Tel: 7676775624 | Mail: info@yellowandred.in

Language: EN KAN

    Follow us :


ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

Posted date: 03 Jun, 2020

Powered by:     Yellow and Red

ಕೃಷಿ ಯಂತ್ರಧಾರಾ ಕೇಂದ್ರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಚನ್ನಪಟ್ಟಣ:ಜೂ/೦೩/೨೦/ಬುಧವಾರ. ಯಾರನ್ನೂ ನಂಬಿ ರಾಜಕೀಯ ಮಾಡುವುದಿಲ್ಲ. ನಂಬಿದ ಕಾರ್ಯಕರ್ತರನ್ನು ಕೈಬಿಡುವುದೂ ಇಲ್ಲ. ಇನ್ನು ಮುಂದೆ ಯಾರ ಹಂಗಿನಲ್ಲೂ ಸರ್ಕಾರ ರಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ತಿರುಗೇಟು ನೀಡಿದರು. ಅವರು ತಾಲ್ಲೂಕಿನ ಕೃಷಿ ಇಲಾಖೆಯ ವತಿಯಿಂದ, ತಾಲ್ಲೂಕಿನ ಸುಣ್ಣಘಟ್ಟದಲ್ಲಿ ಕೃಷಿ ಯಂತ್ರೋಪಕರಣ ಗಳನ್ನು ಬಾಡಿಗೆಗೆ ನೀಡುವ ‘ಕೃಷಿಯಂತ್ರಧಾರಾ ಕೇಂದ್ರ’ ವನ್ನು ಉದ್ಘಾಟಿಸಿದ ನಂತರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಾತನಾಡಿದರು.


ರೈತರ ಬೆಳೆಯನ್ನು ಉಳಿಸುವ ಜೊತೆಗೆ ಪ್ರಾಣ ರಕ್ಷಣೆ ಮಾಡುವ ಹೊಣೆಯು ಸರ್ಕಾರದ ಹೊಣೆಯಾಗಿದೆ.

ಇತ್ತೀಚಿಗೆ ಜಿಲ್ಲೆಯಲ್ಲಿ ವನ್ಯ ಜೀವಿಗಳ ದಾಳಿಯಿಂದ ಜನರ ಪ್ರಾಣ ಹಾನಿಯಾಗುತ್ತಿದೆ. ಪಟ್ಟಣದಲ್ಲಿ ನಡೆದ ಕರಡಿ ದಾಳಿ ಯಿಂದ ನಗರಸಭೆ ಮಾಜಿ ಸದಸ್ಯೆ ಸಾಕಮ್ಮ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಇದು ನನಗೆ ನೋವು ತಂದಿದೆ. ಅವರನ್ನು ಉಳಿ ಸಲು ನನ್ನ ಕೈಯಲ್ಲಿ ಆದು ದ್ದನ್ನುಮಾಡಿದ್ದೇನೆ ಎಂದರು.


ಮಾಗಡಿ ತಾಲ್ಲೂಕಿನಲ್ಲಿ ಚಿರತೆ ದಾಳಿಯಿಂದ ಇಬ್ಬರ ಪ್ರಾಣ ಹರಣವಾಗಿದೆ. ಈ ಸರ್ಕಾರದ ಅರಣ್ಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಕುಟುಕಿದರು.

ಸರಕಾರ ಕಾಟಾಚಾರಕ್ಕೆ ರೈತರ ಪರ ಕಾಳಜಿ ಪ್ರದರ್ಶಿಸಬಾರದು, ಬಿರುಗಾಳಿ ಮಳೆಯಿಂದ ಬಾಧಿತರಾದ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿಕೊಡಬೇಕು. ವನ್ಯಜೀವಿಗಳ ದಾಳಿ ತಪ್ಪಿಸಲು ತಮ್ಮ ಸರ್ಕಾರವಿದ್ದಾಗ ರೂಪಿಸಿದ್ದ ೧೦೦ ಕೋಟಿ ಯೋಜನೆಯನ್ನು ಜಾರಿಗೆ ತಂದು ಅರಣ್ಯ ಪ್ರದೇಶದ ಗಡಿಯಲ್ಲಿ ತಂತಿ ಬೀಲಿ ನಿರ್ಮಿಸಬೇಕು ಎಂದರು.


ಟ್ರಾಕ್ಟರ್ ಚಲಾಯಿಸುವ ಮೂಲಕ ಶಾಸಕ ಕುಮಾರ ಸ್ವಾಮಿಯವರು ಸೇವಾ ಕೇಂದ್ರಕ್ಕೆ ಚಾಲನೆಯನ್ನು ನೀಡಿದರು. ಸಂದರ್ಭದಲ್ಲಿ ನಾನು ರಾಜಕೀಯಕ್ಕೆ ಬರುವ ಮೊದಲು ರೈತ ನಾಗಿ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿದ್ದೇನೆ, ಇತ್ತೀಚಿಗೆ ಮರೆತಿದ್ದೇನೆ ಎಂದು ನಿಧಾನಕ್ಕೆ ಟ್ರಾಕ್ಟರ್ ಚಾಲನೆ ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑