Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಚನ್ನಪಟ್ಟಣ ದಲ್ಲಿ ತಲಾ ಒಂದೊಂದು ಕೊರೊನಾ ಪಾಸಿಟಿವ್. ಆತಂಕದಲ್ಲಿ ನಾಗರೀಕರು

Posted date: 04 Jun, 2020

Powered by:     Yellow and Red

ರಾಮನಗರ ಚನ್ನಪಟ್ಟಣ ದಲ್ಲಿ ತಲಾ ಒಂದೊಂದು ಕೊರೊನಾ ಪಾಸಿಟಿವ್. ಆತಂಕದಲ್ಲಿ ನಾಗರೀಕರು

ರಾಮನಗರ:ಜೂ/೦೪/೨೦/ಗುರುವಾರ. ರಾಮನಗರದ ಕುಂಬಾರಗೇರಿಯಲ್ಲಿ ಐವತ್ತೇಳು ವರ್ಷದ ವ್ಯಕ್ತಿಗೆ ಸೋಂಕು ತಗುಲಿದ ನಂತರ ಅವರ ಕುಟುಂಬವನ್ನು ಸ್ವಾಬ್ ತೆಗೆದು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಅವರಲ್ಲೊಬ್ಬರಾದ ಅವರ ಪುತ್ರನೊಬ್ಬನಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.


ಕ್ವಾರಂಟೈನ್ ನಲ್ಲಿದ್ದ ೨೩ ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಇದೀಗ ಯುವಕನನ್ನು ರಾಮನಗರ ಕಂದಾಯ ಭವನದ ಕೋವಿಡ್ ರೆಫೆರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನ ಬಂದ ನಂತರ ವೃದ್ದ ವಾಸವಿದ್ದ ನಗರದ ಕುಂಬಾರ ಬೀದಿ, ಎಂ.ಜಿ ರಸ್ತೆ ಸೀಲ್ ಡೌನ್ ಮಾಡಲಾಗಿತ್ತು.


ಚನ್ನಪಟ್ಟಣ ದಲ್ಲಿ ಅಧಿಕೃತವಾಗಿ ಪ್ರಥಮ ಬಾರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ತಾಲ್ಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ತಾಲ್ಲೂಕಿನ ಶ್ಯಾನುಭೋಗನಹಳ್ಳಿಯ ೨೮ ವರ್ಷದ ಯುವಕನಿಗೆ ಪಾಸಿಟಿವ್ ಬಂದಿದ್ದು ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈತ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪಾದರಾಯನಪುರ ದ ಪುಂಡರು ಬಂದಿದ್ದಾಗ ಸೋಂಕು ತಗುಲಿರಬಹುದು ಎಂದು ಎಂದು ಊಹಿಸಲಾಗಿದೆ.


ರಾಮನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕೊರೊನಾ ಪಾಸಿಟಿವ್ ಕೇಸುಗಳಿರುವುದು ದೃಢಪಟ್ಟಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑