Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ: ಕೆಲ ದಿನನಿತ್ಯಪಯೋಗಿ ಅಂಗಡಿಗಳಷ್ಟೇ ತೆಗೆಯಬಹುದು. ಜಿಲ್ಲಾಧಿಕಾರಿ

Posted date: 29 Apr, 2020

Powered by:     Yellow and Red

ಜಿಲ್ಲೆಯಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ: ಕೆಲ ದಿನನಿತ್ಯಪಯೋಗಿ ಅಂಗಡಿಗಳಷ್ಟೇ ತೆಗೆಯಬಹುದು. ಜಿಲ್ಲಾಧಿಕಾರಿ

ರಾಮನಗರ:ಏ/೨೯/೨೦/ಬುಧವಾರ. ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಅನುಸರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸೇರ್ಪಡೆ ಆದೇಶದಂತೆ ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಕೈಗಾರಿಕೆಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಸ್ಪಷ್ಟ ಪಡಿಸಿದ್ದಾರೆ.


ದಿನಾಂಕ: ೧೯-೦೪-೨೦೨೦ ರಂದು ಬೆಂಗಳೂರು ನಗರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಮನಗರ *ಜಿಲ್ಲಾ ಕಾರಾಗೃಹದಲ್ಲಿರಿಸಿದ್ದ ಆರೋಪಿಗಳಲ್ಲಿ ಐದು ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ೦೫ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಹಾಲಿ ದೈನಂದಿನ ಅಗತ್ಯ ವಸ್ತುಗಳ ಪೂರೈಸುವ ಅಂಗಡಿಗಳನ್ನು ಹೊರತುಪಡಿಸಿ* ಇತರೆ ಯಾವುದೇ ರೀತಿಯ ಅಂಗಡಿ ಮುಂಗ್ಗಟ್ಟುಗಳನ್ನು ತೆರೆಯಲು ಅವಕಾಶವಿರುವುದಿಲ್ಲ ಎಂದು ಅರ್ಚನಾ ಅವರು ವಿವರಿಸಿದ್ದಾರೆ.


ರಾಮನಗರ ನಗರ ವ್ಯಾಪ್ತಿ ಹೊರತುಪಡಿಸಿ *ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್‌ಗಳು ಮತ್ತು ಬೃಹತ್ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ  Shops and Establishment Act ರಡಿ ನೋಂದಾಯಿಸಲಾದ ನೆರೆಹೊರೆ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಛಾಯದಲ್ಲಿರುವ ಅಂಗಡಿಗಳನ್ನು ತೆರೆಯಬಹುದಾಗಿದೆ.* ಈ ಅಂಗಡಿಗಳಲ್ಲಿ ಶೇ೫೦ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುವುದು ಮತ್ತು ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು  ವ್ಯವಹರಿಸಬಹುದಾಗಿದೆ ಹಾಗೂ *ಗ್ರಾಮೀಣ ಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ದಿನಾಂಕ:೨೮-೦೪-೨೦೨೦ರ ಸರ್ಕಾರದ ಆದೇಶವನ್ನೇ ಅನುಸರಿಸುವುದು* ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಳಿದಂತೆ ಈ ಹಿಂದೆ ಸರ್ಕಾರದಿಂದ ಹೊರಡಿಸಲಾದ  ಆದೇಶ/ಸುತ್ತೋಲೆ ಹಾಗೂ ಮಾರ್ಗಸೂಚಿಯು ಮುಂದುವರೆಯುವುದಾಗಿ  ತಿಳಿಸಿರುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑