Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಇಂದು 31 ಪ್ರಕರಣ ವರದಿ

Posted date: 23 Jul, 2020

Powered by:     Yellow and Red

ಕೊರೋನಾ: ಇಂದು 31 ಪ್ರಕರಣ ವರದಿ

ರಾಮನಗರ:ಜು/23/20/ಗುರುವಾರ. ಜಿಲ್ಲೆಯಲ್ಲಿ 31 ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.


*ಒಟ್ಟು ಪ್ರಕರಣ:* ಇಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಚನ್ನಪಟ್ಟಣ 10, ಕನಕಪುರ 8, ಮಾಗಡಿ 3 ಹಾಗೂ ರಾಮನಗರ 10 ಪ್ರಕರಣಗಳು ಸೇರಿವೆ. ಇದುವರೆಗೆ ಜಿಲ್ಲೆಯಲ್ಲಿ 612 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ 122, ಮಾಗಡಿ 179, ಚನ್ನಪಟ್ಟಣ 140 ಮತ್ತು ರಾಮನಗರದ 171 ಪ್ರಕರಣಗಳು ಸೇರಿವೆ.


*ಸಕ್ರಿಯ ಪ್ರಕರಣ:* ಜಿಲ್ಲೆಯಲ್ಲಿ ದಾಖಲಾಗಿರುವ 612 ಪ್ರಕರಣಗಳ ಪೈಕಿ 310 ಜನರು ಗುಣಮುಖರಾಗಿದ್ದರೆ, ಇನ್ನೂ 289 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕನಕಪುರ 29, ಮಾಗಡಿ 76, ಚನ್ನಪಟ್ಟಣ 93 ಮತ್ತು ರಾಮನಗರದ 91 ಪ್ರಕರಣಗಳು ಸೇರಿವೆ.


*ಗುಣಮುಖ* : ಜಿಲ್ಲೆಯಲ್ಲಿ ಈವರೆಗೆ ಒಟ್ಟು 310 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಕನಕಪುರ 92, ಮಾಗಡಿ 94, ಚನ್ನಪಟ್ಟಣ 47 ಮತ್ತು ರಾಮನಗರದ 77 ಜನರು ಸೇರಿದ್ದಾರೆ.


*ಸಾವು* : ಮಾಗಡಿ ತಾಲ್ಲೂಕಿನಲ್ಲಿ 9 ಜನ, ಕನಕಪುರ ತಾಲ್ಲೂಕಿನಲ್ಲಿ ಒಬ್ಬರು ಹಾಗೂ ರಾಮನಗರ ತಾಲ್ಲೂಕಿನಲ್ಲಿ 3 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 13 ಮಂದಿ ನಿಧನರಾಗಿದ್ದಾರೆ.


*ಜಿಲ್ಲಾ ಆರೋಗ್ಯ ಇಲಾಖೆ ವರದಿ:* ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಗುರುವಾರ (ಜುಲೈ 23) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 14,221 (ಹೊಸದಾಗಿ ಇಂದಿನ 195 ಸೇರಿ). ಒಟ್ಟು 5,576 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 182 ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 4,326 ಕ್ಕೆ ಏರಿಕೆಯಾಗಿದೆ.


*ಜ್ವರ ತಪಾಸಣೆಃ* ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 28 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 3,884 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.


*ಕ್ವಾರಂಟೈನ್* ಒಟ್ಟು 8 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್‌ನ ಸಂಖ್ಯೆ 176 ಕ್ಕೆ ಇಳಿಕೆಯಾಗಿದೆ.


*ಮಾದರಿ ಸಂಗ್ರಹಃ* ಇಂದು ಹೊಸದಾಗಿ 195 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 14,771 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 12,394 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ 195 ಬಾಕಿ ವರದಿ ಸೇರಿ ಒಟ್ಟು 1,504 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑