Tel: 7676775624 | Mail: info@yellowandred.in

Language: EN KAN

    Follow us :


ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ

Posted date: 22 Apr, 2020

Powered by:     Yellow and Red

ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ

ನಾಗಮಂಗಲ:೨೨/೨೦/ಬುಧವಾರ. ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ೦೫ (೬೦ ಬಾಟಲ್) ಬಾಕ್ಸ್ ಬಿಯರ್ ಬಾಟಲ್ ಗಳು ಪತ್ತೆಯಾಗಿವೆ.


ಕೆ.ಎ-೫೩ ಎಂಬಿ ೬೮೯೯ ನಂಬರಿನ ಸ್ಟಿಫ್ಟ್ ಕಾರಿನಲ್ಲಿ ಮದ್ಯ ಪತ್ತೆಯಾಗಿದ್ದು, ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದ ಹರೀಶ್ ಗೌಡ, ಸಂದೀಪ್, ಹಾಗೂ ಸೋಮಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಾಗಮಂಗಲ ಟೌನ್ ಪೊಲೀಸ್ ಠಾಣೆ ಪಿಎಸ್ಐ ರವಿಕಿರಣ್ ಮತ್ತು ನಿಯೋಜಕ ಪೊಲೀಸ್ ಸಿಬ್ಬಂದಿಗಳು ತಪಾಸಣೆ ಕಾರ್ಯದಲ್ಲಿ ತೊಡಗಿದ್ದರು. ಈ ಸಂಬಂಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑