Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರದಲ್ಲಿ ಯಶಸ್ವಿಯಾದ ಲಾಕ್ಡೌನ್

Posted date: 12 Jul, 2020

Powered by:     Yellow and Red

ಚನ್ನಪಟ್ಟಣ ನಗರದಲ್ಲಿ ಯಶಸ್ವಿಯಾದ ಲಾಕ್ಡೌನ್

ಚನ್ನಪಟ್ಟಣ:ಜು/೧೨/೨೦/ಭಾನುವಾರ. ಕೊರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಶನಿವಾರ ರಾತ್ರಿ ೮:೦೦ ಗಂಟೆಯಿಂದ ಸೋಮವಾರ ಮುಂಜಾನೆ ೫:೦೦ ಗಂಟೆಯ ವರೆಗೆ ಲಾಕ್ಡೌನ್ ಗೆ ಕರೆಕೊಟ್ಟಿತ್ತು. ಅಕ್ಷರಶಃ ಕಾನೂನು ಪಾಲಿಸಿದ ವರ್ತಕರು ಮತ್ತು ಗ್ರಾಹಕರು ನಗರದಲ್ಲಿ ಬಹುತೇಕ ಲಾಕ್ಡೌನ್ ಯಶಸ್ವಿಯಾಗಲು ಸಹಕರಿಸಿದರು.


ಕೊರೋನಾ ಸೋಂಕಿನ ತೀವ್ರತೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯಸರ್ಕಾರ ಕರೆನೀಡಿರುವ ಭಾನುವಾರದ ಲಾಕ್ ಡೌನ್ ಗೆ ಸ್ಪಂದಿಸಿದ  ಬೊಂಬೆನಾಡಿಗರು ಉತ್ತಮ ಪ್ರತಿಕ್ರಿಯೆ ನೀಡಿದರು.


ಕೆಲ ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ, ಉಳಿದೆಲ್ಲ ವಹಿವಾಟು ಸ್ಥಗಿತಗೊಂಡಿತು. ನಗರದ ಹೆದ್ದಾರಿಯಲ್ಲಿ ಸರಳ ಸಂಚಾರವನ್ನು ಹೊರತುಪಡಿಸಿ, ಇಡೀ ನಗರ ಸ್ತಬ್ಧಗೊಂಡಿತ್ತು.


ಇನ್ನು ಗ್ರಾಮೀಣ ಭಾಗದಲ್ಲಿ ಕೊಂಚ ನೀರಸ ಪ್ರತಿಕ್ರಿಯೆ ಕಂಡುಬಂದಿದ್ದು, ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಡಂಬಳ್ಳಿ ಗ್ರಾಮ ಸಂಪೂರ್ಣ ಲಾಕ್ಡೌನ್ ಆದರೆ ಹೊಂಗನೂರು, ಬೇವೂರು ಗ್ರಾಮದಂತಹ ದೊಡ್ಡ ಹಳ್ಳಿಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿತ್ತು.


ನಗರದ ಪೇಟೆ ಜನನಿಬಿಡ ಪ್ರದೇಶಗಳಾದ ಜೆಸಿ ರಸ್ತೆ, ಎಂ ಜಿ ರಸ್ತೆ, ಅಂಚೆ ಕಛೇರಿ ರಸ್ತೆ ಗಳಲ್ಲಿ ಕೆಲ ‌ಬೀದಿ ಬದಿಯ ಅಗತ್ಯ ವಸ್ತುಗಳ ಅಂಗಡಿಗಳು ಹಾಗೂ ಹಾಲು, ಹಣ್ಣು, ತರಕಾರಿ ‌ಮತ್ತು ಮಾಂಸದಂಗಡಿಗಳು ತೆರೆದು ಗ್ರಾಹಕರಿಗೆ ಅನುಕೂಲ ಕಲ್ಪಿಸಿದವು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑