Tel: 7676775624 | Mail: info@yellowandred.in

Language: EN KAN

    Follow us :


ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ

Posted date: 11 Aug, 2020

Powered by:     Yellow and Red

ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ

ರಾಮನಗರ:ಆ/10/20/ಸೋಮವರ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನೆನ್ನೆ ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಕೋವಿಡ್ ಸಂಕಷ್ಟ ದಿಂದಾಗಿ ಪೂರ್ವ ನಿಗದಿತ ಪರೀಕ್ಷೆ ಮುಂದೂಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇವೆಲ್ಲದರ ನಡುವೆ ರಾಜ್ಯದಲ್ಲಿ ಒಟ್ಟಾರೆ ಶೇ.71.80 ರಷ್ಟು ಫಲಿತಾಂಶ ಬಂದಿದೆ.

ಒಟ್ಟು 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.


ಜಿ.ಕೆ.ಅಮೋಘ್, ಚಿರಾಯು, ನಿಖಿಲೇಶ್, ಮಂಡ್ಯದ ನೀರಜ್ ಕಡ್ಡಿ, ಸುಳ್ಯದ ಅನುಷ್, ಚಿಕ್ಕಮಗಳೂರಿನ ತನ್ಮಯ್ ೬೨೫ ಅಂಕಗಳನ್ನು ಗಳಿಸಿ ಟಾಪರ್‌ಗಳಾಗಿದ್ದಾರೆ.

ಈ ಬಾರಿ ಎ, ಬಿ, ಸಿ ಎಂದು ಜಿಲ್ಲೆಗಳ ಫಲಿತಾಂಶವನ್ನು ವರ್ಗೀಕರಿಸಲಾಗಿದೆ. ೧೧ ವಿದ್ಯಾರ್ಥಿಗಳು ೬೨೪ ಅಂಕ ಪಡೆದಿದ್ದರೆ, ೪೩ ವಿದ್ಯಾರ್ಥಿಗಳು ೬೨೩ ಅಂಕ ಪಡೆದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನವನ್ನು, ಬೆಂಗಳೂರು ಗ್ರಾಮಾಂತರ, ದ್ವಿತೀಯ ಸ್ಥಾನವನ್ನು ಮಧುಗಿರಿ ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ಈ ಸಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಮನಗ ಜಿಲ್ಲೆಯಿ ೮ ನೆಯ ಸ್ಥಾನಕ್ಕೆ ತೃಪ್ತಿಗೊಂಡಿದೆ. ಕಳೆದ ಸಾರಿ ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿತ್ತು. ಈ ೫ ಸ್ಥಾನ ಹಿಂದಕ್ಕೆ ತಳ್ಳಲ್ಪಟ್ಟಿದೆ.


*ಚನ್ನಪಟ್ಟಣ ತಾಲ್ಲೂಕು ಜಿಲ್ಲೆಗೆ ಪ್ರಥಮ:*

ಈ ಸಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕನಕಪುರ ಎರಡನೆಯ ಸ್ಥಾನ ಗಳಿಸಿದೆ. ಮಾಗಡಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಜಿಲ್ಲಾ ಕೇಂದ್ರ ಸ್ಥಾನವಾದ ರಾಮನಗರ ತಾಲ್ಲೂಕು ೪ ನೇ ಸ್ಥಾನಕ್ಕೆ ತೃಪ್ತಿಹೊಂದಿದೆ.

ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾಗಡಿ ತಾಲ್ಲೂಕು ಪ್ರಥಮ ಸ್ಥಾನವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಗ್ರೇಡ್ ವಾರು ಪಡೆದಿರುವ ಫಲಿತಾಂಶದಂತೆ ಚನ್ನಪಟ್ಟಣ ಮತ್ತು ಮಾಗಡಿ ತಾಲ್ಲೂಕುಗಳು ‘ಎ’ ಗ್ರೇಡ್ ಪಡೆದುಕೊಂಡಿದ್ದರೆ, ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಬಿ’ ಗ್ರೇಡ್ ಅನ್ನು ಪಡೆದುಕೊಂಡಿವೆ.

ಕೊರೊನಾ ಅಡೆತಡೆಯಿಂದ ಈ ಸಾರಿಯ ಫಲಿತಾಂಶ ಸಾಕಷ್ಟು ಕುಸಿಯಬಹುದು ಎಂಬ ಅನ್ನಿಸಿಕೆ ಇತ್ತು. ಆದರೆ ಫಲಿತಾಂಶ ಪ್ರಕಟಣೆಯ ನಂತರ ಆ ರೀತಿಯ ಲೆಕ್ಕಾಚಾರ ತಪ್ಪು ಎನ್ನಿಸಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑