Tel: 7676775624 | Mail: info@yellowandred.in

Language: EN KAN

    Follow us :


ಅನ್ಯಾಯದ ಕಡೆ ವಾಲಿದ ನ್ಯಾಯ ಬೆಲೆ ಅಂಗಡಿಗಳು. ಎರಡು ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ತಹಶಿಲ್ದಾರ್

Posted date: 11 Apr, 2020

Powered by:     Yellow and Red

ಅನ್ಯಾಯದ ಕಡೆ ವಾಲಿದ ನ್ಯಾಯ ಬೆಲೆ ಅಂಗಡಿಗಳು. ಎರಡು ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ತಹಶಿಲ್ದಾರ್

ಚನ್ನಪಟ್ಟಣ:ಏ;೧೧/೨೦/ಶುಕ್ರವಾರ. ತಾಲ್ಲೂಕಿನಾದ್ಯಂತ ಇರುವ ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿನ್ನಾಧರಿಸಿದ ತಹಶಿಲ್ದಾರ್ ಸುದರ್ಶನ್ ರವರು ಮತ್ತು ಆಹಾರ ಸಹಾಯಕ ನಿರ್ದೇಶಕಿ ಶಾಂತಕುಮಾರಿ ರವರು ನೇರ ದಾಳಿ ನಡೆಸಿ ಎರಡು ಅಂಗಡಿಗಳ ಲೈಸೆನ್ಸ್ ರದ್ದತಿ ಮತ್ತು ಎರಡು ಅಂಗಡಿಗಳ ಮಾಪನ ಇಲಾಖೆ (ಸ್ಕೇಲ್) ದಾವೇ ಹೂಡುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.


ಕರೋನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಲಾಕ್ ಡೌನ್ ಮಾಡಲಾಗಿರುವುದರಿಂದ ಸರ್ಕಾರವು ಎರಡು ತಿಂಗಳ (ಏಪ್ರಿಲ್ ಮತ್ತು ಮೇ) ಪಡಿತರವನ್ನು ಇದೇ ತಿಂಗಳು ವಿತರಿಸುವಂತೆ ಆದೇಶಿಸಲಾಗಿತ್ತು. ಒಬ್ಬ ವ್ಯಕ್ತಿಗೆ ೫ ಕಿಲೋ ಅಕ್ಕಿ ಮತ್ತು ಪಡಿತರ ಚೀಟಿಯೊಂದಕ್ಕೆ ಎರಡು ಕಿಲೋ ಗೋಧಿಯನ್ನು, ತಲಾ ೧೦ ಕಿಲೋ ಅಕ್ಕಿ ಮತ್ತು ಕಾಡ್೯ ಒಂದಕ್ಕೆ ನಾಲ್ಕು ಕಿಲೋ ಗೋಧಿ ವಿತರಿಸುವಂತೆ ಸೂಚಿಸಿದ್ದು, ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲೂ ಇದೇ ತಿಂಗಳು ವಿತರಿಸಲಾಗುತ್ತಿವೆ.


ಇದನ್ನೇ ಆದಾಯದ ಬಂಡವಾಳವನ್ನಾಗಿ ಮಾರ್ಪಾಡು ಮಾಡಿಕೊಂಡ ಕೆಲ ಸನ್ನದುದಾರರು ಅಕ್ಕಿ ಕಡಿಮೆ ಕೊಡುವುದು, ತೂಕದಲ್ಲಿ ಮೋಸ ಮಾಡುವುದು, ದುಡ್ಡು ಪಡೆದು ಪಡಿತರ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಕೆಲ ದೂರುಗಳನ್ನು ಆಧರಿಸಿ ದಾಳಿ ಮಾಡಿರುವುದಾಗಿ ತಿಳಿಸಿದರು.


ಕೋಟಮಾರನಹಳ್ಳಿ ಗ್ರಾಮ ಮತ್ತು ಸುಣ್ಣಘಟ್ಟ ಗ್ರಾಮದ ಸನ್ನದುದಾರರ ಲೈಸೆನ್ಸ್ ರದ್ದು ಪಡಿಸಲು ಆಹಾರ ನಿರೀಕ್ಷಕಿ ಶಾಂತಕುಮಾರಿಯವರಿಗೆ ಸೂಚಿಸಿದ್ದು, ಹೊಡಿಕೆಹೊಸಹಳ್ಳಿ ಮತ್ತು ಸುಣ್ಣಘಟ್ಟ ಗ್ರಾಮಗಳ ಲೈಸೆನ್ಸ್ ದಾರರಿಗೆ ತೂಕ ಮತ್ತು ಮಾಪನ ಇಲಾಖೆಯ ರಾಮಚಂದ್ರ ರವರಿಗೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದಾಗಿ ತಹಶಿಲ್ದಾರ್ ಸುದರ್ಶನ್ ರವರು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑