Tel: 7676775624 | Mail: info@yellowandred.in

Language: EN KAN

    Follow us :


ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್

Posted date: 03 May, 2020

Powered by:     Yellow and Red

ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್

ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ತಾಲ್ಲೂಕಿನಾದ್ಯಂತ ಓಡಾಡುವ ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು. ಧರಿಸದಿದ್ದರೆ ದಂಡ ವಿಧಿಸಿ, ಅನುಮತಿ ಇರುವ ಅಂಗಡಿಗಳ ಮುಂದೆ ಶಾಶ್ವತ ವೃತ್ತ ನಿರ್ಮಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿ, ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು ಮಾಸ್ಕ್ ಮತ್ತು ಗ್ಲೌಸ್ ಹಾಕಿರಬೇಕು, ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ಕೊಡಬೇಕು. ಇದನ್ನು ಪಾಲಿಸದಿದ್ದರೆ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲರೂ ಸೇರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ.


ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದುವೆ, ಸಾವು ಸಂಭವಿಸಿದರೆ ಕನಿಷ್ಠ ಇಪ್ಪತ್ತರಿಂದ ಐವತ್ತು ಮಂದಿ ಮಾತ್ರ ಸೇರಬೇಕು. ಇದುವರೆಗೂ ಆಗಿರುವ ಎಲ್ಲಾ ವರದಿಗಳನ್ನು ನಾಳೆಯೇ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ತಾಲ್ಲೂಕಿನ ದಂಡಾಧಿಕಾರಿ ಸುದರ್ಶನ್ ರವರು ಖಡಕ್ ಸಂದೇಶ ನೀಡುವ ಮೂಲಕ ಆದೇಶಿಸಿದರು.

ಅವರು ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು..


ತಾಲ್ಲೂಕಿನಲ್ಲಿ ಅನುಮತಿ ಮೇರೆಗೆ ತೆರೆಯುವ ಯಾವುದೇ ರೀತಿಯ ಅಂಗಡಿಗಳಿರಲಿ, ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮಾತ್ರ ತೆರೆಯಬೇಕು. ತುಂಬಾ ಅವಶ್ಯ ಹೊರತುಪಡಿಸಿ ಯಾವುದೇ ರೀತಿಯ ವಾಹನಗಳು ಸಹ ಈ ಸಮಯದಲ್ಲಿ ರಸ್ತೆಗಿಳಿಯಬಾರದು. ಇದರ ಹೊಣೆ ಸಂಪೂರ್ಣ ಟಾಸ್ಕ್ ಫೋರ್ಸ್ ಸಮಿತಿಯದ್ದಾಗಿರುತ್ತದೆ.


ಮದುವೆ ಮತ್ತಿತರ ಕಾರ್ಯಗಳಿಗೆ ಹೆಚ್ಚಿನ ಮಂದಿ ಸೇರುತ್ತಿದ್ದಾರೆ. ನಿಮಗೆ ಯಾಕೆ ಗೊತ್ತಾಗುತ್ತಿಲ್ಲ. ಗ್ರಾಮ ಸೇವಕ, ವಾಟರ್ ಮನ್, ಬಿಲ್ ಕಲೆಕ್ಟರ್, ಆಶಾ ಕಾರ್ಯಕರ್ತೆ, ಪಂಚಾಯತಿ ಸದಸ್ಯರು ಇದ್ದು, ಮದುವೆಗೆ ಮುನ್ನಾ ಯಾಕೆ ನಿಮಗೆ ಮಾಹಿತಿ ಸಿಗುತ್ತಿಲ್ಲ. ಹೊರ ಜಿಲ್ಲೆಯಿಂದ ಮದುವೆಗೆ ಮತ್ತು ಸಾವಿಗೆ ಬಂದು ಹೋಗಿರುವ ಮಾಹಿತಿ ಯಾಕೆ ಪಡೆದಿಲ್ಲ. ನಾಳೆ ಏನಾದರೂ ಸೋಂಕು ಪತ್ತೆಯಾಗಿ, ಹೆಚ್ಚು ಮಂದಿ ಕ್ವಾರಂಟೈನ್ ಮಾಡಬೇಕಾದರೆ ಸಂಬಂಧಿಸಿದ ಅಧಿಕಾರಿಗಳೇ‌ ನೇರ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.


ಎಲ್ಲಾ ಅಧಿಕಾರಿಗಳು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಿ. ಹೇರ್ ಕಟಿಂಗ್ ಸಲೂನ್ ಗಳನ್ನು ತೆರೆಯದಂತೆ ಜಾಗ್ರತೆ ವಹಿಸಬೇಕು. ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ಅನುಮತಿ ಪಡೆಯದಿರುವ ಅಂಗಡಿಗಳನ್ನು ಯಾವುದೇ ಕಾರಣಕ್ಕು ತೆರೆಸಬೇಡಿ, ಹೊಸದಾಗಿ ಲೈಸೆನ್ಸ್ ಕೊಟ್ಟ ನಂತರ ತೆರೆಯಿರಿ. ಒಂದು ಪ್ರಣಾಳಿಕೆ ತಯಾರಿಸಿ ಎಲ್ಲಾ ಅಂಗಡಿಗಳಿಗೂ ನೀಡಿ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಚಂದ್ರು ಅಧಿಕಾರಿಗಳಿಗೆ ಸೂಚಿಸಿದರು.


ಕೋಳಿ ಅಂಗಡಿಗಳಿಗೆ ಲೈಸೆನ್ಸ್ ನೀಡುವಾಗಲೆ, ಕಸವನ್ನು ಎಲ್ಲಿ, ಯಾವರೀತಿ ವಿಸರ್ಜಿಸುತ್ತಾರೆ ಎಂದು ಬರೆಸಿಕೊಂಡು ಅನುಮತಿ ನೀಡಿ. ಮೆಡಿಕಲ್ ಹೊರತುಪಡಿಸಿ ಬೇರೆ ಅಂಗಡಿಗಳಲ್ಲಿ ಯಾವುದೇ ರೀತಿಯ ಮಾತ್ರೆಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಿ, ಈ ಎಲ್ಲಾ ವಿಚಾರಗಳನ್ನು ಪ್ರತಿ ಗ್ರಾಮಗಳಲ್ಲಿ ಟಾಂಟಾಂ (ತಮಟೆಯವರ ಮೂಲಕ ಸಾರುವುದು) ಮೂಲಕ ಜಾಗೃತಿ ಮೂಡಿಸಸಬೇಕು ಎಂದು ತಹಶಿಲ್ದಾರ್ ಸುದರ್ಶನ್ ರವರು ಅಧಿಕಾರಿ ವರ್ಗದವರಿಗೆ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑