Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ಕ್ವಾರಂಟೈನ್ ನಲ್ಲಿದ್ದ ೬೮ ಮಂದಿಗೂ ನೆಗೆಟಿವ್. ಹರ್ಷ ವ್ಯಕ್ತಪಡಿಸಿದ ಅಶ್ವಥ್ ನಾರಾಯಣ

Posted date: 07 May, 2020

Powered by:     Yellow and Red

ರಾಮನಗರದಲ್ಲಿ ಕ್ವಾರಂಟೈನ್ ನಲ್ಲಿದ್ದ ೬೮ ಮಂದಿಗೂ ನೆಗೆಟಿವ್. ಹರ್ಷ ವ್ಯಕ್ತಪಡಿಸಿದ ಅಶ್ವಥ್ ನಾರಾಯಣ

ರಾಮನಗರ:ಮೇ/೦೭/೨೦/ಗುರುವಾರ. ಪಾದರಾಯನಪುರದ ಪುಂಡರ ಪ್ರಕರಣದಿಂದಾಗಿ ರಾಮನಗರ ಜಿಲ್ಲೆಗೆ ಆವರಿಸಿದ್ದ ಕೊರೊನಾ ಆತಂಕ ಸದ್ಯದ ಮಟ್ಟಿಗೆ ದೂರಾಗಿದೆ. ಈ ಪ್ರಕರಣದಿಂದಾಗಿ ಕ್ವಾರೆಂಟೈನ್ ಆಗಿದ್ದ ನಗರಸಭೆ ಹಾಗೂ ವೈದ್ಯಕೀಯ ಇಲಾಖೆಯ ತಂಡ ೧೪ ದಿನಗಳ ಕ್ವಾರೆಂಟೈನ್ ಪೂರ್ಣಗೊಂಡಿದ್ದು, ಇಂದು ಮನೆ ಸೇರಲಿದ್ದಾರೆ.


ಅದರ ಜೊತೆಗೆ ಪಾದರಾಯನಪುರದ ಪುಂಡರು ಜೈಲಿನಲ್ಲಿದ್ದ ವೇಳೆ ಅವರೊಟ್ಟಿಗೆ ನೇರ ಸಂಪರ್ಕ ದಲ್ಲಿದ್ದ ಜೈಲು ಸಿಬ್ಬಂದಿಯ ಕ್ವಾರೆಂಟೈನ್ ಮುಂದುವ ರಿಯಲಿದೆ. ಬೆಂಗಳೂರಿನ ಪಾದಾಯನಪುರದ ಪುಂಡರನ್ನು ಏಪ್ರಿಲ್ ೨೧ ರಂದು ರಾಮನಗರ ಜೈಲಿಗೆ ಕರೆತರಲಾಗಿತ್ತು.


ಅದರ ಮರುದಿನವೇ ಐದು ಮಂದಿ ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆ ಕಾರಣದಿಂದ ಪುಂಡರನ್ನು ಬೆಂಗಳೂರಿಗೆ ಮತ್ತೆ ಸ್ಥಳಾಂತರ ಮಾಡಿ, ಜೈಲಿನ ೪೧ ಸಿಬ್ಬಂದಿಯನ್ನು ಜೈಲಿನಲ್ಲಿಯೇ ಕ್ವಾರೆಂಟೈನ್ ಮಾಡಲಾಗಿತ್ತು. ಇನ್ನು ಎರಡನೇ ಹಂತದ ಸಂಪರ್ಕದಲ್ಲಿದ್ದ ನಗರಸಭೆ, ವೈದ್ಯಕೀಯ ಸಿಬ್ಬಂದಿಯ ೧೮ ಮಂದಿಯನ್ನು ಹಾಸ್ಟಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು.

ಇಂದು ೧೪ ದಿನಗಳ ಕ್ವಾರೆಂಟೈನ್ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ನಗರಸಭೆ ಹಾಗು ವೈದ್ಯಕೀಯ ಇಲಾಖೆಯ ೧೮ ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಇವರು ಇನ್ನು ಮುಂದೆ ಹೋಂ ಕ್ವಾರೆಂಟೈನ್ ಆಗಲಿದ್ದಾರೆ. ಆದರೆ, ೪೧ ಮಂದಿ ಜೈಲು ಸಿಬ್ಬಂದಿಯ ಕ್ವಾರೆಂಟೈನ್ ಇನ್ನಷ್ಟು ದಿನ ಮುಂದುವರಿಯಲಿದೆ.


೧೪ ದಿನಗಳ ಕ್ವಾರೆಂಟೈನ್ ಅವಧಿ ಪೂರ್ಣ ಗೊಂಡರೂ, ಜಿಲ್ಲೆಯಲ್ಲಿ ನಿಗಾದಲ್ಲಿದ್ದವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಹೀಗಾಗಿ ರಾಮನಗರ ಮತ್ತೆ ಗ್ರೀನ್ ಝೋನ್ ವಲಯದ ಪಟ್ಟವನ್ನು ಭದ್ರ ಪಡಿಸಿಕೊಂಡಿದೆ. ಇನ್ನು ಜಿಲ್ಲಾಡಳಿತದ ಕ್ರಮಗಳಿಂದಾಗಿ ಜಿಲ್ಲೆ ಕೊರೊನಾದಿಂದ ಸೇಫ್ ಆಗಿದೆ.

ಈ ವಿಷಯವನ್ನು ಜಿಲ್ಲಾಧಿಕಾರಿಗಳಾದ ಎಂ.ಎಸ್‌ಅರ್ಚನಾ ಅವರು ದೃಢಪಡಿಸಿದ್ದು, ಜೈಲಿನಲ್ಲಿದ್ದವರ ಸೋಂಕಿತರ ಪ್ರಥಮ ಸಂಪರ್ಕದಲ್ಲಿ ಇದ್ದುದರಿಂದ ಅವರಿಗೆ ಹೆಚ್ಚಿನ ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ಅದನ್ನೂ ಸಹ ಅವರು ಮುಗಿಸಿ ಮುಕ್ತರಾಗಿ ಹೊರಗೆ ಬರಲಿದ್ದಾರೆ ಎಂಬ ಭರವಸೆ ಹೊಂದಿದ್ದಾರೆ.


ಜಿಲ್ಲೆಯಲ್ಲಿ ೬೮ ವಿವಿಧ ಇಲಾಖೆಯ ನೌಕರರ ಕೊರೊನಾ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ  ಟ್ವೀಟ್ ಮಾಡಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರು, ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ್ದ, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು ೬೮ ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣೆ ಫಲಿತಾಂಶಗಳು ಕೂಡ ನೆಗೆಟಿವ್ ಬಂದಿವೆ. ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ ಹಸಿರುವಲಯವಾಗಿ ಉಳಿದಿದೆ  ಇದು ಸಂತಸದ ಸಂಗತಿ ಎಂದಿದ್ದಾರೆ.


ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ವೈಯಕ್ತಿಕ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಅವರಿಗೂ ನೆಗೆಟಿವ್ ಫಲಿತಾಂಶ ಬಂದಿದ್ದು,  ಸಚಿವ ಸಂಪುಟದ ಕಾರ್ಯಗಳಲ್ಲಿ ಭಾಗಿಯಾಗಿದ್ದೇನೆ. ಎಂದಿನಂತೆ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ಈ ದಿನಗಳಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ನನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑