Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ

Posted date: 08 Jul, 2020

Powered by:     Yellow and Red

ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ

ಚನ್ನಪಟ್ಟಣ:ಜು/೦೮/೨೦/ಬುಧವಾರ. ತಾಲ್ಲೂಕಿನ ಅರಳಾಳುಸಂದ್ರ (ವಿದ್ಯಾಸಂದ್ರ) ಗ್ರಾಮದ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೪೯ ಕ್ಕೆ ಏರಿಕೆಯಾಗಿದೆ.


೩೮ ವರ್ಷದ ರೈಲ್ವೇ ಪೋಲೀಸರೊಬ್ಬರಿಗೆ ಮೂರು ದಿನಗಳ ಹಿಂದೆಯೇ ಸೋಂಕು ದೃಢಪಟ್ಟಿದ್ದು, ಆತನ ಪೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿರಲಿಲ್ಲ.

ಇಂದು ಪೋಲೀಸರು ಮತ್ತು ಸೋಂಕಿತನ ಪೋಷಕರ ನೆರವು ಪಡೆದು ಪತ್ತೆಹಚ್ಚಲಾಗಿದ್ದು ಅವರನ್ನು ರಾಮನಗರ ದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.


*ಎರಡು ಕಡೆ ಪ್ರಥಮ ಸೋಂಕಿತರು*

ಅರಳಾಳುಸಂದ್ರ ಗ್ರಾಮದ ಪೋಷಕರು ಮತ್ತು ಆತನ ಮಡದಿಯ ಗ್ರಾಮವಾದ ಮಳವಳ್ಳಿ ತಾಲ್ಲೂಕಿನ ಗ್ರಾಮ ಎರಡರಲ್ಲೂ ಪ್ರಥಮ ಸೋಂಕಿತರು ಇದ್ದು ಅವರನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ.


*ಅಧಿಕಾರಿಗಳಿಗೆ ತಲೆನೋವಾಗುತ್ತಿರುವ ನೇರ ಸಂದೇಶ*

ಸೋಂಕು ಪರೀಕ್ಷೆಗೆ ದ್ರವ ನೀಡುವ ಸಂದರ್ಭದಲ್ಲಿ ಶಂಕಿತರು ವಿಳಾಸ ಮತ್ತು ಮೊಬೈಲ್ ನಂಬರ್ ನ್ನು ಪರೀಕ್ಷಾ ಕೇಂದ್ರದಲ್ಲಿ ನೀಡಿರುತ್ತಾರೆ.ಶಂಕಿತರಿಗೆ ಸೋಂಕು ದೃಢವಾದರೆ ಆ ಸಂದೇಶವು ನೇರವಾಗಿ ಸೋಂಕಿತರ ಮೊಬೈಲ್ ಗೆ ತಲುಪುತ್ತಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಕೆಲವು ಸೋಂಕಿತರು ಸಿಮ್ ಕಾರ್ಡ್ ಬಿಚ್ಚಿಡಯವುದು ಅಥವಾ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುವುದನ್ನು ಮಾಡುತ್ತಿದ್ದಾರೆ.


ಸೋಂಕು ದೃಢಪಟ್ಟಿದೆ ಎಂಬ ಸಂದೇಶ ಬಂದಾಗ ಅಧಿಕಾರಿಗಳು ದೂರವಾಣಿ ಕರೆ ಮಾಡಿದಾಗ ಆತ ಸಿಗದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನು ಎಷ್ಟು ಸಮಯ ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೋ ಅಷ್ಟು ಸಮಯ ಅವನಿಗೆ ಸೋಂಕು ಹೆಚ್ಚಾಗುವುದರ ಜೊತೆಗೆ ಆತನ ಜೊತೆಯಿರುವವರಿಗೂ ಸೋಂಕು ಬಹುಬೇಗ ಹರಡುತ್ತದೆ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು ತಾಲ್ಲೂಕಿನಲ್ಲಿಯೇ ಇಂತಹ ಮೂರ್ನಾಲ್ಕು ಪ್ರಕರಣಗಳು ನಡೆದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑