Tel: 7676775624 | Mail: info@yellowandred.in

Language: EN KAN

    Follow us :


ಹನೂರು ಪಟ್ಟಣ ಪಂಚಾಯತಿಯಲ್ಲಿ ಇ-ಸ್ವತ್ತು ಭ್ರಷ್ಟಾಚಾರ. ಇಬ್ಬರ ತಲೆದಂಡ

Posted date: 03 Aug, 2020

Powered by:     Yellow and Red

ಹನೂರು ಪಟ್ಟಣ ಪಂಚಾಯತಿಯಲ್ಲಿ ಇ-ಸ್ವತ್ತು ಭ್ರಷ್ಟಾಚಾರ. ಇಬ್ಬರ ತಲೆದಂಡ

ಹನೂರು:ಆ/೦೩/೨೦/ಸೋಮವಾರ.

ಖಾತೆ ಬದಲಾವಣೆ, ಇ-ಸ್ವತ್ತು ವ್ಯವಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಹನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಜಯಲಕ್ಷ್ಮಿ ರವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಯವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ಶಿಸ್ತು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳು ಶಿಪಾರಸ್ಸು ಮಾಡಿದ್ದು, ಉಳಿದ ಆರು ಮಂದಿಗಳಾದ ನಿರ್ಗಮಿತ ಮುಖ್ಯಾಧಿಕಾರಿ ಎಸ್.ಡಿ.ಮೋಹನ ಕೃಷ್ಣ, ಕಿರಿಯಆರೋಗ್ಯ ನಿರೀಕ್ಷಕ ಚೇತನ್ ಕುಮಾರ್ ಕಿರಿಯ ಅಭಿಯಂತರ ಶಿವಶಂಕರ್ ಆರಾಧ್ಯ, ದ್ವಿತೀಯ ದರ್ಜೆ ಸಹಾಯಕ ಮಾದೇಶ, ಸ್ಯಾನಿಟರಿ ಸೂಪರ್ ವೈಸರ್ ಮನಿಯಾ, ಕರ ವಸೂಲಿಗಾರ ನಂಜುಂಡ ಶೆಟ್ಟಿ ಸೇರಿದಂತೆ ಈ ಆರು ಜನರ ವಿರುದ್ದ ಅಮಾನತ್ತಿನ ತೂಗುಗತ್ತಿ ತೂಗುತ್ತಿದ್ದು ಈ ಎಲ್ಲರ ವಿರುದ್ದ ಕೆ.ಸಿ.ಎಸ್.(ಸಿಸಿಎ) ೧೯೬೭ ರ ನಿಯಮ ೧೧ ರಡಿಯಂತೆ ಅನುಬಂಧ : ೧ ರಿಂದ ೪ ರವರೆಗೆ ವಿವರವಾದ ಕರಡು ದೋಷಾರೋಪಣಾ ಪಟ್ಟಿ ಹಾಗೂ ದೃಢೀಕೃತ ಅನುಬಂಧ-೩ ರ ದಾಖಲೆಗಳನ್ನು ಕಳುಹಿಸಿಕೊಡಲು ಡಿಸಿಗೆ ಆದೇಶಿಸಿದ್ದಾರೆ.


ಹನೂರು ಪಟ್ಟಣದ ಹಿರಿಯ ಪತ್ರಕರ್ತರೊಬ್ಬರು ಅಕ್ರಮಕ್ಕೆ ಪೂರಕವಾದ ಅಧಿಕೃತ, ದೃಢೀಕೃತ ೫೪ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದ ಮೇರೆಗೆ ತನಿಖೆ ಕೈ ಗೊಂಡಾಗ ಅಕ್ರಮ ಖಾತಾ ಬದಲಾವಣೆ, ಇ-ಸ್ವತ್ತು ಸೇರ್ಪಡೆ ಬಗ್ಗೆ ಈ ಎಲ್ಲರೂ ಸರ್ಕಾರಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಸಕ್ರಮವಾಗದ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಇಲ್ಲದ ಎಕರೆಗಟ್ಟಲೆ ಜಮೀನುಗಳಿಗೆ ನೇರ ಹಾಗೂ ಅಕ್ರಮವಾಗಿ ಖಾತೆ ವಹಿಗೆ ದಾಖಲಿಸಿಕೊಂಡು ಇ-ಆಸ್ತಿ  ನಮೂನೆ-೩ ಅನ್ನು ವಿತರಿಸಿರುವುದು ತನಿಖೆ ಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿಯವರು ಈ ಎಂಟು ಮಂದಿ ಅಧಿಕಾರಿ, ನೌಕರರ ವಿರುದ್ದಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಿ ಪೌರಾಡಳಿತ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.


ಮಧ್ಯವರ್ತಿಗಳ ಅಡ್ಡೆಯಾಗಿದ್ದ ಹನೂರು ಪಟ್ಟಣ ಪಂಚಾಯ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ದುರಾಡಳಿತ ಅಕ್ರಮ ಅವ್ಯವಹಾರಗಳು ನಡೆದು ಪಂಚಾಯ್ತಿಗೆ ಕೋಟ್ಯಾಂತರ ರೂ ನಷ್ಟವಾಗಿರುವ ಬಗ್ಗೆ ನೀಡಿರುವ ಪ್ರಥಮ ದೂರಿನ ಬಗ್ಗೆ ವಿಳಂಬವಾಗಿ ಕೈಗೊಂಡ ಕ್ರಮ ಇದಾಗಿದ್ದು ದೂರು ಸಲ್ಲಿಕೆಯ ನಂತರವೂ ಗಣನೆಗೆ ತೆಗೆದು ಕೊಳ್ಳದೆ ನಡೆಸಿರುವ ಇನ್ನೂ ನೂರಾರು ಪ್ರಕರಣಗಳ ಬಗ್ಗೆ ಹತ್ತು ಹಲವಾರು ದೂರುಗಳು ಸಲ್ಲಿಕೆಯಾಗಿದ್ದು ಅವುಗಳ ವಿರುದ್ದವೂ ತನಿಖೆ ಕುಂಟುತ್ತಾ ಸಾಗಿದ್ದು ಜಿಲ್ಲಾ ನಗರಾಭಿವೃದ್ದಿ ಕೋಶಾಧಿಕಾರಿಗಳ ಮೆದು ಧೋರಣೆ ಹಾಗೂ ಆರೋಪಿ ಗಳನ್ನು ರಕ್ಷಿಸುವ ಹುನ್ನಾರವಿರಬಹುದೆಂಬ ಸಂಶಯ ನಾಗರೀಕರನ್ನು ಕಾಡತೊಡಗಿದೆ.


ಇದೀಗ ಜಿಲ್ಲಾಧಿಕಾರಿ ಕಛೇರಿಯಿಂದ ಬಂದ ತಜ್ಞರು ಪಟ್ಟಣ ಪಂಚಾಯತಿಯ ಸಿಸಿ ಟಿವಿ ಪುಟೇಜ್‌ಗಳನ್ನು ಸಂಗ್ರಹಿಸಿದ್ದು ಅದರಲ್ಲಿ ಸೆರೆಯಾಗಿರುವ ದಿನ ಬೆಳಗಾದರೆ ಪಟ್ಟಣ ಪಂಚಾಯತಿ ಕಚೇರಿಯನ್ನೆ ಅಡ್ಡೆಯನ್ನಾಗಿ ಮಾಡಿಕೊಂಡು ಎಲ್ಲಾ ವಿಭಾಗಗಳಲ್ಲೂ ಸಂಚರಿಸಿ ಅಕ್ರಮ ಅವ್ಯವಹಾರಗಳಲ್ಲಿ ತೊಡಗಿದ್ದ ಮದ್ಯವರ್ತಿಗಳ ಚಲನವಲನಗಳನ್ನು ಪತ್ತೆಹಚ್ಚಿ ಅವರುಗಳ ವಿರುದ್ದವೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಜರೂರತ್ತಿದೆ.

ಪೌರಾಡಳಿತದ ಈ ಕ್ರಮದಿಂದಾಗಿ ಖಾತೆ ಬದಲಾವಣೆ ಹಾಗೂ ಇ ಆಸ್ತಿ ಪರಿವರ್ತನೆಗೆ ಮಧ್ಯವರ್ತಿ ಗಳ ಮೂಲಕ ಯತಾರ್ಥವಾಗಿ ಲಕ್ಷಾಂತರ ರೂಪಾ ಯಿಗಳನ್ನು ಲಂಚವಾಗಿ ಸ್ವೀಕರಿಸುವ ಇವರಲ್ಲಿ ಡಿ ಗ್ರೂಪ್ ನೌಕರನೇ ಸ್ಥಳ ಪರಿಶೀಲನೆ ಮಾಡಿ ಇಂತಿಷ್ಟು ಎಂದು ಶುಲ್ಕ ನಮೂದಿಸಿ ಖಾತೆ ಅಥವಾ ಈ ಸ್ವತ್ತು ಮಾಡಬಹುದೆಂದು ಶರಾ ಬರೆಯುವಾಗಿನಿಂದ ಆರಂಭಗೊಳ್ಳುವ ಭ್ರಷ್ಟಾಚಾರ ಅಭಿವೃದ್ಧಿ ಶುಲ್ಕ ಪಾವತಿಸಿರುವ ರಶೀದಿಗಳು ಇ-ಆಸ್ತಿ ನೀಡುವ ಕ್ರಮವಿ ಲ್ಲದ, ಪ್ರಾಧಿಕಾರದಿಂದ ಅನುಮೋದನೆಯಾಗಿರುವ ನಕ್ಷೆಯನ್ನಾಗಲಿ ಪರಿಗಣಿಸದ ಮುಖ್ಯಾಧಿಕಾರಿ, ನೌಕರವರ್ಗ ಪಂಚಾಯಿತಿಗೆ ಬರುವ ಆದಾಯದ ಬಗ್ಗೆ ಗಮನಿಸದೆ ಈ ಬ್ರಹ್ಮಾಂಡ ಭ್ರಷ್ಟಾ ಚಾರ ಮಾಡಲಾಗಿದೆ.


ಖಾತೆ ಬದಲಾವಣೆ ಪ್ರಕರಣಗಳಲ್ಲಿ ಪಂಚಾಯತಿ ಮುಖ್ಯಾಧಿಕಾರಿಗಳ ಸಹಿಗಳನ್ನೇ ಪೋರ್ಜರಿ ಮಾಡಿರುವ ಪ್ರಕರಣಗಳು ನಡೆದಿವೆ. ಖಾತಾ ಶಾಖೆಯ ಕೆಲ ಸಿಬ್ಬಂದಿಗಳು ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಸುಲಭವಾಗಿ ನೊಂದಣಿ ಯಾಗಲು ಅನುಕೂಲ ವಾಗುವಂತೆ ನಕಲಿ ಸಂಖ್ಯೆ ಬರೆದು ಪಂಚಾಯತಿ ಮೂಲ ದಾಖಲೆಯಲ್ಲಿ ನಮೂದಿಸದೆ ಕೇವಲ ನಮೂನೆ ೩ ನ್ನು ಮಾತ್ರ ಭರ್ತಿ ಮಾಡಿ ಮುಖ್ಯಾಧಿಕಾರಿಯ ಸೀಲನ್ನು ದುರ್ಬಳಕೆ ಮಾಡಿಕೊಂಡು ಪೋರ್ಜರಿ ಸಹಿ ಅಥವಾ ಮೂಲ ಸಹಿಯನ್ನು ಟ್ರೇಸ್ ಮಾಡಿ ಅಂಟಿಸಿ ನೀಡಿರುವ ಅಕ್ರಮಗಳು ಲೆಕ್ಕವಿಲ್ಲದಷ್ಟು ನಡೆದಿದ್ದು ಉನ್ನತ ಮಟ್ಟದ ತನಿಖೆಯಿಂದ ಅನೇಕ ಪ್ರಕರಣಗಳು ಬೆಳಕಿಗೆ ಬರಲಿದ್ದು ಈ ಸಂಬಂಧ ಮೇಲಧಿಕಾರಿಗಳು ಕಾರ್ಯ ಪ್ರವೃತ್ತರಾಗುವರೇ ಎಂದು ಕಾದು ನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑