Tel: 7676775624 | Mail: info@yellowandred.in

Language: EN KAN

    Follow us :


ಮತ್ತೆ ಗರಿಗೆದರಿದ ಪುಟ್ಪಾತ್ ವ್ಯಾಪಾರ. ನಗರಸಭೆ ಮತ್ತು ಪೋಲೀಸರು ಮೌನ, ತಹಶಿಲ್ದಾರ್ ತೆರವು ಪ್ರಯೋಗ

Posted date: 02 May, 2020

Powered by:     Yellow and Red

ಮತ್ತೆ ಗರಿಗೆದರಿದ ಪುಟ್ಪಾತ್ ವ್ಯಾಪಾರ. ನಗರಸಭೆ ಮತ್ತು ಪೋಲೀಸರು ಮೌನ, ತಹಶಿಲ್ದಾರ್ ತೆರವು ಪ್ರಯೋಗ

ಚನ್ನಪಟ್ಟಣ:ಮೇ/೦೨/೨೦/ಶನಿವಾರ. ಲಾಕ್‌ಡೌನ್ ಸ್ವಲ್ಪ ಸಡಿಲ ವಾಗುತ್ತಿದ್ದಂತೆ ನಗರದಾದ್ಯಂತ ರಸ್ತೆ ಬದಿಗಳಲ್ಲಿ ತಳ್ಳುವ ಗಾಡಿಗಳು ಹಾಗೂ ರಸ್ತೆ ಬದಿಗಳಲ್ಲಿಯೇ ನಡೆಯುವ ವ್ಯಾಪಾರಗಳು ಅತ್ಯಧಿಕವಾಗಿವೆ. ಪಾದಚಾರಿಗಳು ಸಂಚರಿಸಲಾಗದಷ್ಟೂ ಜಾಗವು ಇಲ್ಲದೇ ಫುಟ್ಪಾತ್‌ನ್ನು ವ್ಯಾಪಾರಿಗಳು ಈಗಾಗಲೇ ಆವರಸಿ ಕೊಂಡಿದ್ದಾರೆ.


ಅಂಚೆ ಕಛೇರಿ ರಸ್ತೆ, ಜೆ.ಸಿ ರಸ್ತೆ, ಎಂ.ಜಿ ರಸ್ತೆ, ಡಿ.ಟಿ ರಾಮು ಸರ್ಕಲ್ ಸೇರಿದಂತೆ ಫುಟ್‌ಪಾತ್ ಇರುವ ಎಲ್ಲ ಕಡೆಯೂ ಹಣ್ಣು, ತರಕಾರಿ, ಹೂವು ಮತ್ತು ಎಳನೀರು ಮಾರಾಟಗಾರರು ಸಂಪೂರ್ಣವಾಗಿ ಫುಟ್‌ಪಾತ್‌ನ್ನು ಆವರಸಿಕೊಂಡಿದ್ದಾರೆ.


ನಗರಸಭೆಯ ಸಿಬ್ಬಂದಿ ಮತ್ತು ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯವರಾಗಲಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನು ವಂತೆ ನಡೆದುಕೊಳ್ಳುತ್ತಿರುವುದು ನಗರದ ಸೌಂದರ್ಯ ಹಾಳಾಗಲು ಹಾಗೂ ಸಾಂಕ್ರಾಮಿಕ ರೋಗಗಳು ಹರಡಲು ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪ್ಪಾಗಲಾರದು.


ಫುಟ್‌ಪಾತ್ ವ್ಯಾಪಾರಸ್ಥರು ದಿನೇದಿನೇ ಹೆಚ್ಚಾಗುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್ ಸುದರ್ಶನ್ ಅವರು ಇಂದು ಪ್ರತಿ ಫುಟ್‌ಪಾತ್ಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ಯನ್ನು ನೀಡಿದರು.


ಡಿ.ಟಿ ರಾಮು ಸರ್ಕಲ್ ನಲ್ಲಿ ಬಹುತೇಕ ಹಣ್ಣು ಮಾರಾಟಗಾರರು, ಹತ್ತಾರು ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು, ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಯಥಾಸ್ಥಿತಿ ಮುಂದುವರಿಸಿದ್ದರಿಂದ ಗರಂ ಆದ ಸುದರ್ಶನ್ ಅವರು ಇದೇ ಕೊನೆಯ ಎಚ್ಚರಿಕೆ,  ವ್ಯಾಪ್ಯಾರಿಗಳು ಆಯಾಯ ಬೀದಿಗಳಲ್ಲಿ ತಳ್ಳುವ ಗಾಡಿಗಳಲ್ಲಿ, ಬೀದಿ ಬೀದಿಗಳಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಸೂಚಿಸಿದರು. ಇನ್ನು ಮುಂದೆ ಫುಟ್‌ಪಾತ್ ಗಳಲ್ಲಿ ವ್ಯಾಪಾರ ಮಾಡಿದರೆ, ದಂಡ ವಿಧಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.


ಭಂಡ ಬಿದ್ದಿರುವ ವ್ಯಾಪಾರಿಗಳು

ಕಳೆದ ಹಲವು ವರ್ಷಗಳಿಂದ ಹೊಸದಾಗಿ ಅಧಿಕಾರಿಗಳು ಬಂದಾಗ ಬೀದಿ ಬದಿಯ ವ್ಯಾಪಾರಿಗಳನ್ನು ವಿಚಲಿತಗೊಳ್ಳುವಂತೆ ಮಾಡುವುದು, ಆಮೇಲೆ ತೆಪ್ಪಗಾಗುವುದು, ನಡೆದು ಕೊಂಡೇ ಬರುತ್ತಿದೆ. ಇದು ಮಾಮೂಲಿ ಎಂಬ ರೀತಿ ಯಲ್ಲಿ ಇಲ್ಲಿನ ಬೀದಿ ಬದಿಯ ವ್ಯಾಪಾರಸ್ಥರೂ ಸಹ ದಪ್ಪ ಚರ್ಮದವರಾಗಿದ್ದಾರೆ.  ಇದು ನಿಲ್ಲಬೇಕು ಎಂದರೆ ಖಡಕ್ ನಿಲುವು ತೆಗದುಕೊಳ್ಳಬೇಕು.


ಒಂದು ಸಾರಿ ಬೀದಿ ಬದಿಯ ವ್ಯಾಪಾರಿಗಳ ಸಂಘ ಮಾಡುವುದಕ್ಕೆ ಸರ್ಕಾರವೇ ಪೂರಕವಾಗಿ ನಿಲ್ಲುವುದು, ಮತ್ತೊಂದು ಸಾರಿ ಅವರನ್ನು ತೆರವು ಗೊಳಿಸುವ ಮಾತನ್ನು ಆಡುವುದೂ ಸಹ ಹಲವು ಗೊಂದಲಗಳಿಗೆ ಕಾರಣವಾಗಿದೆ. ಇವುಗಳನ್ನೂ ಸಹ ಗಂಭೀರವಾಗಿ ಗಮನಿಸಿ ಕೊಂಡು ಸುಧಾರಣೆಯ ಮುಖವಾಗಿ ಆಲೋಚಿಸಬೇಕು.

ಇಲ್ಲಿನಗರಸಭೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸಹ ಸುಧಾರಣಾ ಮುಖವಾಗಿ ಆಲೋಚಿಸಿದ ಸಂದರ್ಭದಲ್ಲಿ ಪೂರಕವಾಗಿ ನಿಂತು ಕೆಲಸ ಮಾಡಬೇಕು. ಅಂತಹ ಸಂದರ್ಭದಲ್ಲಿ ಮಾತ್ರ ಏನಾದರೂ ಸುಧಾರಣೆಯನ್ನು ತರಲು ಸಾಧ್ಯ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑