Tel: 7676775624 | Mail: info@yellowandred.in

Language: EN KAN

    Follow us :


ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಚನ್ನಪಟ್ಟಣ ಬೆಸ್ಕಾಂ ಮನವಿ

Posted date: 28 Apr, 2020

Powered by:     Yellow and Red

ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಚನ್ನಪಟ್ಟಣ ಬೆಸ್ಕಾಂ ಮನವಿ

ಚನ್ನಪಟ್ಟಣ:ಏ/೨೮/೨೦/ಮಂಗಳವಾರ. ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ದಿನಾಂಕ: ೦೩-೦೫-೨೦೨೦ರ ತನಕ ಲಾಕ್‌ಡೌನ್ ಅನುಸರಿಸಲು ಆದೇಶಿಸಿರುವುದರಿಂದ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚನ್ನಪಟ್ಟಣ ನಗರ ಉಪವಿಭಾಗದ ವ್ಯಾಪ್ತಿಯಲ್ಲಿನ ಗ್ರಾಹಕರು ವಿದ್ಯುತ್ ಬಿಲ್ ಮತ್ತು ಬಾಕಿ ಮೊತ್ತವನ್ನು ಆನ್‌ಲೈನ್ ಸೇವೆಗಳಾದ ಬೆಸ್ಕಾಂ ಮಿತ್ರ, ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸುವಂತೆ ಮತ್ತು ಆನ್‌ಲೈಸ್ ಸೇವೆಗಳಲ್ಲಿ ಬಿಲ್ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸುರಕ್ಷಾ ವಿಧಾನ ಅನುಸರಿಸಿ ಬೆಸ್ಕಾಂ, ಕಚೇರಿಯ ನಗರ ಕೌಂಟರ್‌ನಲ್ಲಿ ಬಿಲ್ ಪಾವತಿಸುವಂತೆ ಚನ್ನಪಟ್ಟಣದ ಬೆ.ವಿ.ಕಂ. ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑