Tel: 7676775624 | Mail: info@yellowandred.in

Language: EN KAN

    Follow us :


ಬ್ರಾಹ್ಮಣ ಸಮುದಾಯಕ್ಕೆ ತಾಲ್ಲೂಕು ಕಛೇರಿಯಲ್ಲಿ ಸೆ: 10 ರಿಂದ ಜಾತಿ ಪ್ರಮಾಣ ಪತ್ರ ಲಭ್ಯ. ಸಚ್ಚಿದಾನಂದಮೂರ್ತಿ

Posted date: 31 Aug, 2020

Powered by:     Yellow and Red

ಬ್ರಾಹ್ಮಣ ಸಮುದಾಯಕ್ಕೆ ತಾಲ್ಲೂಕು ಕಛೇರಿಯಲ್ಲಿ ಸೆ: 10 ರಿಂದ ಜಾತಿ ಪ್ರಮಾಣ ಪತ್ರ ಲಭ್ಯ. ಸಚ್ಚಿದಾನಂದಮೂರ್ತಿ

ಚನ್ನಪಟ್ಟಣ:ಆ/30/20/ಸೋಮವಾರ. ಬ್ರಾಹ್ಮಣ ಸಮುದಾಯಕ್ಕೆ  ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ಇದು ವಿಳಂಬಗೊಂಡಿದೆ. ಸೆ.೧೦ ರಿಂದ ನಾಡಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಲಭ್ಯವಾಗಲಿದೆ. ತುರ್ತು ಅಗತ್ಯವಿದ್ದಲ್ಲಿ ಕೈಬರಹದಲ್ಲಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದರು.


ತಾಲೂಕಿನ ಮತ್ತೀಕೆರೆ ಸಮೀಪ ಇರುವ ಶಿವಳ್ಳಿ ರೆಸ್ಟೋರೆಂಟ್‌ನಲ್ಲಿ ಭೇಟಿಯಾದ ತಾಲೂಕು ಬ್ರಾಹ್ಮಣಸಭಾ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಟಲ್‌ಜಿ  ಜನಸ್ನೇಹಿ ಕೇಂದ್ರ ಯೋಜನೆಯ ರಾಜ್ಯ ನಿರ್ದೇಶಕರನ್ನು ಭೇಟಿಮಾಡಿ ಚರ್ಚಿಸಿದ್ದು, ತಾಂತ್ರಿಕ ಪ್ರಕ್ರಿಯೆ ಪೂರ್ಣ ಗೊಳ್ಳದ ಹಿನ್ನೆಲೆಯಲ್ಲಿ ಪ್ರಮಾಣಪತ್ರ ವಿತರಣೆ ಸಾಧ್ಯವಾಗಿಲ್ಲ. ಸೆ.೧೦ ಕ್ಕೆ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು ಬಳಿಕ ಪ್ರಮಾಣ ಪತ್ರ ನೀಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ ಎಂದು ತಿಳಿಸಿದರು.


*ಸಮಸ್ಯೆ ಅರಿವಿಗೆ ಬಂದಿದೆ:* ಬ್ರಾಹ್ಮಣ ಸಮುದಾಯ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆ ಏನೆಂಬುದು ಮಂಡಲಿ ಅಧ್ಯಕ್ಷನಾದ ಬಳಿಕ ನನ್ನ ಅರಿವಿಗೆ ಬಂದಿದೆ. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮಸ್ಯೆಯನ್ನು ತಿಳಿದು ಕೊಳ್ಳಲಾಗಿದೆ. ಮಂಡಲಿ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚ್ಚಿದಾನಂದ ಭರವಸೆ ನೀಡಿದರು.


ಕೊರೋನಾ ಲಾಕ್‌ಡೌನ್ ಸಮಯದಲ್ಲಿ ರಾಜ್ಯಾದ್ಯಂತ ೪೭ ಸಾವಿರ ಕಿಟ್ ಅನ್ನು ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ನೀಡಲಾಗಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಂಡಲಿಯ ಕಚೇರಿಯಲ್ಲಿ ನಿರಂತರವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ನೆರವು ನೀಡುವ ಕಾರ್ಯ ನಡೆಸಲಾಗುತ್ತಿದೆ. ಸರ್ಕಾರದ ಅನುದಾನದ ಜತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ನೆರವು ನೀಡುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು.


*ಆಡಳಿತ ತರಬೇತಿ ಯೋಜನೆ ಜಾರಿಗೆ:* 

ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಮೊದಲಾದ ಆಡಳಿತಾತ್ಮಕ ಪರೀಕ್ಷೆಗಳ ತರಬೇತಿ ಕೊಡಿಸುವ ಉದ್ದೇಶದಿಂದ ಚಾಣಕ್ಯ ಆಡಳಿತ ತರಬೇತಿ ಯೋಜನೆಯನ್ನು ಮಂಡಲಿಯು ಜಾರಿಗೆ ತಂದಿದ್ದು, ಉತ್ತಮ ತರಬೇತಿ ನೀಡುವ ಸಂಸ್ಥೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಪ್ರತಿ ಅಭ್ಯರ್ಥಿಗೆ ೭೫ ಸಾವಿರ ರೂ. ಖರ್ಚು ಬರಲಿದ್ದು, ಅಭ್ಯರ್ಥಿಗಳನ್ನು ಸಂಸ್ಥೆಯೇ ಪರೀಕ್ಷೆ ಮೂಲಕ ಆಯ್ಕೆಮಾಡಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಡಳಿ ವೆಚ್ಚವನ್ನು ಬರೆಸಿ ತರಬೇತಿ ಕೊಡಿಸಲಿದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.


*ಕಿರುಸಾಲ ಯೋಜನೆ:*

ಸಣ್ಣ ಪುಟ್ಟ ಗೃಹ ಉದ್ಯಮ ಮಾಡುತ್ತಿರುವ ಬ್ರಾಹ್ಮಣ ಸಮುದಾಯಕ್ಕೆ ನೆರವು ನೀಡುವ ಉದ್ದೇಶದಿಂದ ಕಿರು ಸಾಲ ಯೋಜನೆಯನ್ನು ಮಂಡಳಿ ಜಾರಿಗೆ ತಂದಿದೆ. 50 ಸಾವಿರ ರೂ. ಸಾಲ ನೀಡಲಿದ್ದು, ಈ ಸಾಲಕ್ಕೆ ಮಂಡಳಿಯ ವತಿಯಿಂದ 10 ಸಾವಿರ ಸಹಾಯಧನ ನೀಡಲಾಗುವುದು. ಈ ಯೋಜನೆಗೆ ಜಿಲ್ಲಾವಾರು ಫಲಾನುಭವಿಗಳನ್ನು ಆಯ್ಕೆಮಾಡಲಾಗುವುದು ಎಂದು ತಿಳಿಸಿದ ಅವರು, ಮಂಡಳಿಯ ಯೋಜನೆಗಳು ಅರ್ಹ ಬ್ರಾಹ್ಮಣರಿಗೆ ತಲುಪುವಂತೆ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.


*ಸಹಾಯವಾಣಿ ಸ್ಥಾಪನೆ:* ಜಿಲ್ಲೆಯ ಬ್ರಾಹ್ಮಣ ಸಮುದಾಯಕ್ಕೆ ಮಂಡಳಿಯ ಯೋಜನೆಗಳು ಹಾಗೂ ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಆರಂಭಿಸುವುದಾಗಿ ಸಚ್ಚಿದಾನಂದ ಮೂರ್ತಿ ತಿಳಿಸಿದರು. ಉಚಿತವಾಗಿ ಜಾಗ ನೀಡಿದ್ದೇ ಆದಲ್ಲಿ ಸಹಾಯವಾಣಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದರು.


*ತಾಲೂಕು ಬ್ರಾಹ್ಮಣ ಸಭಾದಿಂದ ಮನವಿ:*

ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿದ ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು, ತಾಲೂಕಿನಲ್ಲಿ ಗಾಯಿತ್ರಿ ಭವನ ನಿರ್ಮಾಣಕ್ಕೆ ನೆರವು, ಬ್ರಾಹ್ಮಣ ರುದ್ರಭೂಮಿ ಅಭಿವೃದ್ಧಿ ಹಾಗೂ ಅಪರಕರ್ಮ ಭವನ ನಿರ್ಮಾಣ ಮಾಡುವಂತೆ ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚ್ಚಿದಾನಂದ ಮೂರ್ತಿ ಸ್ಮಶಾನ ಮತ್ತು ಅಪರಕರ್ಮ ಭವನ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಮಯದಲ್ಲಿ ತಾಲೂಕಿನಲ್ಲಿ ಸಹಾಯವಾಣಿಗೆ ಜಾಗ ನೀಡುವುದಾಗಿ ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ನಿರ್ದೇಶಕಿ ವತ್ಸಲಾನಾಗೇಶ್, ವಕೀಲ ಮಧುಸೂದನ್, ತಾಲೂಕು ಬ್ರಾಹ್ಮಣಮಹಾಸಭಾ ಅಧ್ಯಕ್ಷ ರಾಮಪ್ರಸಾದ್, ಉಪಾಧ್ಯಕ್ಷ ರವಿಕುಮಾರ್ ಕಾರ್ಯದರ್ಶಿ ರಾಘವೇಂದ್ರ ಮಯ್ಯ, ಖಜಾಂಚಿ ಪಿ.ಹೊಯ್ಸಳ,  ಜಿಲ್ಲಾ ಬ್ರಾಹ್ಮಣ ಅರ್ಚಕರು ಮತ್ತು ಆಗಮಿಕರ ಸಂಘದ ಖಜಾಂಚಿ ನರಸಿಂಹ, ಉದ್ಯಮಿ ಬಿ.ವಿ.ಮಂಜುನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಇದೇ ವೇಳೆ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರನ್ನು ತಾಲೂಕು ಬ್ರಾಹ್ಮಣ ಸಭಾ ಪದಾಧಿಕಾರಿಗಳು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑