Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ

Posted date: 23 May, 2020

Powered by:     Yellow and Red

ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನೆ ಶೂನ್ಯ ಎನಿಸುತ್ತಿದೆ. ಸಾಧನೆ ಮಾಡದಿದ್ದರೂ ಪರವಾಗಿಲ್ಲ, ನಾಲ್ಕು ಜನರಿಗೆ ಸಹಾಯ ಮಾಡುವ ಮೂಲಕ ಜನಮಾನಸದಲ್ಲಿ ಉಳಿಯಬೇಕು ಎಂಬ ಮನೋಭಾವನೆಯನ್ನು ಬಾಲು ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ವೆಂಕಟಸುಬ್ಬಯ್ಯ ಚೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.


ನಮ್ಮ ಶಾಲೆಯು ಅಂದಿನ ಶಾಸಕ ಸಿ ಪಿ ಯೋಗೇಶ್ವರ್ ಮತ್ತು ಅಂದಿನ ಉಪ ಪೋಲಿಸ್ ಅಧೀಕ್ಷಕ ಮಧುಕರ್ ಶೆಟ್ಟಿ ಯವರ ಅಮೃತ ಹಸ್ತದಿಂದ ಆರಂಭವಾಗಿ ಇಂದಿಗೆ ಹದಿನೆಂಟು ವರ್ಷಗಳಾಯಿತು. ಇದರ ಜೊತೆಯಲ್ಲಿ ಇಂದು ಜಗತ್ತಿಗೆ ಕೊರೊನಾ (ಕೋವಿಡ್-೧೯) ಎಂಬ ಮಹಾಮಾರಿ ವಕ್ಕರಿಸಿಕೊಂಡಿರುವುದರಿಂದ ಎಲ್ಲರೂ ಕಂಗಾಲಾಗುವುದರ ಜೊತೆಗೆ ಪೋಷಕರಿಗೆ ಶುಲ್ಕ ಕಟ್ಟಲು ಆಗುತ್ತಿಲ್ಲ ಎಂಬುದನ್ನು ಮನಗಂಡಿದ್ದೇವೆ.


ಶಾಲೆಯಲ್ಲಿ ಹಾಲಿ ಕಲಿಯುತ್ತಿರುವ ಎಲ್ಲಾ ತರಗತಿಯ ಮಕ್ಕಳು ಮತ್ತು ಯಾವುದೇ ಬೇರೆ ಶಾಲೆಯಿಂದ ಬಂದು ಸೇರಿಕೊಳ್ಳುವ ಮಕ್ಕಳು ಹಾಗೂ ಹೊಸದಾಗಿ ಸೇರ್ಪಡೆಯಾಗುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೂ ತಿಂಗಳ ಶುಲ್ಕ ಹೊರತುಪಡಿಸಿ ಅಡ್ಮಿಷನ್ ಶುಲ್ಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಡೆಯುವ ಶುಲ್ಕ ಸೇರಿದಂತೆ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ, ಆರ್ ಟಿ‌ ಇ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಯೂನಿಫಾರಂ ಗೆ ಹಣ ತೆಗೆದುಕೊಳ್ಳಲು ಅನುಮತಿ ಇದ್ದು ಈ ವರ್ಷ ಅದಕ್ಕೂ ಶುಲ್ಕ ಪಡೆಯುವುದಿಲ್ಲ ಎಂದು ಘೋಷಿಸಿದರು.


ಈಗಾಗಲೇ ಶಾಲೆ ನಡೆಸುವುದು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸಂಬಳ ನೀಡುವುದು ದುಸ್ತರವಾಗಿದೆ. ಸಾಧ್ಯವಾದರೆ ದಾನಿಗಳನ್ನು ಸಂಪರ್ಕಿಸುತ್ತೇವೆ. ನಮ್ಮ ಶಾಲೆಯಲ್ಲಿ ಯಾವುದೇ ಪಠ್ಯ ಪುಸ್ತಕಗಳು ಮತ್ತು ಯೂನಿಫಾರಂ ಸಹ ನೀಡುವುದಿಲ್ಲ. ಸರ್ಕಾರ ನೀಡುವ ಪುಸ್ತಕಗಳನ್ನು ನೀಡುತ್ತೇವೆ. ಯಾವುದೇ ಪೋಷಕರು ನಮಗೆ ನೇರವಾಗಿ ಹಣ ನೀಡದೆ ಚಲನ್ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಎಂದು ತಿಳಿಸಿದರು.


ಮತ್ತೊಬ್ಬ ಟ್ರಸ್ಟಿ ಬಾಲಸುಬ್ರಹ್ಮಣ್ಯಂ ಮಾತನಾಡಿ ನಾವು ಕೆಲ ಯುವಕರು ಸೇರಿಕೊಂಡು ಭವ್ಯ ಭಾರತ ಎಂಬ ಹೆಸರಿನ ಎನ್ ಜಿ ಓ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದ್ದು ಚನ್ನಪಟ್ಟಣ ದ ಬಡವರಿಗೆ ಹಿಂದುಳಿದ ವರ್ಗಗಳ ಜನರಿಗೆ ಅನುಕೂಲ ಕಲ್ಪಿಸಲು ನೆರವಾಗುತ್ತೇವೆ ಎಂದರು.


ಟ್ರಸ್ಟಿಗಳಾದ ಮನೋಜಂ, ಕಕಜವೇ ಯ ರಮೇಶಗೌಡ, ಬಿ ಟಿ ನಾಗೇಶ್ ಕರೀಂ ಸೇರಿದಂತೆ ಹಲವಾರು ಮಂದಿ ವೆಂಕಟಸುಬ್ಬಯ್ಯ ಚೆಟ್ಟಿ ಯವರಿಗೆ ಶುಭ ಕೋರಿ ಸನ್ಮಾನಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑