Tel: 7676775624 | Mail: info@yellowandred.in

Language: EN KAN

    Follow us :


ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ರೈತಸಂಘ

Posted date: 11 Aug, 2020

Powered by:     Yellow and Red

ನಮ್ಮ ಭೂಮಿ, ನಮ್ಮ ತಾಯಿ ಮಾರಾಟಕ್ಕಿಲ್ಲ. ರೈತಸಂಘ

ಚನ್ನಪಟ್ಟಣ:ಆ/11/20/ಮಂಗಳವಾರ. ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ  ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ ದಿಂದ *'ನಮ್ಮ ಭೂಮಿ, ನಮ್ಮ ತಾಯಿ ಎರಡೂ ಮಾರಾಟಕ್ಕಿಲ್ಲ’* ಎಂಬ ಹೋರಾಟಕ್ಕೆ ಚಾಲನೆ ನೀಡಲಾಯ್ತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ.ರಾಮು ಅವರು, ನಮ್ಮ ಭೂಮಿ ಮತ್ತು ನಮ್ಮ ತಾಯಿ ಈ ಎರಡೂ ಮಾರಾಟಕ್ಕಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರ ವಿವಿಧ ಷಡ್ಯಂತ್ರ ಮಾಡುವ ಮೂಲಕ ರೈತರ ಭೂಮಿ ಯನ್ನು ಕಿತ್ತುಕೊಳ್ಳುವ ಸಂಚು ನಡೆಸಿದೆ. ಇದಕ್ಕೆ ರೈತ ಸಂಘ ಅವಕಾಶ ನೀಡುವುದಿಲ್ಲ ಎಂದರು.

ರೈತ ಸಂಘ ಪ್ರತಿ ಗ್ರಾಮದಲ್ಲಿಯೂ ನಮ್ಮ ತಾಯಿ, ನಮ್ಮ ಭೂಮಿ ಮಾರಾಟಕ್ಕಿಲ್ಲ ಎಂಬ ನಾಮಫಲಕ ಹಾಕಿ ಹೋರಾಟ ರೂಪಿಸುತ್ತಿದೆ. ರೈತರ ಭೂಮಿ ರಕ್ಷಿಸುವುದು ಈ ಹೋರಾಟದ ಉದ್ದೇಶವಾಗಿದೆ ಎಂದರು.


ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಮಲ್ಲಯ್ಯ ಮಾತನಾಡಿ, ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರುವ ಹಿನ್ನೆಲೆಯಲ್ಲಿ ರೈತರ ಭೂಮಿಯನ್ನು ದೋಚಲು ಹೊರಟಿದೆ. ಭೂ ಕಾಯಿದೆಗೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿ ತಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.


ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ರೈತ ಸಂಘದ ಜಿಲ್ಲಾ ವಿಭಾಗೀಯ ಸಂಚಾಲಕ ಸೋಮಶೇಖರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಗುರುಲಿಂಗಯ್ಯ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಚ್. ಕೃಷ್ಣಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ರಾಮೇಗೌಡ, ವಿರುಪಾಕ್ಷಿಪುರ ಹೋಬಳಿ ಘಟಕದ ಅಧ್ಯಕ್ಷ ಮರೀಗೌಡ, ತಾಲ್ಲೂಕು ಸಂಚಾಲಕ ರಾಜಣ್ಣ ಮುಂತಾದವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑