Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದ ಕುಂಬಾರ ಬೀದಿ ಸೀಲ್ಡೌನ್; ದ್ವಿತೀಯ ಹಂತದ ೨೨ ಮಂದಿ ಕ್ವಾರಂಟೈನ್

Posted date: 03 Jun, 2020

Powered by:     Yellow and Red

ರಾಮನಗರದ ಕುಂಬಾರ ಬೀದಿ ಸೀಲ್ಡೌನ್; ದ್ವಿತೀಯ ಹಂತದ ೨೨ ಮಂದಿ ಕ್ವಾರಂಟೈನ್

ರಾಮನಗರ:ಜೂ/೦೩/೨೦/ಬುಧವಾರ. ರಾಮನಗರ ಟೌನ್ ನ ಕುಂಬಾರ ಬೀದಿಯ ೫೭ ವರ್ಷದ ವ್ಯಕ್ತಿಯೊಬ್ಬ ಸುಲ್ತಾನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಇವನು ವಾಸವಾಗಿದ್ದ ಈ ಬೀದಿಯನ್ನು ಈಗ ಸಂಪೂರ್ಣವಾಗಿ ದಿಗ್ಬಂಧಿಸಲಾಗಿದೆ.


೨ನೆಯ ಸಂಪರ್ಕಕ್ಕೆ ಬಂದಿದ್ದ ೨೨ ಜನರನ್ನು ಕ್ವಾರಂಟೈನ್ ಮಾಡಲಾಗಿದೆ, ೧೦೦ ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಿದೆ. ಇಲ್ಲಿ ೬೦ ಮನೆಗಳು ಇದ್ದು, ೧೧೫ ಕ್ಕೂ ಹೆಚ್ಚು ಅಂಗಡಿಗಳು ಇವೆ. ಈ ಪ್ರದೇಶದಲ್ಲಿ ೨೩೦ ಮಂದಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.


ಶೆಟ್ಟಿಹಳ್ಳಿ ಬೀದಿ, ಪಶ್ಚಿಮದಲ್ಲಿ ಎಂ.ಜಿ ರಸ್ತೆ, ಉತ್ತರದಲ್ಲಿ ಕಲಾಸಿಪಾಳ್ಯ ಹಾಗೂ ದಕ್ಷಿಣದಲ್ಲಿ ಮದರ್‌ಖಾನ್ ಮೊಹಲ್ಲಾದವರೆಗಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ ಇಲ್ಲಿನ ವಾಸಿಗಳ ಓಡಾಟಕ್ಕೆ ನಿಬಂಧನೆಯನ್ನು ಹೇರಲಾಗಿದೆ.


ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರದೇಶ ಬೀಗ ಮುದ್ರೆ ಆದ ಮೇಲೆ ಆ ಪ್ರದೇಶದ ೬೦ ಕುಟುಂಬಗಳಿಗೆ ಇದ್ದಲ್ಲಿಯೇ ದಿನಬಳಕೆಯ ವಸ್ತುವನ್ನು ಪೂರೈಸಲು ನಗರಸಭೆ ನಿರ್ಧರಿಸಿದೆ. ಸಮೀಪದ ಮಾಂಸ ಹಾಗೂ ದಿನಸಿ ಮಾರಾಟಗಾರರಿಗೆ ಇ-ಪಾಸ್ ನೀಡ ಲಾಗುವುದು ಅವರು ಸಂಪೂರ್ಣ ಸುರಕ್ಷತಾ ಕ್ರಮ ಗಳೊಂದಿಗೆ ದಿನಸಿ ಮತ್ತು ಇತರೆ ಪದಾರ್ಥಗಳನ್ನು ಸರಬರಾಜು ಮಾಡುವರು ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑