Tel: 7676775624 | Mail: info@yellowandred.in

Language: EN KAN

    Follow us :


ನಗರದ ಇಬ್ಬರು ಖಾಸಗಿ ವೈದ್ಯರು ಸೇರಿ ಇಂದು ೩ ಮಂದಿಗೆ ಸೋಂಕು ದೃಢ. ಭೇಟಿ ನೀಡಿದ ರೋಗಿಗಳಲ್ಲಿ ಭೀತಿ

Posted date: 13 Jul, 2020

Powered by:     Yellow and Red

ನಗರದ ಇಬ್ಬರು ಖಾಸಗಿ ವೈದ್ಯರು ಸೇರಿ ಇಂದು ೩ ಮಂದಿಗೆ ಸೋಂಕು ದೃಢ. ಭೇಟಿ ನೀಡಿದ ರೋಗಿಗಳಲ್ಲಿ ಭೀತಿ

ಚನ್ನಪಟ್ಟಣ:ಜು/೧೩/೨೦/ಸೋಮವಾರ. ಇಂದು ಚನ್ನಪಟ್ಟಣ ನಗರದ ಒಂದು ನರ್ಸಿಂಗ್ ಹೋಂ ಹಾಗೂ ಇನ್ನೊಂದು ಕ್ಲಿನಿಕ್‌ನ ಪುರುಷ ವೈದ್ಯ ರಿಗೆ ಹಾಗೂ ೬೧ ವರ್ಷದ ನಿವೃತ್ತ ಪ್ರಾಂಶುಪಾಲರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.


ನಗರದ ಕುವೆಂಪು ನಗರದ ಎರಡನೇ ತಿರುವಿನಲ್ಲಿರುವ ಪುಣ್ಯ ನರ್ಸಿಂಗ್ ಹೋಮ್ ನ ಪುರುಷ ವೈದ್ಯ ಹಾಗೂ ಸಾತನೂರು ವೃತ್ತದಲ್ಲಿ ಇತ್ತೀಚೆಗಷ್ಟೇ ಕ್ಲಿನಿಕ್ ತೆಗೆದು ಚಿಕಿತ್ಸೆ ನೀಡುತ್ತಿದ್ದ ಗೋಪಿ ಕ್ಲಿನಿಕ್ ನ ಪುರುಷ ವೈದ್ಯ ಹಾಗೂ ನಗರದ ರಾಘವೇಂದ್ರ ಬಡಾವಣೆ ಯ ನಿವಾಸಿ ನಿವೃತ್ತ ಪ್ರಾಂಶುಪಾಲರೊಬ್ಬರಿಗೆ ಇಂದು ಸೋಂಕು ದೃಢಪಟ್ಟಿದ್ದು ಎರಡು ಆಸ್ಪತ್ರೆಗಳನ್ನು ಸೀಲ್ಡೌನ್ ಮಾಡಲಾಗಿದೆ.


ಈಗಾಗಲೇ ಚನ್ನಪಟ್ಟಣ ನಗರದ ಬಹುತೇಕ ನಾಲ್ಕು ಭಾಗಗಳಲ್ಲಿ ಕೊರೊನಾ ಸೋಂಕು ಹರಡಿದ್ದು, ಗೃಹ ಬಂಧನ ಹಾಗೂ ಬೀದಿಗಳ ಸೀಲ್ಡೌನ್, ಅದೇ ರೀತಿ ಯಲ್ಲಿ ಬಫರ್ ಝೋನ್ ಗಳನ್ನು ಮಾಡಿ ರೋಗ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ರಯೋಗ ನಡೆಯುತ್ತಿದೆ.

ಇಷ್ಟೆಲ್ಲರ ನಂತರ ಇಲ್ಲಿನ ಪುಣ್ಯ ನರ್ಸಿಂಗ್ ಹೋಂ ಮುಖ್ಯ ಪುರುಷ ವೈದ್ಯರೊಬ್ಬರಿಗೆ ಕೋವಿಡ್-೧೯ ಸೋಂಕು ದೃಢವಾಗಿದ್ದು, ಅವರಲ್ಲಿ ಚಿಕಿತ್ಸೆ ಪಡೆದವರೆಲ್ಲರೂ ಕೋವಿಡ್ ಚಿಕಿತ್ಸೆಗೆ ಒಳಗಾಗಬೇಕು ಎಂದು ತಾಲ್ಲೂಕು ಆಡಳಿತ ಮನವಿ ಮಾಡಿದೆ.


ಮತ್ತೊಬ್ಬರು ಹೊಂಗನೂರು ಮತ್ತು ಸಾತನೂರು ರಸ್ತೆಯಲ್ಲಿರುವ ಗೋಪಿ ಕ್ಲಿನಿಕ್ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಇವರು ಹೊಂಗನೂರಿನಲ್ಲಿ ಅಷ್ಟೆ ಅಲ್ಲ, ಚನ್ನಪಟ್ಟಣ ಸಾತನೂರು ರಸ್ತೆಯಲ್ಲಿಯೂ ಕ್ಲಿನಿಕ್ ತೆರೆದು ಅಲ್ಲಿ ತಪಾಸಣೆ ಮಾಡಿದ್ದಾರೆ. ಈ ಚಿಕಿತ್ಸಾಲಯಗಳಲ್ಲಿ ಯಾರು ಚಿಕಿತ್ಸೆ ಪಡೆದಿದ್ದರೋ ಅವರೂ ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.


ಚನ್ನಪಟ್ಟಣ ಬಡಾವಣೆಯ ಎರಡನೇ ತಿರುವಿನಲ್ಲಿರುವ ಪುಣ್ಯ ನರ್ಸಿಂಗ್ ಹೋಂ ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ರೋಗಿಗಳನ್ನು ತಪಾಸಣೆ ಮಾಡಿದ್ದು, ಅವರೆಲ್ಲರೂ ತಪ್ಪದೆ ಕೋವಿಡ್ ತಪಾಸಣೆಗೆ ಒಳಗಾಗಬೇಕಾಗಿದೆ. ಒಂದು ಅಂದಾಜಿನ ಪ್ರಕಾರ ಕಳೆದ ೧೫ ದಿವಸಗಳಿಂದೀಚೆಗೆ ಸಾವಿರಕ್ಕೂ ಹೆಚ್ಚು ರೋಗಿಗಳು ಅಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.


ಈ ಇಬ್ಬರು ವೈದ್ಯರು ಮತ್ತು ವೃದ್ದರಿಗೆ ಕೋವಿಡ್ ಸೋಂಕು ತಗುಲಿರುವುದು ನಗರ ಪ್ರದೇಶದ ಹಾಗೂ ಗ್ರಾಮಾಂತರ ಪ್ರದೇಶದ ಅನೇಕ ಜನರಿಗೆ ಆತಂಕ ಶುರುವಾಗಿದೆ. ಪುಣ್ಯ ಆಸ್ಪತ್ರೆಯ ವೈದ್ಯರು ತಮ್ಮ ಆಸ್ಪತ್ರೆಯಲ್ಲೇ ಎಲ್ಲಾ ವೈದ್ಯಕೀಯ ವ್ಯವಸ್ಥೆ ಇರುವ ಕೋವಿಡ್ ವಾರ್ಡ್ ಇದ್ದು ಅಲ್ಲೇ ಚಿಕಿತ್ಸೆ ಪಡಯುತ್ತಿದ್ದಾರೆ. ಗೋಪಿ ಕ್ಲಿನಿಕ್ ನ ವೈದ್ಯರನ್ನು ಹಾಗೂ ರಾಘವೇಂದ್ರ ಬಡಾವಣೆಯ ವೃದ್ದರನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑