Tel: 7676775624 | Mail: info@yellowandred.in

Language: EN KAN

    Follow us :


ಕೆಂಗಲ್ ರೈತ ಉತ್ಪಾದಕ ಸಂಸ್ಥೆಯಿಂದ ಹಣ್ಣು ತರಕಾರಿ ಖರೀದಿ

Posted date: 30 Apr, 2020

Powered by:     Yellow and Red

ಕೆಂಗಲ್ ರೈತ ಉತ್ಪಾದಕ ಸಂಸ್ಥೆಯಿಂದ ಹಣ್ಣು ತರಕಾರಿ ಖರೀದಿ

ಚನ್ನಪಟ್ಟಣ:ಏ/೩೦/೨೦/ಗುರುವಾರ. ಚನ್ನಪಟ್ಟಣ ತಾಲೂಕಿನಲ್ಲಿ ಲಾಕ್ಡೌನ್ ನ ನಂತರ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕೆ ಬಹಳ ಕಷ್ಟವಾಗುತ್ತಿದ್ದು, ಈ ಸಮಯದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸ್ಥಾಪಿತವಾದ *ಕೆಂಗಲ್ ರೈತ ಉತ್ಪಾದಕ ಸಂಸ್ಥೆ ಚಿಕ್ಕಮಳೂರು* ಇವರು ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.


ಇದರಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಉತ್ತಮ ಬೆಲೆಯು ದೊರಕುತ್ತಿದೆ, ಹಣ್ಣು ಮತ್ತು ತರಕಾರಿ ಬೆಳೆಯುತ್ತಿರುವ ರೈತರು, ಈ ಸಂಸ್ಥೆಯನ್ನು ಸಂಪರ್ಕಿಸಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಬಹುದು ಎಂದು  ತೋಟಗಾರಿಕೆ ಇಲಾಖೆಯ ಅಧಿಕಾರಿ ವಿವೇಕ್ ರವರು ತಿಳಿಸಿದ್ದಾರೆ.

ಸದರಿ ಸಂಸ್ಥೆಯ ವತಿಯಿಂದ ಆಣಿಗೆರೆ, ಮೊಗೇನಹಳ್ಳಿ, ಸಂಕಲಗೆರೆ ಗ್ರಾಮದ ರೈತರಿಂದ  ಮೂರು ಟನ್ ತರಕಾರಿಗಳನ್ನು, ಖರೀದಿಸಿ ಮಾರಾಟ ಮಾಡಲಾಗಿರುತ್ತದೆ.


ಅಲ್ಲದೆ ಮಾಕಳಿ ,ಗೌಡಗೆರೆ , ಕದರಮಂಗಲ ಭಾಗದ ರೈತರಿಂದ ಉತ್ತಮ ಮಾವಿನ ಹಣ್ಣನ್ನು ಖರೀದಿಸಿದ್ದು ಅದನ್ನು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದುವರೆಗೆ ಇಪ್ಪತ್ತೊಂದು ಟನ್ ಮಾವಿನ ಹಣ್ಣನ್ನು ಮಾರಾಟ ಮಾಡಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ಉತ್ತಮ ಬೆಲೆ ದೊರಕುವಂತಾಗಿದೆ. ರೈತರು ತಾವು ಬೆಳೆದ ಮಾವಿನ ಹಣ್ಣು ಮಾರಾಟವಾಗಿದೆ ಇದ್ದಲ್ಲಿ ಸದರಿ ಸಂಸ್ಥೆಯ ಪದಾಧಿಕಾರಿ ಕುಮಾರಿ ಜ್ಯೋತಿ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜ್ಯೋತಿ ರವರ  ಮೊಬೈಲ್ ಸಂಖ್ಯೆ 9113594517.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑