Tel: 7676775624 | Mail: info@yellowandred.in

Language: EN KAN

    Follow us :


ಬಗಲಲ್ಲೇ ಜಾಗ ಹುಡುಕುವ ನಾಯಕರು ಕುಮಾರಣ್ಣ ಬಂದಾಗ ತಪ್ಪಿಸಿಕೊಂಡಿದ್ದೇಕೆ. ಬಿಜೆಪಿ ಸೇರುವ ಗುಟ್ಟನ್ನು ಅವರೇ ಬಯಲು ಮಾಡಿದರೇ!?

Posted date: 04 Jun, 2020

Powered by:     Yellow and Red

ಬಗಲಲ್ಲೇ ಜಾಗ ಹುಡುಕುವ ನಾಯಕರು ಕುಮಾರಣ್ಣ ಬಂದಾಗ ತಪ್ಪಿಸಿಕೊಂಡಿದ್ದೇಕೆ. ಬಿಜೆಪಿ ಸೇರುವ ಗುಟ್ಟನ್ನು ಅವರೇ ಬಯಲು ಮಾಡಿದರೇ!?

ಚನ್ನಪಟ್ಟಣ:ಜೂ/೦೪/೨೦/ಗುರುವಾರ. ಕಳೆದವಾರ ತಾಲ್ಲೂಕಿನ ಈರ್ವ ದಳದ ಮುಖಂಡರು ಬಿಜೆಪಿ ಪಕ್ಷದ ಕದ ತಟ್ಟುತ್ತಿದ್ದು, ಆ ಪಕ್ಷ ಸೇರಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದಳದ ಕೆಲ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಸುದ್ದಿ ಪ್ರಕಟಿಸಿದ್ದೆವು. ಆಂತರಿಕ ವಿಷಯವನ್ನರಿತಿದ್ದ ದಳದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಇದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರು.


ಮೊನ್ನೆ ತಾಲ್ಲೂಕಿನಲ್ಲಿ ಮಳೆಗಾಳಿಗೆ ಬೆಳೆ ಕಳೆದುಕೊಂಡ ಕೃಷಿಕರಿಗೆ ಪರಿಹಾರ ಚೆಕ್ ವಿತರಣೆ ಹಾಗೂ ಕೃಷಿ ಇಲಾಖೆಯ ಯಂತ್ರಧಾರೆ ಯೋಜನೆಗೆ ಚಾಲನೆ ನೀಡಲು ಬಂದಿದ್ದ ಕುಮಾರಸ್ವಾಮಿ ಯವರ ಬಳಿ ತಾಲ್ಲೂಕಿನ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಎಂದಿನಂತೆ ಮುಗಿಬಿದ್ದಿದ್ದರೂ ಸಹ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಲಿಂಗೇಶ್ ಕುಮಾರ್ ಮತ್ತು ಸಿಂಗರಾಜಪುರ ದ ರಾಜಣ್ಣ (ಲಿಂಗರಾಜು) ಮಾತ್ರ ಕಾಣಿಸಿಕೊಳ್ಳಸಿರುವುದು, ಬಿಜೆಪಿ ಪಕ್ಷದ ಕದ ತಟ್ಟುತ್ತಿರುವುದು ಸತ್ಯ ಎಂಬುದನ್ನು ಸಾಬೀತು ಪಡಿಸಿವೆ ಎಂದು ಹಲವು ನಾಯಕರು ಮತ್ತು ಕಾರ್ಯಕರ್ತರ ಮಾತಿಗೆ ಪುಷ್ಟಿ ನೀಡಿದ್ದವು.


ಹೆಚ್ ಡಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಅಷ್ಟೇ ಯಾಕೆ ಇತ್ತೀಚಿಗೆ ರಾಜಕೀಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ನಿಖಿಲ್ ತಾಲ್ಲೂಕಿಗೆ ಬಂದರೆ ಸಾಕು ಲಿಂಗೇಶಕುಮಾರ್ ಬಗಲಲ್ಲಿ ನಿಂತು ಪೋಸ್ ಕೊಡುತ್ತಿದ್ದುದು ಸರ್ವೇಸಾಮಾನ್ಯ. ಸರ್ಕಾರದ ಪ್ರತಿನಿಧಿಯಾಗಿ, ಖಾಸಗಿಯಾಗಿ ಅಥವಾ ಯಾವುದೋ ಸಂಘಸಂಸ್ಥೆಗಳ ಕಾರ್ಯಕ್ರಮಕ್ಕೆ ಬಂದರೂ ಸಹ ಅವರು ಹಾಜರಿರುತ್ತಿದ್ದರು. ಆದರೆ ಮೊನ್ನೆ ಮಾತ್ರ ಕಾಣಿಸದೇ ಇರುವುದು ಯಾಕೆ ಎಂಬುದು ಕುತೂಹಲ ಹುಟ್ಟಿಸಿದೆ.


ನಗರದಲ್ಲಿರಲಿ ಸಿಂಗರಾಜಪುರಕ್ಕೆ ಹೋದಾಗಲು ಸಹ ರಾಜಣ್ಣ ನವರು ಕಾಣಿಸಲಿಲ್ಲ. ಪಕ್ಕದ ಗ್ರಾಮದವರೇ ಆದ ಲಿಂಗೇಶ್ ಕುಮಾರ್ ಸಹ ಅಲ್ಲಿಯೂ ಹಾಜರಾಗಲಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಈ ಈರ್ವರೂ ಬಿಜೆಪಿ ಪಕ್ಷಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಊಹಾಪೋಹಗಳು ಸುಳ್ಳಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ.

ಲಿಂಗೇಶ್ ಕುಮಾರ್ ಮತ್ತು ರಾಜಣ್ಣ ನವರು ಕಾರ್ಯಕರ್ತರ ಊಹಾಪೋಹಗಳಿಗೆ ಯಾವ ರೀತಿ ಸಮರ್ಥನೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑