ್ತೇವೆ. ಆದರೆ ನಮ್ಮ ರೇಷ್ಮೆಯನ್ನು ಯಾರೂ ಖರೀದಿಸಿತ್ತಿಲ್ಲ. ಹಣ ಎಲ್ಲಿಂದ ತರಲಿ, ಎಂದು ಸಮಜಾಯಿಷಿ ನೀಡಲು ಮುಂದಾದಾಗ ಪೋಲೀಸ್ ಅಧಿಕಾರಿ ಓಂಪ್ರಕಾಶ್ ರವರು ತರಾಟೆಗೆ ತೆಗೆದುಕೊಂಡರು.


ನಮ್ಮ ಸಂಘದ ವತಿಯಿಂದ ಮೊದಲು ಚನ್ನಪಟ್ಟಣದಲ್ಲಿ ಮೊದಲು ಬಂದ್ ಮಾಡಿ ಎಂಬ ಸಲಹೆ ನೀಡಿದ್ದಾರೆ ಎಂಬ ಜಬಿವುಲ್ಲಾ ಮಾತಿಗೆ ಪ್ರತ್ಯುತ್ತರ ನೀಡಿದ ಓಂಪ್ರಕಾಶ್ ರವರು ನಮ್ಮ ಚನ್ನಪಟ್ಟಣದಲ್ಲಿ ಮಾರುಕಟ್ಟೆ ಆರಂಭವೇ ಹೊರತು ಅಂತೊಮವಲ್ಲ. ಇಲ್ಲಿ ಮಾರುಕಟ್ಟೆ ಸತತವಾಗಿ ನಡೆಯುತ್ತದೆ, ನಡೆಯಲೇಬೇಕು. ಎಂಬ ಖಡಕ್ ಎಚ್ಚರಿಕೆ ನೀಡಿ ಹರಾಜು ಕೂಗುವಂತೆ ಆದೇಶಿದಿದರು.


ಎಲ್ಲಾ ಮಾರುಕಟ್ಟೆ ಗಳಲ್ಲಿ ಏಕ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಚನ್ನಪಟ್ಟಣ ಈ ರೀತಿ ಆಗುವುದು ಬೇಡ. ನಿಮ್ಮ ಹಿತಾಸಕ್ತಿಗೋಸ್ಕರ ತಡೆ ಹಿಡಿಯುವುದು ಬೇಡ. ಚನ್ನಪಟ್ಟಣ ರೇಷ್ಮೆ ಗೂಡಿನ‌ ಮಾರುಕಟ್ಟೆ ರಾಜ್ಯಕ್ಕೆ ಮಾದರಿಯಾಗಲಿ ಎಂದು ಜಿಲ್ಲಾ ಉಪ‌ ನಿರ್ದೇಶಕ  ಬಸವರಾಜು ಸೂಚಿಸಿದರು.


*ಮಾರುಕಟ್ಟೆಗೆ ಬಂದ ದಾಖಲೆಯ ಗೂಡು*

ಕನಿಷ್ಠ  ಮೂರು ಸಾವಿರದಿಂದ ನಾಲ್ಕು ಸಾವಿರ ಕಿಲೋ ಗೂಡು‌ ಮಾರುಕಟ್ಟೆಗೆ ಬರುತ್ತಿದ್ದು, ಇಂದು ೧೫೪ ಲಾಟುಗಳು ಬಂದಿದ್ದು ಬರೋಬ್ಬರಿ ೬,೦೮೧ ಕಿಲೋ ರೇಷ್ಮೆ ಗೂಡು ಮಾರುಕಟ್ಟೆ ಗೆ ಬಂದಿದ್ದು ದಾಖಲೆ ನಿರ್ಮಿಸಿತು.

ಪ್ರತಿ ಕಿಲೋ ಗೆ ಗರಿಷ್ಠ ೩೧೭ ರೂಪಾಯಿಗಳಾದರೆ ಕನಿಷ್ಠ ೧೪೭ ರೂಪಾಯಿಗಳಾಗಿದ್ದು ಸರಾಸರಿ ೨೭೮ ರೂಪಾಯಿಗೆ ಹರಾಜು ನಡೆಯಿತು.


ರಾಮನಗರ ಉಪ ನಿರ್ದೇಶಕ ಬಸವರಾಜು, ಚನ್ನಪಟ್ಟಣ ಸಹಾಯಕ ನಿರ್ದೇಶಕ ಹೊಂಬಾಳೆಗೌಡ, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರವೀಂದ್ರ ಮತ್ತಿತರರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑