Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್ ಪರೀಕ್ಷೆಯೇ ಮಾಡಿಸಿಲ್ಲಾ ಪಾಸಿಟಿವ್ ಮೆಸ್ಸೇಜ್ ಬಂದಿದೆ !? ಶಂ(ಸೋ)ಕಿತನ ಸಂಬಂಧಿಗಳಿಂದ ಆರೋಪ

Posted date: 03 Aug, 2020

Powered by:     Yellow and Red

ಕೋವಿಡ್ ಪರೀಕ್ಷೆಯೇ ಮಾಡಿಸಿಲ್ಲಾ ಪಾಸಿಟಿವ್ ಮೆಸ್ಸೇಜ್ ಬಂದಿದೆ !? ಶಂ(ಸೋ)ಕಿತನ ಸಂಬಂಧಿಗಳಿಂದ ಆರೋಪ

ಚನ್ನಪಟ್ಟಣ:ಆ/03/20/ಸೋಮವಾರ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಎರಡು ತಿಂಗಳಿಂದೀಚೆಗೆ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲ್ಲೂಕಿನಲ್ಲೂ 300 ರ ಗಡಿಯತ್ತ ಸಾಗುತ್ತಿದೆ. ಈ ನಡುವೆ ತಾಲೂಕು ಆಸ್ಪತ್ರೆ ವೈದ್ಯರ ಒಂದು ಯಡವಟ್ಟು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪರೀಕ್ಷೆ ಮಾಡಿಸದೇ ನಿಮಗೆ ಪಾಸಿಟಿವ್ ಬಂದಿದೆ ಎಂದು ಹೇಳಿ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ಸಂಬಂಧಿಸಿದ ವೈದ್ಯರೇ ಆಂತರಿಕ ತನಿಖೆ ನಡೆಸಿ ಸತ್ಯ ಬಿಚ್ಚಿಡಬೇಕಾಗಿದೆ.


ಈಗಾಗಲೇ ಕೇವಲ ಎರಡು ತಿಂಗಳಲ್ಲಿ ಸಾವಿರ ಗಡಿ ದಾಟಿರೋ ಕೊರೋನಾ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರು ಮಾಡಿರೋ

ಯಡವಟ್ಟು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಚನ್ನಪಟ್ಟಣ ನಗರದ ಮಂಡಿಪೇಟೆ ನಿವಾಸಿಯ ವೃದ್ದರೊಬ್ಬರು, ಜುಲೈ 29 ಕ್ಕೆ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಮನೆ ವಿಳಾಸ, ಫೋನ್ ನಂಬರ್ ಕೊಟ್ಟು ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಸಂಪೂರ್ಣ ವಿಳಾಸ ದಾಖಲಿಸಿಕೊಂಡು ಟೆಸ್ಟಿಂಗ್ ಕಿಟ್ ನೀಡಿದ್ದಾರೆ. ಆದರೆ ಈ ವೇಳೆ ಮನೆಯಿಂದ ಪೋನ್ ಕಾಲ್ ಬಂತು ಅಂತಾ ಅವರು ಪರೀಕ್ಷೆ ಮಾಡಿಸಿಕೊಳ್ಳದೇ, ವೈದ್ಯರಿಗೆ ಮಾಹಿತಿಯನ್ನೂ ನೀಡದೆ ಟೆಸ್ಟಿಂಗ್ ಕಿಟ್ ಸಮೇತ ಮನೆಗೆ ವಾಪಾಸ್ ಹೋಗಿರುವುದಾಗಿ ವೃದ್ದರ ಸಂಬಂಧಿ ಜಿಲಾನ್ ಎಂಬುವರು ಹೇಳುತ್ತಾರೆ. ಆದರೆ ನಿನ್ನೆ ಅವರ ಮೊಬೈಲ್ ನಂಬರ್ ಗೆ ಪಾಸಿಟಿವ್ ಬಂದಿದೆ ಎಂದುಮೆಸೆಜ್ ಬಂದಿದೆ. ಅಲ್ಲದೆ ತಾಲೂಕು ಆಸ್ಪತ್ರೆಯಿಂದಲೂ ಕೂಡ ನಿಮಗೆ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರೋ ಕುಟುಂಬ ನಾವು ಪರೀಕ್ಷೆ ಮಾಡಿಸಿಕೊಳ್ಳದೇ ಹೇಗೆ ಪಾಸಿಟಿವ್ ವರದಿ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.  


ಶಂಕಿತ ವೃದ್ದರ ಸಂಬಂಧಿ ಜೀಲಾನ್ ಹೇಳಿಕೆ ಪ್ರಕಾರ ನಾವು ಪರೀಕ್ಷೆ ಮಾಡಿಸಿಕೊಂಡಿಲ್ಲ,

ನೀವು ಕೊಟ್ಟ ಟೆಸ್ಟ್ ಕಿಟ್ ನಮ್ಮ ಬಳಿಯೇ ಇದೆ. ಹೇಗೆ ಪಾಸಿಟಿವ್ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪರೀಕ್ಷೆ ಮಾಡಿಸಿಕೊಳ್ಳಲು ಕೊಟ್ಟಿದ್ದ ಕಿಟ್ ಅನ್ನು ನಿನ್ನೆಯ ದಿನವೇ 

ವೈದ್ಯರು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಾಪಾಸ್ ಪಡೆದಿದ್ದಾರೆ. ಜುಲೈ  29 ರಂದು 33 ಜನರ ಸ್ಯಾಂಪಲ್ ಪಡೆದಿರುವುದಾಗಿ ಹೇಳುತ್ತಿರುವ ಆಸ್ಪತ್ರೆ ವೈದ್ಯರು, ಈ ಟೆಸ್ಟ್ ಕಿಟ್ ಅನ್ನ ಲ್ಯಾಬ್ ಗೆ ಕಳುಹಿಸದೇ ವರದಿ ಬರಲು ಹೇಗೆ ಸಾಧ್ಯ ? ಟೆಸ್ಟ್ ಕಿಟ್ ಇವರ ಬಳಿಯೇ ಇದ್ದಾಗ ಲ್ಯಾಬ್ ಗೆ ಕಳುಹಿಸಿದ್ದ ಟೆಸ್ಟ್ ಕಿಟ್ ಯಾರದ್ದು ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಆ ಟೆಸ್ಟ್ ಕಿಟ್ ಬೇರೆ ಎಲ್ಲೂ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತದೆ.


ಅಲ್ಲದೆ ಅದರ ಮೇಲೆ ವ್ಯಕ್ತಿಯ ಹೆಸರು ನಮೂದಿಸಲಾಗಿರುತ್ತದೆ. ಹೀಗಿದ್ದಾಗ ಟೆಸ್ಟ್ ಗೆ ಕಳುಹಿಸದೇ ಪಾಸಿಟಿವ್ ವರದಿ ಬರಲು ಹೇಗೆ ಸಾಧ್ಯ. ಇನ್ನು ಇಷ್ಟೆಲ್ಲ ಗೊಂದಲಗಳು ಮೂಡಿದ ಮೇಲೆ ಪತ್ರಕರ್ತರು, ವೈದ್ಯರು ಮತ್ತು ಸಂಬಂಧಿಕರ ಎದುರೇ ಆ್ಯಂಟಿಝೆನ್ ಮೂಲಕ ಮತ್ತೊಮ್ಮೆ ಶಂಕಿತರಿಗೆ ಪರೀಕ್ಷೆ ಮಾಡಲಾಯಿತು. ಆ ವರದಿಯಲ್ಲಿ ನೆಗಟೀವ್ ಎಂದು ಬಂತು. ಇನ್ನು ಈ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ವಿಜಯನರಸಿಂಹ ರವರು ನಮ್ಮದು ಇದರಲ್ಲಿ ತಪ್ಪಿಲ್ಲ, ಬೇಕಾದರೆ ತನಿಖೆ ಮಾಡಲಿ ಎಂಬ ಹಾರಿಕೆಯ ಉತ್ತರ ನೀಡಿದರು.


ಒಟ್ಟಾರೆ ತಾಲೂಕು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಮಾಡುತ್ತಿರುವ ಯಡವಟ್ಟಿನಿಂದ ಜನ ಸಾಮಾನ್ಯರು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದೆ. ಟೆಸ್ಟ್ ಮಾಡಿಸಿಕೊಳ್ಳದೇ ಇರುವವರಿಗೂ ಪಾಸಿಟಿವ್

ಬಂದಿದೆ ಎಂದು ವರದಿ ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಳು ಗಮನಹರಿಸಬೇಕಿದೆ. ಕೋವಿಡ್ ವಿಷಯದಲ್ಲಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ತಾಲ್ಲೂಕು ಆಡಳಿತ ಮತ್ತು ವೈದ್ಯರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಕಣ್ತಪ್ಪಿನಿಂದಾದ ಒಂದು ಎಡವಟ್ಟು ಕಪ್ಪು ಚುಕ್ಕೆಯನ್ನಾಗಿಸಿದೆ.


--ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑