Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೭೧: ಶಕುನಕ್ಕಿರುವ ಪ್ರಾಧಾನ್ಯತೆ ಏನು ?

Posted date: 02 Jul, 2020

Powered by:     Yellow and Red

ತಾಳೆಯೋಲೆ ೧೭೧: ಶಕುನಕ್ಕಿರುವ ಪ್ರಾಧಾನ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಶಕುನಕ್ಕಿರುವ ಪ್ರಾಧಾನ್ಯತೆ ಏನು ?


ಭಾರತೀಯ ಸಂಪ್ರದಾಯವು ಶಕುನಗಳು ಮುಂಬರುವ ಸುಖ ದುಃಖಗಳಿಗೆ ಸೂಚನೆಯಾಗಿರುವುದೆಂದು ನಂಬಿರುವರು. ಶಕುನಕ್ಕೆ ಸಂಬಂಧಿಸಿದ ಅನೇಕ ಶಾಸ್ತ್ರಗಳನ್ನು ಬೆಳೆಸಿ ಆದರಿಸಲಾಗಿದೆ.


ಶಕುನಗಳು ಪ್ರಧಾನವಾಗಿ ಶುಭ, ಅಶುಭ ಎಂದು ವಿಧಗಳು. ಶುಭಶಕುನವನ್ನು ಗಮನಿಸಿದ ನಂತರ ಶುಭವು ನಡೆಯುವುದು. ಹಾಗೆಯೇ ಅಶುಭ ಶಕುನಕ್ಕೆ ಎದುರು ಬಿದ್ದ ನಂತರ ನಷ್ಟದಾಯಕವೂ ಹಾಗೂ ದುಃಖವುಂಟಾಗುವ ಘಟನೆ ನಡೆಯುವುದೆಂಬ ನಂಬಿಕೆ. ಪ್ರಾಚೀನ ಕಾಲದಲ್ಲಿ ರಾಜರು ಸಹ ಯಾವುದಾದರೂ ಮುಖ್ಯವಾದ ಕೆಲಸದ ಮೇಲೆ ಪ್ರಯಾಣಕ್ಕೆ ಸಿದ್ಧರಿರುವಾಗ ಶಕುನಕ್ಕೆ ಬಹಳ ಪ್ರಾಧಾನ್ಯತೆಯನ್ನು ಕೊಡುತ್ತಿದ್ದರು.


ಮುಖ್ಯವಾಗಿ ನಾವು ಪಾಲಿಸಬೇಕಾಗಿರುವುದೇನೆಂದರೆ, ಯಾರಾದರೂ ಒಂದು ಕೆಲಸದ ಮೇಲೆ ಹೊರಟಾಗ ಹಿಂದಿನಿಂದ ಕರೆಯಬಾರದು. ಇದನ್ನು ಅಪಶಕುನವಾಗಿ ಭಾವಿಸಲಾಗಿದೆ. ಬರುವವರನ್ನು ಆಹ್ವಾನಿಸುವುದನ್ನು ಒಂದು ಶುಭ ಶಕುನವಾಗಿರುವುದು.


*ಕೆಲವು ಶುಭ ಶಕುನಗಳನ್ನು ತಿಳಿದುಕೊಳ್ಳೋಣ. ಹೂವು, ಮಾಂಸ, ಮೀನು, ವೃದ್ಧರು, ಹಸು, ಮೇಕೆ, ಎತ್ತುಗಳು, ಕುದುರೆಗಳು, ಆನೆಗಳು, ಬೆಂಕಿ, ಹಸು ಸಗಣಿ, ಬಂಗಾರ, ಬೆಳ್ಳಿ, ರತ್ನ, ವೇಶ್ಯೆ, ಕನ್ನಡಿ, ನಿಶ್ಯಬ್ದವಾಗಿ ಹೋಗುತ್ತಿರುವ ಶವ ಯಾತ್ರೆ, ಮುಂತಾದವು ಎದುರು ಬಂದರೆ ಅಥವಾ ನೋಡಿದರೂ ಸಹ ಶುಭ ಶಕುನವೆಂದು ನಂಬುವರು.*


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑