Tel: 7676775624 | Mail: info@yellowandred.in

Language: EN KAN

    Follow us :


ಸ್ವಕ್ಷೇತ್ರ ದ ಮಂದಿ ಹಸಿವೆಯಿಂದ ಬಳಲಬಾರದು ಹೆಚ್ ಡಿ ಕುಮಾರಸ್ವಾಮಿ

Posted date: 28 Apr, 2020

Powered by:     Yellow and Red

ಸ್ವಕ್ಷೇತ್ರ ದ ಮಂದಿ ಹಸಿವೆಯಿಂದ ಬಳಲಬಾರದು ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ದಿಂದ ಲಾಕ್ ಡೌನ್ ಆಗಿರುವುದರಿಂದ ಕೆಲಸವೂ ಇಲ್ಲದೆ, ಸಂಪಾದನೆಯೂ ಇಲ್ಲದೆ ಇರುವ ಬಡ ಕುಟುಂಬದ ಜನರು ಹಸಿವೆಯಿಂದ ಬಳಲಬಾರದು. ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ನನ್ನ ಸ್ವ ಕ್ಷೇತ್ರವಾದ ಚನ್ನಪಟ್ಟಣ ದ ಜನರು ಹಸಿವೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ೬೦ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.


ಅವರು ನಗರದ ಸಾತನೂರು ರಸ್ತೆಯಲ್ಲಿರುವ ನ್ಯೂ ಆಕ್ಸ್‌ಫರ್ಡ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಆವರಣದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.


ಈಗಾಗಲೇ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಜೊತೆಗೆ ಮೊದಲು ೩೦ ಸಾವಿರ ಆಹಾರ ಕಿಟ್ ಗಳನ್ನು ವಿತರಿಸಲು ತೀರ್ಮಾನಿಸಿದ್ದು, ಲಾಕ್ ಡೌನ್ ಮುಂದುವರಿದ್ದರಿಂದ ೬೦ ಸಾವಿರ ಕಿಟ್ ಗಳನ್ನು ಕುಟುಂಬದವರೊಡಗೂಡಿ ವಿತರಿಸಲು ತೀರ್ಮಾನಿಸಲಾಯಿತು.

ಈ ಕಿಟ್ ಗಳಲ್ಲಿ ಅಕ್ಕಿ, ಬೇಳೆ, ಸಕ್ಕರೆ ಮತ್ತು ಈರುಳ್ಳಿ ಯನ್ನು ಒಳಗೊಂಡಿದ್ದು ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ವಿತರಿಸಲು ಸೂಚಿಸಿರುವುದಾಗಿ ಹೇಳಿದರು.


ಕುಮಾರಸ್ವಾಮಿ ಯವರು ದಿನಸಿ ಕಿಟ್ ಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ 

ನಗರದ ಸಾಕಷ್ಟು ಮಂದಿ ಶಾಲಾ ಆವರಣದಲ್ಲಿ 

ನೇರೆದಿದ್ದರು. ಡಿವೈಎಸ್‍ಪಿ ಟಿ.ಎ.ಓಂಪ್ರಕಾಶ್ ನೇತೃತ್ವದಲ್ಲಿ ಸಿಪಿಐ ವಸಂತ್, ಗ್ರಾಮಾಂತರ ಪಿಎಸ್‍ಐ ಎಚ್.ಎಂ ಶಿವಕುಮಾರ್ ಮತ್ತು ಸಿಬ್ಬಂದಿಗಳು ಮುಖಂಡರನ್ನು ಸೇರಿದಂತೆ ದಿನಸಿ ಪಡೆಯಲು ಬಂದಿದ್ದವರನ್ನು ಸ್ಥಳದಿಂದ ಚದುರಿಸಿ ಸಾಮಾಜಿಕ ಅಂತರದಿಂದ ಕಾರ್ಯಕ್ರಮ ನಡೆಯುವಂತೆ ಮಾಡುವಲ್ಲಿ ಯಶಸ್ವಿಗೊಂಡರಾದರೂ ಕುಮಾರಸ್ವಾಮಿ ಯವರು ಬಂದ ನಂತರ ಒಗ್ಗೂಡಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಟ್ಟು ಸೆಲ್ಫಿ ಗಾಗಿ ಮುಗಿಬಿದ್ದರು.


ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ 

ಎಚ್.ಡಿ.ಕೆ ಗೆ ಪತ್ನಿ ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ, ಮಗ ನಿಖಿಲ್‍ಕುಮಾರಸ್ವಾಮಿ, ಸೊಸೆ ರೇವತಿ ಕೈಜೋಡಿಸಿದರು.


ಈ ವೇಳೆ ಪಕ್ಷದ ತಾಲೂಕು ಅಧ್ಯಕ್ಷ 

ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್‍ಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ರಾಂಪುರ 

ರಾಜಣ್ಣ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, 

ಪಕ್ಷದ ಮುಖಂಡರಾದ ಹಾಪ್‍ಕಾಮ್ಸ್ ದೇವರಾಜು, 

ಸಿಂ.ಲಿಂ.ನಾಗರಾಜು, ಕುಕ್ಕುರುದೊಡ್ಡಿ ಜಯರಾಂ, 

ಬೋರ್ ವೆಲ್ ರಾಮಚಂದ್ರು, ಜೆಸಿಬಿ ಲೋಕೇಶ್, 

ಮಳೂರುಪಟ್ಟಣ ರವಿ ಸೇರಿದಂತೆ ಹಲವರು 

ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑