Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಪೀಡಿತ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಿದ ಜಿಲ್ಲಾಡಳಿತ

Posted date: 05 Jun, 2020

Powered by:     Yellow and Red

ಕೊರೊನಾ ಪೀಡಿತ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಿದ ಜಿಲ್ಲಾಡಳಿತ

ಚನ್ನಪಟ್ಟಣ:ಜೂ/೦೫/೨೦/ಶುಕ್ರವಾರ.


ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ, ಕೋಡಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನುಭೋಗನಹಳ್ಳಿಯಲ್ಲಿ ೨೮ ವರ್ಷದ ಯುವಕನಿಗೆ ಕೊರೊನಾ (ಕೋವಿಡ್-೧೯) ಸೋಂಕು ತಗುಲಿರುವುದು ದೃಢ ಪಟ್ಟ ನಂತರ ಆತನನ್ನು ರಾಮನಗರದ ಕಂದಾಯ ಭವನದಲ್ಲಿ ನಿರ್ಮಾಣವಾಗಿರುವ ಕೋವಿಡ್ ರೆಫರಲ್ ಆಸ್ಪತ್ರೆಯ ನಿಗಾಘಟಕದಲ್ಲಿ ಇಡಲಾಗಿದೆ.


ಗ್ರಾಮದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ದಲ್ಲಿದ್ದ ಒಟ್ಟು ೭೦ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ೨೪ ಮಂದಿಯ ಸ್ವಾಬ್ ತೆಗೆದು, ಇಂದು ಪರೀಕ್ಷೆಗೆ ಕಳುಹಿಸಿಲಾಗಿದೆ. ಉಳಿದ ೫೬ ಮಂದಿಯು ದ್ವಿತೀಯ ಸಂಪರ್ಕಕ್ಕೆ ಬಂದಿದ್ದ್ದವರಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಮೇಲಿನ ಎಲ್ಲಾ ೭೦ ಶಂಕಿತ ರನ್ನು ಹೊನ್ನನಾಯಕನಹಳ್ಳಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜು ಅವರು ತಿಳಿಸಿದ್ದಾರೆ.


ಶಾನುಭೋಗನಹಳ್ಳಿಯಲ್ಲಿ ೧೭೯ ಮಂದಿ ಜನಸಂಖ್ಯೆ ಇದ್ದು, ೫೦ ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್‌ಎಂದು, ೧೦೦ ಮೀಟರ್ ಪ್ರದೇಶ ವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಸಂಪೂರ್ಣ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.

ಸೀಲ್ಡೌನ್ ಮಾಡಿರುವ ಗ್ರಾಮದಲ್ಲಿ ಗ್ರಾಮದಿಂದ ಹೊರಗೆ ಹೋಗದಂತೆ ಹಾಗೂ ಒಳಗೆ ಬರದಂತೆ ನಿಷೇಧಿಸಲಾಗಿದ್ದು. ಅವರಿಗೆ ಬೇಕಾದ ಆಹಾರ ಪದಾರ್ಥ ಗಳನ್ನು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮನೆಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸುದರ್ಶನ್ ಅವರು ಮಾಹಿತಿ ನೀಡಿದ್ದಾರೆ.


ಸರ್ಕಾರದ ಆದೇಶದ ಪ್ರಕಾರ ೭ ರಿಂದ ೧೪ ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಶಂಕಿತರಿಗೆ ಸೋಂಕು ತಗಲದಿರುವುದು ದೃಢವಾದ ನಂತರ ಜಿಲ್ಲಾಡಳಿತದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗುವುದು.

ಈ ಸಂಬಂಧ ಗ್ರಾಮದಲ್ಲಿ ಪ್ರಥಮ ದರ್ಜೆ ಅಧಿಕಾರಿಯನ್ನು ಉಸ್ತುವಾರಿ ಗೆ ನೇಮಿಸಲಾಗಿದ್ದು, ಅವರ ಜೊತೆಯಲ್ಲಿ ಪೊಲೀಸರು, ಆರೋಗ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದು ಕ್ರಮಕೈಗೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑